Ashika Ranganath: ನಾಯಕಿ ಪಾತ್ರಕ್ಕೆ ಟೀಕೆ; ನಟಿ ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತ ಆಶಿಕಾ ರಂಗನಾಥ್
Ashika Ranganath: ಜಾನ್ಹವಿ ಕಪೂರ್ ಪಾತ್ರವನ್ನು ತೆರೆಯ ಮೇಲೆ ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ಆ ‘ಪೆದ್ದಿ’ ಸಿನಿಮಾನಲ್ಲಿ ನಾಯಕಿ ಜಾನ್ಹವಿ ಕಪೂರ್ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ. ಕತೆಗೆ ಯಾವ ರೀತಿಯಲ್ಲೂ ಅವಶ್ಯಕ ಇಲ್ಲದೇ ಹೋದರೂ ಸಹ ನಟಿಯ ಅಂಗಾಂಗಗಳ ಮೇಲೆ ಫೋಕಸ್ ಮಾಡಿ ಗ್ಲಾಮರಸ್ ಆಗಿ ತೋರಿಸಲಾಗಿದೆ ಎನ್ನಲಾಗುತ್ತಿದೆ. ಟೀಕೆಗಳನ್ನು ನಟಿ ಆಶಿಕಾ ರಂಗನಾಥ್ ವಿರೋಧಿಸಿದ್ದಾರೆ.
ಆಶಿಕಾ ರಂಗನಾಥ್ -
‘ಪೆದ್ದಿ’ಸಿನಿಮಾನಲ್ಲಿ ನಟಿ ಜಾನ್ಹವಿ ಕಪೂರ್ (Jhanvi kapoor) ಪಾತ್ರವನ್ನು ತೆರೆಯ ಮೇಲೆ ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ಆ ‘ಪೆದ್ದಿ’ ಸಿನಿಮಾನಲ್ಲಿ ನಾಯಕಿ ಜಾನ್ಹವಿ ಕಪೂರ್ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ. ಕತೆಗೆ ಯಾವ ರೀತಿಯಲ್ಲೂ ಅವಶ್ಯಕ ಇಲ್ಲದೇ ಹೋದರೂ ಸಹ ನಟಿಯ ಅಂಗಾಂಗಗಳ ಮೇಲೆ ಫೋಕಸ್ ಮಾಡಿ ಗ್ಲಾಮರಸ್ ಆಗಿ ತೋರಿಸಲಾಗಿದೆ ಎನ್ನಲಾಗುತ್ತಿದೆ. ಟೀಕೆಗಳನ್ನು ನಟಿ ಆಶಿಕಾ ರಂಗನಾಥ್ (ashika ranganath) ವಿರೋಧಿಸಿದ್ದಾರೆ.
ತೀವ್ರ ಅಸಭ್ಯ
ಜಾಗತಿಕ ತಾರೆ ರಾಮ್ ಚರಣ್ ಮತ್ತು ನಿರ್ದೇಶಕ ಬುಚಿ ಬಾಬು ಸನಾ ಅವರ ಸಂಯೋಜನೆಯಲ್ಲಿ ಬಿಡುಗಡೆಯಾದ 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದೆ. ಜಾನ್ವಿ ಪಾತ್ರವನ್ನು ತೀವ್ರ ಅಸಭ್ಯವಾಗಿ ಚಿತ್ರಿಸಿದ್ದಕ್ಕಾಗಿ ನೆಟಿಜನ್‌ಗಳು ಟೀಕೆಗೆ ಗುರಿಯಾಗಿದ್ದಾರೆ. ತೀವ್ರ ಟೀಕೆಗಳ ಹಿನ್ನೆಲೆಯಲ್ಲಿ ನಿರ್ದೇಶಕ ಬುಚಿ ಬಾಬು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: Kalki 2: ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; ‘ಕಲ್ಕಿ 2’ ನಿರ್ದೇಶಕರು ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಆಶಿಕಾ ರಂಗನಾಥ್, ‘ನನ್ನ ಅಭಿಪ್ರಾಯದಲ್ಲಿ, ಗ್ಲಾಮರ್ ಎಂದರೆ ಮಹಿಳೆಯ ಸೌಂದರ್ಯವನ್ನು ಅತ್ಯಂತ ಘನತೆ ಮತ್ತು ಗೌರವಯುತ ರೀತಿಯಲ್ಲಿ ತೋರಿಸುವುದು.
