ʻ15 ಕೋಟಿ ಕೊಟ್ರೆ ದುಬೈ ಶೇಖ್ ಜೊತೆ ಮಲಗುವುದರ ಬಗ್ಗೆ ಯೋಚಿಸುವೆʼ; ಇನ್‌ಫ್ಲುಯೆನ್ಸರ್ ಅಪೂರ್ವ ಮುಖಿಜಾ ಹಳೇ ವಿಡಿಯೋ ವೈರಲ್, ಹೊಸ ಕಿರಿಕ್ ಶುರು!
'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಖ್ಯಾತಿಯ ಇನ್‌ಫ್ಲುಯೆನ್ಸರ್ ಅಪೂರ್ವ ಮುಖಿಜಾ ಅವರ ದುಬೈ ಶೇಖ್ ಕುರಿತಾದ ಹಳೇ ವಿಡಿಯೋ ಮತ್ತೆ ವೈರಲ್ ಆಗಿದ್ದು, ಟ್ರೋಲರ್‌ಗಳು ಅಶ್ಲೀಲ ಕಮೆಂಟ್‌ಗಳ ಮೂಲಕ ರೇಟ್ ನಿಗದಿಪಡಿಸಲು ಆರಂಭಿಸಿದ್ದಾರೆ. ಈ ಮಧ್ಯೆ ತಕಗೆ 12 ಸಾವಿರ ರೂ. ಆಫರ್ ಮಾಡಿದ ಪ್ರಶಾಂತ್ ಎಂಬ ವ್ಯಕ್ತಿಯ ಮೇಲೆ ದೂರು ನೀಡುವ ಮೂಲಕ ಅಪೂರ್ವ ಖಡಕ್ ಆಕ್ಷನ್ ತಗೆದುಕೊಂಡಿದ್ದಾರೆ.
-
'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಶೋ ಮೂಲಕ ಸದ್ದು ಮಾಡಿದ್ದ, ʻದಿ ರೆಬಲ್ ಕಿಡ್ʼ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಇನ್‌ಫ್ಲುಯೆನ್ಸರ್ ಅಪೂರ್ವ ಮುಖಿಜಾ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪುನಃ ವೈರಲ್ ಆಗುತ್ತಿದೆ.
ಆ ವಿಡಿಯೋದಲ್ಲಿ ಅಪೂರ್ವ, "ನಾನು 2 ರೂಪಾಯಿಯ ಪಾತ್ರಕ್ಕಾಗಿ ಯಾರೊಂದಿಗೂ ಮಲಗುವುದಿಲ್ಲ, ಆದರೆ ದುಬೈನ ಯಾರಾದರೂ ಶೇಖ್ ನನ್ನ ಮೇಲೆ 10-15 ಕೋಟಿ ರೂಪಾಯಿ ಖರ್ಚು ಮಾಡಲು ಸಿದ್ಧರಿದ್ದರೆ, ಬಹುಶಃ ನಾನು ಆ ಬಗ್ಗೆ ಯೋಚಿಸಬಹುದು" ಎಂದು ಹೇಳಿದ್ದರು.
ಮದುವೆ ಭರವಸೆ ನೀಡಿ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಕೊನೆಗೂ ಇನ್‌ಫ್ಲುಯೆನ್ಸರ್ ಪೊಲೀಸ್ ಬಲೆಗೆ
ಇದೀಗ ಆ ರೀತಿ ಹೇಳಿಕೆ ನೀಡಿದ್ದ ಅಪೂರ್ವ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋವನ್ನು ಈಗ ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಅಪೂರ್ವಗೆ ರೇಟ್ ಆಫರ್ ಮಾಡಲು ಆರಂಭಿಸಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಅಪೂರ್ವ ಕೆರಳಿದ್ದಾರೆ. ಅದರಲ್ಲೂ ಪ್ರಶಾಂತ್ ಎಂಬ ವ್ಯಕ್ತಿಯೊಬ್ಬ ಅಪೂರ್ವಗೆ 12,000 ರೂಪಾಯಿ ಆಫರ್ ಮಾಡಿದ್ದ. ಇದು ಕೆರಳಿದ್ದ ಅಪೂರ್ವ, ಆತನ ಜಾತಕವನ್ನು ಜಾಲಾಡಿ, ಎಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದುಕೊಂಡು, ಆ ಕಂಪನಿಗೇ ದೂರು ನೀಡಿದ್ದರು.
