Annayya Serial: ಸೀನ - ಪಿಂಕಿ ಪ್ರಣಯ ಪ್ರಸಂಗ; ಬಯಲಾದದ್ದು ಶಿವಣ್ಣನ ಎದುರಿಗಾ?
Annayya Serial Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಮದುವೆ ಶಾಸ್ತ್ರ ನಡೆಯುತ್ತಿದೆ. ಇನ್ನೊಂದು ಕಡೆ ವೀರಭದ್ರನ ಕುತಂತ್ರ ಕೂಡ ನಡೆಯುತ್ತಿದೆ. ಈಗ ಶಿವು ಪಾತ್ರದಿಂದ ನಟ ವಿಕಾಶ್ ಉತ್ತಯ್ಯ ಅವರು ಹೊರಗಡೆ ಬಂದಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ಅಣ್ಣಯ್ಯ ಧಾರಾವಾಹಿ -
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ (Annayya Serial Kannada) ಧಾರಾವಾಹಿಯಲ್ಲಿ ಮದುವೆ ಶಾಸ್ತ್ರ ನಡೆಯುತ್ತಿದೆ. ಇನ್ನೊಂದು ಕಡೆ ವೀರಭದ್ರನ (Veerabhadra) ಕುತಂತ್ರ ಕೂಡ ನಡೆಯುತ್ತಿದೆ. ಈಗ ಶಿವು ಪಾತ್ರದಿಂದ ನಟ ವಿಕಾಶ್ ಉತ್ತಯ್ಯ ಅವರು ಹೊರಗಡೆ ಬಂದಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ಪರಶು ಮುಖವಾಡ ಕಳಚಿ ಬೀಳುತ್ತಾ
ಎಲ್ಲರ ಮುಂದೆ ಒಳ್ಳೆಯವನಂತೆ ನಟಿಸುತ್ತಿರುವ ಪರಶು ಮುಖವಾಡ ಕಳಚಿ ಬೀಳುತ್ತಾ ಅನ್ನೋ ಗೊಂದಲಗಳಿಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಮದುವೆ ಮಂಟಪಕ್ಕೆ ಮಗುವಿನೊಂದಿಗೆ ಮಹಿಳೆಯೊಬ್ಬಳು ಎಂಟ್ರಿ ಕೊಟ್ಟು, ಪರಶುನನ್ನು ಅಪ್ಪ ಎಂದು ಮಗು ಕರೆದಿದ್ದು ಕಥೆಗೆ ಹೊಸ ತಿರುವು ನೀಡಿದೆ. ಇದರ ಜೊತೆಗೆ ಪಿಂಕಿ ಹಾಗೂ ಸೀನನ ಲವ್ ಸ್ಟೋರಿಗೂ ಒಂದು ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: Vijay wife Sangeetha: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ-ರಾಜಕಾರಣಿ ವಿಜಯ್ ದಳಪತಿ ಪತ್ನಿ ಸಂಗೀತಾ
ಜಿಮ್ ಸೀನ ಲವ್ ಸ್ಟೋರಿ ರಿವೀಲ್
ರಶ್ಮಿ ಗಂಡ ಜಿಮ್ ಸೀನ, ಪಿಂಕಿಯನ್ನು ಲವ್ ಮಾಡುತ್ತಿದ್ದಾನೆ. ಈ ವಿಷಯ ಈಗ ಸೀನನ ತಂದೆಗೂ ಗೊತ್ತಾಗಿದೆ. ಜಿಮ್ ಸೀನ ಹಾಗೂ ಪಿಂಕಿ ಲವ್ ಮಾಡುತ್ತಿದ್ದಾರೆ. ಈ ವಿಷಯ ಶಿವುಗೆ ಗೊತ್ತಾಗುವ ಹಾಗೆ ಆಯಿತು. ತಾನೇ ಈ ವಿಷಯವನ್ನು ಪಿಂಕಿ ಹೇಳಬೇಕು ಎಂದುಕೊಂಡಿದ್ದಾಳೆ.
ಇನ್ನೊಂದು ಕಡೆ ಶಿವು ಧ್ವನಿ ಇರುವ ಇನ್ನೋರ್ವ ವ್ಯಕ್ತಿಯನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಶಿವು ಪಾತ್ರಧಾರಿ ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಬಿಟ್ಟರಾ? ಅಥವಾ ಸೋಮೇಗೌಡನೇ ಶಿವು ಪಾತ್ರದಲ್ಲಿ ಬಂದಿದ್ದಾನಾ ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಹುಡುಗಿಯನ್ನು ಗರ್ಭಿಣಿ ಮಾಡಿ ಮೋಸ
ಪರಶು ಸರಿ ಇಲ್ಲ, ಈಗಾಗಲೇ ಒಂದು ಹುಡುಗಿಯನ್ನು ಗರ್ಭಿಣಿ ಮಾಡಿ ಮೋಸ ಮಾಡಿದ್ದನು, ಕೊಲೆಯನ್ನು ಕೂಡ ಮಾಡಿದ್ದನು. ಈ ವಿಷಯ ಶಿವು ಕುಟುಂಬಕ್ಕೆ ಗೊತ್ತಿಲ್ಲ. ಈ ಮದುವೆಯನ್ನು ತಡೆಯಬೇಕು ಎಂದು ಶಾರದಾ ಪ್ರಯತ್ನಪಡುತ್ತಿದ್ದಾಳೆ.
ಶಾರದಾಳನ್ನು ಎಲ್ಲರ ಮುಂದೆ ಕಳ್ಳಿಯನ್ನಾಗಿ ಮಾಡಬೇಕು ಎಂದು ವೀರಭದ್ರ ಪ್ರಯತ್ನಪಡುತ್ತಿದ್ದಾನೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: Thalapathy Vijay: ನಟಿ ಜೊತೆ ಅನೈತಿಕ ಸಂಬಂಧ ಆರೋಪ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ, ದಳಪತಿ ಬಾಳಲ್ಲಿ ಬಿರುಗಾಳಿ!
ವೀರಭದ್ರ ಶಾರದಮ್ಮನಿಗೆ ಎಷ್ಟೋ ಕೆಡುಕನ್ನು ಉಂಟು ಮಾಡಿದ್ದಾನೆ. ಅಷ್ಟೇ ಯಾಕೆ ಮಕ್ಕಳನ್ನೇ ಶಾರದಮ್ಮನಿಂದ ದೂರ ಮಾಡಿದ್ದಾನೆ. ತನ್ನ ಜೀವನವನ್ನೇ ಹಾಳು ಮಾಡಿದ ವೀರಭದ್ರನಿಗೆ ಮುಟ್ಟಿ ನೊಡುವಂತೆ ಈ ಹಿಂದೆ ಶಾರದಮ್ಮ ತಿರುಗೇಟು ಕೊಟ್ಟಿದ್ದಳು.