ಅದು ಅಸಭ್ಯತೆಯಲ್ಲ. ಇಲ್ಲಿ ನಟಿಯರನ್ನು ದೂಷಿಸುವುದನ್ನು ನಿಲ್ಲಿಸಿ. ಚಿತ್ರಕಥೆ ಬರೆಯುವುದು, ದೃಶ್ಯಗಳನ್ನು ಹೇಗೆ ಶೂಟ್ ಮಾಡಬೇಕು ಮತ್ತು ಪಾತ್ರವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂದು ನಿರ್ಧರಿಸುವುದು ಸಂಪೂರ್ಣವಾಗಿ ನಿರ್ದೇಶಕ ಮತ್ತು ಚಿತ್ರತಂಡದ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ, ಇದರಲ್ಲಿ ನಟಿಯ ತಪ್ಪು ಏನೂ ಇರುವುದಿಲ್ಲ ಮತ್ತು ಅವರನ್ನು ದೂಷಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ. ಆ ಮೂಲಕ ಜಾನ್ಹವಿ ಕಪೂರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ದೊಡ್ಡ ಪ್ಯಾನ್-ಇಂಡಿಯಾ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವುದು ಕೇವಲ ನಟನೆಯ ಬಗ್ಗೆ ಅಲ್ಲ, ಬದಲಾಗಿ ಮಾರುಕಟ್ಟೆಯಲ್ಲಿ ತಮ್ಮ ಬ್ರಾಂಡ್ ಮೌಲ್ಯವನ್ನು ಕಾಯ್ದುಕೊಳ್ಳುವ ಕಾರ್ಯತಂತ್ರದ ಲೆಕ್ಕಾಚಾರ ಎಂದು ಆಶಿಕಾ ಹೇಳಿದರು.

ದೊಡ್ಡ ವಾಣಿಜ್ಯ ಚಿತ್ರಗಳಲ್ಲಿ, ನಾಯಕಿ ಪಾತ್ರಗಳು ಆಕ್ಷನ್ ಸೀಕ್ವೆನ್ಸ್‌ಗಳ ನಡುವಿನ ಗ್ಲಾಮರಸ್ ವಿರಾಮಗಳಂತೆ. ನಾಯಕಿಯ ಸ್ವಂತ ಇಮೇಜ್‌ಗಿಂತ ನಾಯಕನನ್ನು ಹೆಚ್ಚು ಎತ್ತರಿಸಲು ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ನಟಿಯರು ತಮ್ಮ ಅವಕಾಶಗಳ ವ್ಯಾಪ್ತಿಯಲ್ಲಿ ತಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತಾರೆ. ಪಾತ್ರವನ್ನು ಸರಿಯಾಗಿ ಬರೆಯದಿದ್ದರೆ, ಅದು ನಿರ್ಮಾಪಕರ ತಪ್ಪು, ಅದನ್ನು ನಿರ್ವಹಿಸುವ ಮಹಿಳೆಯರದ್ದಲ್ಲ ಎಂದು ಆಶಿಕಾ ಹೇಳಿದರು.
ಇದನ್ನೂ ಓದಿ: Salim Kumar: ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳ ನಟ ಸಲೀಂ ಕುಮಾರ್ ಇನ್ನಿಲ್ಲ
ಆದರೆ ಸಿನಿಮಾ ಎನ್ನುವುದು ಒಂದು ಕಲಾ ಮಾಧ್ಯಮವಾಗಿದ್ದು, ಅಲ್ಲಿ ನಿರ್ದೇಶಕರು ಕತೆಯ ಬೇಡಿಕೆಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಒಂದು ವೇಳೆ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟವಾಗದಿದ್ದರೆ, ಆ ವಿಮರ್ಶೆಯನ್ನು ಸೃಜನಾತ್ಮಕ ತಂಡಕ್ಕೆ ತಲುಪಿಸಬೇಕೇ ಹೊರತು ಕಲಾವಿದರನ್ನು ದೂರುವುದು ತರವಲ್ಲ’ ಎಂದು ಆಶಿಕಾ ಹೇಳಿದ್ದಾರೆ.