ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Annayya Serial: ಶಿವಣ್ಣನೆದುರು ತುತ್ತಿನ ಗುಟ್ಟು ರಟ್ಟಾಯ್ತು! ತಂಗಿಗೆ ಹಿಂಸೆ ಕೊಟ್ಟವರನ್ನು ಸುಮ್ಮನೆ ಬಿಡ್ತಾನಾ?

Annayya Serial: ರಶ್ಮಿ ಬದುಕಲ್ಲಿ ಕೇವಲ ಸೀನ ಮಾತ್ರವಲ್ಲ, ಸೀನನ ತಾಯಿಯ ಪಾತ್ರ ಕೂಡ ಇದೆ. ಆಕೆ ರಶ್ಮಿಗೆ ಒಂದೊತ್ತು ಊಟ ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾಳೆ. ರಶ್ಮಿ ಪುನಃ ಅತ್ತೆ ಮನೆಗೆ ವಾಪಸ್‌ ಆದ ಬಳಿಕ ಪಾರು ಶಿವು ತಾಯಿ ಬಳಿ ನಿಟ್ಟುಸಿರು ಬಿಟ್ಟಿದ್ದಳು. ಆದರೆ ಅಸಲಿ ಕಥೆ ಬೇರೆಯೇ ಇದೆ.

Annayya Serial: ಶಿವಣ್ಣನೆದುರು ತುತ್ತಿನ ಗುಟ್ಟು ರಟ್ಟಾಯ್ತು!

ಅಣ್ಣಯ್ಯ ಧಾರಾವಾಹಿ -

Yashaswi Devadiga
Yashaswi Devadiga May 11, 2026 6:28 PM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ‘ಅಣ್ಣಯ್ಯ’ (Annayya serial) ಧಾರಾವಾಹಿಯಲ್ಲಿ ಸದ್ಯ ಇಮೋಶನಲ್ ಎಪಿಸೋಡ್ ಪ್ರಸಾರವಾಗುತ್ತಿದೆ. ರಶ್ಮಿ ಬದುಕಿನ ಅಸಲಿ ಸತ್ಯ ಶಿವಣ್ಣನ ಮುಂದೆ ರಿವೀಲ್‌ ಆಗಿದೆ. ಸೀನಾ, ಪಿಂಕಿ (Pinki) ಕುತ್ತಿಗೆಗೆ ತಾಳಿ ಕಟ್ಟುವುದನ್ನು ನೋಡಿ ಸಿಟ್ಟಾದ ಶಿವಣ್ಣ, ಸೀನಾಗೆ ಬಿಗಿದು, ಕೊನೆಗೆ ತನ್ನ ತಂಗಿಯ ಜೀವನ ಹಾಳಾಗಿದೆ ಎಂದು ತಿಳಿದು, ಸೀನಾ ಮನೆಯಿಂದ ರಶ್ಮಿಯನ್ನು ವಾಪಾಸ್ ಕರೆದುಕೊಂಡು ಮನೆಗೆ ಬಂದಿದ್ದಾನೆ. ಅದಾದ ಬಳಿಕ ಮಾದಪ್ಪಣ್ಣ (Madappanna) ಮತ್ತೆ ಸೊಸೆಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೀಗ ರಶ್ಮಿಯ ತುತ್ತಿನ ಗುಟ್ಟು ಕೂಡ ರಿವೀಲ್‌ ಆಗಿದೆ.

ಅಸಲಿ ಕಥೆ ಬೇರೆಯೇ

ಹೌದು. ರಶ್ಮಿ ಬದುಕಲ್ಲಿ ಕೇವಲ ಸೀನ ಮಾತ್ರವಲ್ಲ, ಸೀನನ ತಾಯಿಯ ಪಾತ್ರ ಕೂಡ ಇದೆ. ಆಕೆ ರಶ್ಮಿಗೆ ಒಂದೊತ್ತು ಊಟ ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾಳೆ. ರಶ್ಮಿ ಪುನಃ ಅತ್ತೆ ಮನೆಗೆ ವಾಪಸ್‌ ಆದ ಬಳಿಕ ಪಾರು ಶಿವು ತಾಯಿ ಬಳಿ ನಿಟ್ಟುಸಿರು ಬಿಟ್ಟಿದ್ದಳು. ಆದರೆ ಅಸಲಿ ಕಥೆ ಬೇರೆಯೇ ಇದೆ.

ಇದನ್ನೂ ಓದಿ: Kiara Advani: ತಾಯ್ತನ ನಂತರದ ಸವಾಲು ನೆನೆದು ಕಣ್ಣೀರು ಹಾಕಿದ ಕಿಯಾರಾ !

ಶಾರದಮ್ಮ ರಶ್ಮಿಗೆ ಒಂದೊತ್ತು ಊಟವನ್ನೂ ಹಾಕ್ತಾ ಇಲ್ಲ ಅನ್ನೋ ಕಹಿ ಸತ್ಯವನ್ನು ರಿವೀಲ್‌ ಮಾಡಿದ್ದಾಳೆ. ಇದು ಶಿವು ಕಿವಿಗೆ ಬಿದ್ದಿದೆ. ಈ ಸತ್ಯ ಹೇಳಿ ಶಾಕ್‌ ಗಿದ್ದಾನೆ ಶಿವು.

ಸೊಸೆಯನ್ನು ಕರೆದುಕೊಂಡು ಹೋದ ಶಿವುನ ಮನ ಒಲಿಸಿ. ಮತ್ತೆ ತನ್ನ ಮುದ್ದಿನ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗಿ ದೀಪ ಹಚ್ಚಲು, ಶಿವು ಮನೆ ಮುಂದೆ ಧರಣಿ ಕುತ್ತಿದ್ದ ಮಾದಪ್ಪ. ಅಂತೂ ರಶ್ಮಿಯನ್ನು ಕರೆದುಕೊಂಡು ಹೋಗಿದ್ದಾನೆ ಮಾದಪ್ಪಣ್ಣ.

ಪಿಂಕಿ ಸೀನಾನನ್ನು ಲವ್ ಮಾಡಿದ್ದು ಮತ್ತು ಮದುವೆಯಾಗಲು ತುದಿಕಾಲಲ್ಲಿ ನಿಂತಿರುವುದು ಎಲ್ಲವೂ ಆಸ್ತಿಗೋಸ್ಕರ. ಆದರೆ ಸೀನಾಗೆ ಆಸ್ತಿಯೇ ಇಲ್ಲ ಅಂದರೆ, ನಿಜವಾಗಿಯೂ ಪಿಂಕಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆಯೇ ಖಂಡಿತಾ ಇಲ್ಲ.

ಇದನ್ನೂ ಓದಿ: Amruthadhaare Serial: ಭೂಮಿ-ಗೌತಮ್‌ಗೆ ಮಕ್ಕಳನ್ನು ಸಂಭಾಳಿಸೋದೇ ದೊಡ್ಡ ಕೆಲಸ!

ಈಗ ಮಾದಪ್ಪನ ಮುಂದೆ ಪಿಂಕಿಯ ಅಸಲಿ ಮುಖ ಬಯಲಾಗಿದೆ. ಮಾದಪ್ಪ ಮತ್ತು ಪಾರು ಇಬ್ಬರೂ ಜೊತೆ ಸೇರಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆಯೇ ನೋಡಬೇಕು.