ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಭೂಮಿ-ಗೌತಮ್‌ಗೆ ಮಕ್ಕಳನ್ನು ಸಂಭಾಳಿಸೋದೇ ದೊಡ್ಡ ಕೆಲಸ!

Amruthadhaare Serial: ನಿನ್ನೆಯ ಎಪಿಸೋಡ್‌ನಲ್ಲಿ ತನ್ನ ಅಣ್ಣನ ಬಳಿ ಜೈದೇವ್‌ ವಿಚಾರವಾಗಿ ಶಕುಂತಲಾ ಬೇಸರ ಹೊರ ಹಾಕಿದ್ದಳು. ಗೌತಮ್‌ ಹಾಗೂ ಭೂಮಿಕಾ ಮತ್ತೆ ಮರಳಿ ಅದೇ ಜೀವನಕ್ಕೆ ಬಂದಿದ್ದಾರೆ. ಇದೀಗ ಮಕ್ಕಳ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಮಕ್ಕಳ ಸಂಭಾಳಿಸೋದೇ ದೊಡ್ಡ ಕೆಲಸ ಆಗಿದೆ. ಇನ್ನೊಂದು ಕಡೆ ಜೈದೇವ್‌ನನ್ನು ಶಕುನಿ ಮಾಮ ಜೈಲಿನಿಂದ ಬಿಡುಗಡೆ ಮಾಡಿಸಿದ್ದಾರೆ.

Amruthadhaare:  ಭೂಮಿ-ಗೌತಮ್‌ಗೆ ಮಕ್ಕಳನ್ನು ಸಂಭಾಳಿಸೋದೇ ದೊಡ್ಡ ಕೆಲಸ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 11, 2026 9:35 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್‌ ಹಾಗೂ ಭೂಮಿಕಾ ಮತ್ತೆ ಮರಳಿ ಅದೇ ಜೀವನಕ್ಕೆ ಬಂದಿದ್ದಾರೆ. ಇದೀಗ ಮಕ್ಕಳ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಮಕ್ಕಳ ಸಂಭಾಳಿಸೋದೇ ದೊಡ್ಡ ಕೆಲಸ ಆಗಿದೆ. ಇನ್ನೊಂದು ಕಡೆ ಜೈದೇವ್‌ನನ್ನು (Jaidev) ಶಕುನಿ ಮಾಮ ಜೈಲಿನಿಂದ ಬಿಡುಗಡೆ ಮಾಡಿಸಿದ್ದಾರೆ.

ಗೌತಮ್‌ ದಿವಾನ್‌ ಈಗ ಮತ್ತೆ ತನ್ನ ಕೆಲಸದ ಕಡೆ ಗಮನ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಭೂಮಿಕಾ ಕಾಲ್‌ ಮಾಡಿ, ಡುಮ್ಮಸರ್‌ಗೆ ಅಡುಗೆ ಏನು ಮಾಡಲಿ ಎಂದು ಕೇಳಿದ್ದಾಳೆ. ಈ ಜೋಡಿಯ ಸಂಭಾಷಣೆ ನೋಡಿ ಆನಂದ್‌ ಕೂಡ ಸಖತ್‌ ಖುಷ್‌ ಆಗಿದ್ದಾನೆ. ಮತ್ತೊಂದು ಕಡೆ ಮಿಂಚು ಹಾಗೂ ಅಪ್ಪು ಗಲಾಟೆಯೂ ಜೋರಾಗಿದೆ. ಮಕ್ಕಳ ಸಂಭಾಳಿಸೋದೇ ದೊಡ್ಡ ಕೆಲಸ ಆಗಿದೆ.

ಇದನ್ನೂ ಓದಿ: Sanvi Sudeep: ಬೆನ್ನಿನ ಮೇಲೆ ದೇವರ ಚಿತ್ರ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಮಗಳು ಸಾನ್ವಿ!

ಶಕುಂತಲಾ ಬೇಸರ!

