ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anupama Parameswaran: 20 ವರ್ಷದ ಯುವತಿ ವಿರುದ್ಧ ದೂರು ದಾಖಲಿಸಿದ ನಟಿ ಅನುಪಮಾ ಪರಮೇಶ್ವರನ್: ಕಾರಣವೇನು?

ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮತ್ತು ಕುಟುಂಬದ ಕುರಿತು ಆಕ್ಷೇಪಾರ್ಹ ಹಾಗೂ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ನಟಿ ದೂರು ನೀಡಿದ್ದಾರೆ. ತಮಿಳುನಾಡು ಮೂಲದ 20 ವರ್ಷದ ಯುವತಿಯ ವಿರುದ್ಧ ಕೇರಳ ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿದ್ದಾರೆ.

20 ವರ್ಷದ ಯುವತಿ ವಿರುದ್ಧ ದೂರು ದಾಖಲಿಸಿದ ನಟಿ‌ ಅನುಪಮಾ!

ಯುವತಿ ವಿರುದ್ಧ ದೂರು ದಾಖಲಿಸಿದ ನಟಿ ಅನುಪಮಾ ಪರಮೇಶ್ವರನ್ -

Profile
Pushpa Kumari Nov 9, 2025 7:46 PM

ತಿರುವನಂತಪುರಂ: ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾದವರು ಒಂದು ಕಡೆಯಾದರೆ ಇನ್ನೊಂದೆಡೆ ಇದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದವರು ಇದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಪ್ರೊಫೈಲ್ ಫೋಟೊಗಳನ್ನೂ ಯಾವದ್ದೋ ಖಾತೆಯಲ್ಲಿ ಬಳಸಿಕೊಂಡು ಬೇರೆ ರೀತಿಯಲ್ಲಿ ಬಿಂಬಿಸುವ ಪರಿಪಾಠ ಹೆಚ್ಚಾಗಿದೆ. ಸದ್ಯ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮತ್ತು ಕುಟುಂಬದ ಕುರಿತು ಆಕ್ಷೇಪಾರ್ಹ ಹಾಗೂ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ನಟಿ ದೂರು ನೀಡಿದ್ದಾರೆ. ತಮಿಳುನಾಡು ಮೂಲದ 20 ವರ್ಷದ ಯುವತಿಯ ವಿರುದ್ಧ ಕೇರಳ ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ನಟಿ ಅನುಪಮಾ ಪರಮೇಶ್ವರನ್ ಫೋಟೊಗಳನ್ನು ನಕಲಿ ಖಾತೆಯ ಮೂಲಕ ತಿರುಚಿ, ನಟಿಯ ಮಾರ್ಫ್ ಮಾಡಿದ ‌ಚಿತ್ರಗಳು ಮತ್ತು ಆಧಾರರಹಿತವಾದ ಆಕ್ಷೇಪಾರ್ಹ ವಿಷಯಗಳನ್ನು ಹಂಚುವ ಮೂಲಕ ಯುವತಿಯೊಬ್ಬಳು ಕಿರುಕುಳ ನೀಡುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಅನುಪಮಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, "ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಅತ್ಯಂತ ಅನುಚಿತ ಮತ್ತು ಸುಳ್ಳು ವಿಷಯಗಳು ಪ್ರಸಾರವಾಗುತ್ತಿರುವುದು ಗಮನಕ್ಕೆ ಬಂದಿದೆ. ಇದು ತನಗೆ ತೀವ್ರವಾಗಿ ನೋವುಂಟು ಮಾಡಿದೆ" ಎಂದು ಹೇಳಿದ್ದಾರೆ. ದೂರು ನೀಡಿದ ತಕ್ಷಣವೇ ಸೈಬರ್ ಕ್ರೈಂ ಪೊಲೀಸರು ತ್ವರಿತವಾಗಿ ಸ್ಪಂದಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಅನುಪಮಾ ಪರಮೇಶ್ವರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼʼಇತ್ತೀಚಿನ ದಿನಗಳಲ್ಲಿ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಆಕ್ಷೇಪಾರ್ಹ ಫೋಟೊ ಮತ್ತು ತಪ್ಪು ಮಾಹಿತಿಯನ್ನು ಶೇರ್ ಮಾಡುವುದು ತಿಳಿದುಬಂತು. ಈ ಕೃತ್ಯದ ಹಿಂದೆ ಯಾರು ಇದ್ದಾರೆ ಎಂದು ಈಗ ನನಗೆ ತಿಳಿದಿದೆ. ನನಗೆ ಆಶ್ಚರ್ಯ ಆಗಿದ್ದು ಏನೆಂದರೆ, ಈ ಕೃತ್ಯ ಮಾಡಿರುವುದು ತಮಿಳು ನಾಡಿನ 20 ವರ್ಷದ ಹುಡುಗಿ. ಆಕೆಗೆ ಮುಂದೆ ಯಾವುದೇ ಸಮಸ್ಯೆ ಆಗಬಾರದು ಎಂದು ಅವಳ ಗುರುತನ್ನು ನಾನು ಬಹಿರಂಗ ಮಾಡುತ್ತಿಲ್ಲ. ವಯಸ್ಸನ್ನು ಪರಿಗಣಿಸಿ, ಆಕೆಯ ಭವಿಷ್ಯಕ್ಕೆ ಧಕ್ಕೆಯಾಗದಿರಲಿ ಎಂಬ ಮಾನವೀಯ ದೃಷ್ಟಿಯಿಂದ ಆಕೆಯ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ:Udaala Movie: ಯೋಗರಾಜ್‌ ಭಟ್‌ ನಿರ್ಮಾಣದ ʼಉಡಾಳʼ ಚಿತ್ರದ ಟ್ರೇಲರ್‌ ಔಟ್‌

ಇದೇ ವೇಳೆ, ಆನ್‌ಲೈನ್ ದುರುಪಯೋಗದ ವಿರುದ್ಧ ಕಟುವಾದ ಎಚ್ಚರಿಕೆಯನ್ನು ಅನುಪಮಾ ನೀಡಿದ್ದಾರೆ. ನಟಿಯ ಈ ನಿರ್ಧಾರಕ್ಕೆ ಮತ್ತು ಸೈಬರ್ ಕಿರುಕುಳದ ವಿರುದ್ಧದ ಹೋರಾಟಕ್ಕೆ ಚಿತ್ರರಂಗ ಮತ್ತು ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 2015ರಲ್ಲಿ ರಿಲೀಸ್‌ ಆದ ಮಲಯಾಳಂನ ಹಿಟ್ ಚಿತ್ರ ʼಪ್ರೇಮಂʼ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಕೊಡಿ, ʼಎ ಆʼ, ʼತೇಜ್ ಐ ಲವ್ ಯುʼ, ʼವುನ್ನಾಧಿ ಒಕೇಟ್ ಜಿಂದಗಿʼ, ʼಶತಮಾನಂ ​​ಭವತಿʼ, ʼಡ್ರ್ಯಾಗನ್ʼ, ʼಈಗಲ್ʼ, ʼಬಟರ್‌ಫ್ಲೈʼ, ಪುನೀತ್‌ ರಾಜ್‌ಕುಮಾರ್‌ ಜತೆಗಿನ ಕನ್ನಡದ ʼನಟಸಾರ್ವಭೌಮʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.