ಅಪೂರ್ವ ಮುಖಿಜಾ ಪೋಸ್ಟ್‌ಗೆ ಆಕ್ಷೇಪಾರ್ಹ ಕಮೆಂಟ್
ಅಪೂರ್ವ ಅವರಿಗೆ ಆಕ್ಷೇಪಾರ್ಹ ಕಮೆಂಟ್ ಹಾಗೂ ಸಂದೇಶಗಳನ್ನು ಕಳುಹಿಸಿದ್ದ ಪ್ರಶಾಂತ್ ಎಂಬ ವ್ಯಕ್ತಿಯ ಬಗ್ಗೆ ತನಿಖೆ ನಡೆಸಿದಾಗ, ಆತ DNEG ಎಂಬ ಪ್ರೊಡಕ್ಷನ್ ಹೌಸ್‌ನಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಅಪೂರ್ವ ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಷಯವನ್ನು ಕಂಪನಿಯ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೊಡಕ್ಷನ್ ಹೌಸ್, ತಾವು ಇಂತಹ ನಡವಳಿಕೆಗಳನ್ನು ಕಠಿಣವಾಗಿ ಖಂಡಿಸುವುದಾಗಿ ತಿಳಿಸಿದೆ. ಅಲ್ಲದೆ, ಆ ವ್ಯಕ್ತಿ 2024 ರಿಂದಲೇ ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದೂ ಸ್ಪಷ್ಟಪಡಿಸಿದೆ.
ರೇಟ್ ನಿಗದಿಪಡಿಸಿದವರ ವಿರುದ್ಧ ಅಪೂರ್ವ ಆಕ್ಷನ್
ಬಳಿಕ ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಆತ ಈಗ ILM VFX ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ. ತಕ್ಷಣವೇ ಅಪೂರ್ವ ಆ ಕಂಪನಿಯನ್ನೂ ಟ್ಯಾಗ್ ಮಾಡಿ, ಒಂದು ಪೋಸ್ಟ್ ಹಾಕಿದ್ದಾರೆ. "ನಿಮ್ಮ ಕಂಪನಿಯ ಉದ್ಯೋಗಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಾನೆ, ಇದು ಸರಿಯೇ?" ಎಂದು ಬರೆದಿದ್ದಾರೆ. ಆದರೆ, ಈ ಕಂಪನಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ ಅಪೂರ್ವಗೆ ಪ್ರಶಾಂತ್ ಕ್ಷಮೆ ಕೇಳಿದ ಘಟನೆಯೂ ನಡೆದಿದೆ.
ವೈರಲ್ ಆಗಿರುವ ಅಪೂರ್ವ ಮುಖಿಜಾ ಹಳೇ ವಿಡಿಯೋ
Controversial Video 🔴
— Always Bollywood (@AlwaysBollywood) June 15, 2026
" If Dubai Sheikh offers Rs 15 crore, I am ready to sleep with him "
#ApoorvaMukhija aka The Rebel Kid makes explosive statement 🫢
In the viral video, Apoorva Mukhija says she will not sleep for small roles. She said, "I am not sleeping with anyone… pic.twitter.com/n2v8t7txl1
ಅಪೂರ್ವ ಮುಖಿಜಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಆ ವ್ಯಕ್ತಿ ಕಳುಹಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. "ನಾನು ನಿನ್ನ ಜೊತೆ ಕೆಲಸ ಮಾಡುವ ಜನರನ್ನು ಹುಡುಕಿ ಅವರಿಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸುತ್ತೇನೆ.. ನೀನು ನನ್ನನ್ನು 12 ಸಾವಿರಕ್ಕೆ ಖರೀದಿಸುತ್ತೇನೆ ಎಂದು ಹೇಳಿದ್ದೆ ಅಲ್ವಾ? ನೀನು ಅದನ್ನು ಹೇಗೆ ಮಾಡ್ತೀಯಅ ಅಂತ ನಾನು ನೋಡಲು ಬಯಸುತ್ತೇನೆ" ಎಂದು ಬರೆದುಕೊಂಡು, ಆ ವ್ಯಕ್ತಿಗೆ ಟಾಂಗ್ ನೀಡಿದ್ದಾರೆ. ಬಳಿಕ ಆತ ಕೊನೆಗೆ ಅಪೂರ್ವಗೆ ಕ್ಷಮೆಯಾಚಿಸಿದ್ದಾನೆ.