ನಿನ್ನೆಯ ಎಪಿಸೋಡ್‌ನಲ್ಲಿ ತನ್ನ ಅಣ್ಣನ ಬಳಿ ಜೈದೇವ್‌ ವಿಚಾರವಾಗಿ ಶಕುಂತಲಾ ಬೇಸರ ಹೊರ ಹಾಕಿದ್ದಳು. ಅವನೊಬ್ಬ ಸರಿ ಇದ್ದಿದ್ದರೆ ಇಂದು ಎಲ್ಲರೂ ಚೆನ್ನಾಗಿ ಇರ್ತಾ ಇದ್ವಿ ಎಂದಿದ್ದಾಳೆ. ಅದಕ್ಕೆ ಮಾವ ಇದ್ದವನು,ಬಿಸಿ ರಕ್ತ ಅಷ್ಟು ಬೇಗ ತಣ್ಣಗಾಗಲ್ಲ ಎಂದಿದ್ದಾನೆ.

ದಿಯಾಳ ಹಿಂದೆ ತಿರುಗುತ್ತಿದ್ದ ಜೈದೇವ್​ಗೆ ಆಕೆ ಸರಿಯಾದ ಬುದ್ಧಿ ಕಲಿಸಿ ಪೊಲೀಸರನ್ನು ಕರೆಸಿದ್ದಾಳೆ. ಜೈದೇವ್‌ ಜೈಲುಪಾಲಾಗಿದ್ದಾನೆ. ಇದೇ ಹೊತ್ತಿನಲ್ಲಿ ಕುತೂಹಲ ಎನ್ನುವಂತೆ ಶಕುನಿ ಮಾಮಾ ಜೈದೇವನ ರಕ್ಷಣೆಗೆ ಬಂದಿದ್ದಾನೆ.



ಅವನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಲು ಬಂದಾಗ, ನಿಮ್ಮ ಯಾರ ಸಹವಾಸ ನನಗೆ ಬೇಡ ಎಂದಿದ್ದಾನೆ ಜೈದೇವ್​. ಕೊನೆಗೆ ಪೊಲೀಸರು ಧಮ್ಕಿ ಕೊಟ್ಟ ಮೇಲೆ ಹೋಗಲು ಒಪ್ಪಿಕೊಂಡಿದ್ದಾನೆ. ಶಕುನಿ ಮಾಮಾ ಡಬಲ್​ ಗೇಮ್ ಆಡ್ತಿದ್ದಾನಾ, ಅಥವಾ ಗೌತಮ್​ ಹೇಳಿದಂತೆ ಜೈದೇವನನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಮಗಳ ರಹಸ್ಯ ಏನು?

ಮಗಳು ಕಾಣೆಯಾಗಿರುವ ವಿಷಯದ ಬಗ್ಗೆ ಮನೆಯ ಪೂಜೆಯಲ್ಲಿ ಭಾಗಿಯಾಗಿದ್ದ ಅಖಿಲಾಂಡೇಶ್ವರಿ ಅವರಿಗೆ ವಿಷಯ ತಿಳಿದಿದ್ದು, ಮಗಳ ಪತ್ತೆಗೆ ಉದ್ಯಮಿ ಅಖಿಲಾಂಡೇಶ್ವರಿ ಅವರ ಅಭಯ ಹಸ್ತ ಸಿಕ್ಕಿದೆ. ವಠಾರದಲ್ಲಿದ್ದ ದಿನಗಳ ಬಗ್ಗೆ ಗೌತಮ್ ಅವರ ನಡೆಗೆ ಅಖಿಲಾಂಡೇಶ್ವರಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಮಿಂಚುನೇ ಗೌತಮ್ ಹಾಗೂ ಭೂಮಿಕಾ ಮಗಳು ಎನ್ನುವುದು ಪ್ರೇಕ್ಷಕರ ನಿರೀಕ್ಷೆಯಾಗಿದೆ. ಮಿಂಚು ಬಂದ ಮೇಲೆ ಗೌತಮ್ ಜೀವನ ಬದಲಾಯಿತು ಎನ್ನುವುದು ವೀಕ್ಷಕರ ನಂಬಿಕೆಯಾಗಿದೆ.

ಇದನ್ನೂ ಓದಿ: Amruthadhaare Serial: ಜೈಲಿನಿಂದ ಜೆಡಿ ಬಿಡುಗಡೆ ಮಾಡಿಸಿದ ಶಕುನಿ ಮಾಮಾ; ಗೌತಮ್ - ಭೂಮಿಕಾಗೆ ಮಕ್ಕಳನ್ನ ಸಂಭಾಳಿಸೊದೇ ಈಗ ಪೀಕಲಾಟ!

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