ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ayyana Mane Web Series: Zee5ರಲ್ಲಿ ದಾಖಲೆಯ ಯಶಸ್ಸು ಕಂಡ ‘ಅಯ್ಯನ ಮನೆ 2’‌ ; ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್

Ayyana Mane Web Series: ಕನ್ನಡದ ಅತ್ಯಂತ ಜನಪ್ರಿಯ ಒರಿಜಿನಲ್ ವೆಬ್ ಸರಣಿ ‘ಅಯ್ಯನ ಮನೆ’ಯ (Ayyana Mane 2) ಮುಂದುವರಿದ ಭಾಗ ‘ಅಯ್ಯನ ಮನೆ ಸೀಸನ್ 2’ ಭರ್ಜರಿ ಯಶಸ್ಸು ಕಂಡಿದ್ದು, ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಪ್ರೆಸ್ ಮೀಟ್ ಆಯೋಜಿಸಿತ್ತು. ಕನ್ನಡ Zee5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಈ ಸರಣಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿರ್ದೇಶಕ ರಮೇಶ್ ಇಂದಿರಾ (Ramesh Indira), ನಿರ್ಮಾಪಕಿ ಶ್ರುತಿ ನಾಯ್ಡು, ಕನ್ನಡ ಜೀ5 ಸೀರೀಸ್ ಹೆಡ್ ಆರ್‌ಜೆ ಪ್ರದೀಪ್ ಹಾಗೂ ಪ್ರಮುಖ ಕಲಾವಿದರು ತಮ್ಮ ಸಂತಸವನ್ನು ಹಂಚಿಕೊಂಡರು.

Zee5ರಲ್ಲಿ ದಾಖಲೆಯ ಯಶಸ್ಸು ಕಂಡ ‘ಅಯ್ಯನ ಮನೆ 2’‌

ಅಯ್ಯನ ಮನೆ ಸಿರೀಸ್‌ -

Yashaswi Devadiga
Yashaswi Devadiga Nov 21, 2026 6:02 PM

ಕನ್ನಡದ ಅತ್ಯಂತ ಜನಪ್ರಿಯ ಒರಿಜಿನಲ್ ವೆಬ್ ಸರಣಿ ‘ಅಯ್ಯನ ಮನೆ’ಯ (Ayyana Mane) ಮುಂದುವರಿದ ಭಾಗ ‘ಅಯ್ಯನ ಮನೆ ಸೀಸನ್ 2’ ಭರ್ಜರಿ ಯಶಸ್ಸು ಕಂಡಿದ್ದು, ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಪ್ರೆಸ್ ಮೀಟ್ ಆಯೋಜಿಸಿತ್ತು. ಕನ್ನಡ Zee5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಈ ಸರಣಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿರ್ದೇಶಕ ರಮೇಶ್ ಇಂದಿರಾ, ನಿರ್ಮಾಪಕಿ ಶ್ರುತಿ ನಾಯ್ಡು, ಕನ್ನಡ ಜೀ5 ಸೀರೀಸ್ ಹೆಡ್ ಆರ್‌ಜೆ ಪ್ರದೀಪ್ ಹಾಗೂ ಪ್ರಮುಖ ಕಲಾವಿದರು ತಮ್ಮ ಸಂತಸವನ್ನು ಹಂಚಿಕೊಂಡರು.

ಅದ್ಧೂರಿಯಾಗಿ ನಿರ್ಮಾಣ

ಅದ್ಧೂರಿಯಾಗಿ ನಿರ್ಮಾಣವಾಗಿದ್ದ 'ಅಯ್ಯನ ಮನೆ 2' ಕನ್ನಡದ ಮೊದಲ ಮತ್ತು ಅತಿ ದೊಡ್ಡ ಯಶಸ್ಸು ವೆಬ್‌ ಸರಣಿಯಾಗಿದೆ. ರಮೇಶ್‌ ಇಂದಿರಾ ಅವರು ಬರೆದಿರುವ ಕಥೆ ತುಂಬಾ ಯೂನಿಕ್‌ ಆಗಿದ್ದು, ಸಖತ್‌ ಕುತೂಹಲ ಮೂಡಿಸುವಂತಿದೆ.

ಇದನ್ನೂ ಓದಿ: Bigg Boss kannada 13: ಮೊದಲ ನಿರ್ಧಾರದಲ್ಲೇ ಎಡವಿದ್ರಾ ಮಹರಾಣಿಯಾದ ಗಾನವಿ?

ಸರಣಿಯ ಯಶಸ್ಸಿನ ಕುರಿತು ಮಾತನಾಡಿದ ಕನ್ನಡ Zee5 ಸೀರೀಸ್ ಹೆಡ್ ಆರ್‌ಜೆ ಪ್ರದೀಪ್, "ಕನ್ನಡದ ಅತ್ಯಂತ ದೊಡ್ಡ ಹಾಗೂ ಯಶಸ್ವಿ ವೆಬ್ ಸರಣಿಗಳಲ್ಲಿ ‘ಅಯ್ಯನ ಮನೆ’ ಕೂಡ ಒಂದು. ಯಾವುದೇ ದೊಡ್ಡ ಸಿನಿಮಾಗೂ ಕಡಿಮೆ ಇಲ್ಲದಂತಹ ಮೇಕಿಂಗ್ ಗುಣಮಟ್ಟ, ಛಾಯಾಗ್ರಹಣ ಮತ್ತು ಸಂಗೀತ ಈ ಸರಣಿಗಿದೆ. ವೈಯಕ್ತಿಕವಾಗಿ ನಾನು ರಮೇಶ್ ಇಂದಿರಾ ಅವರ ಬರವಣಿಗೆಯ ದೊಡ್ಡ ಅಭಿಮಾನಿ. ಮೊದಲ ಸೀಸನ್ ಕನ್ನಡ ಒಟಿಟಿ ಮಾರುಕಟ್ಟೆಗೆ ದೊಡ್ಡ ಬಾಗಿಲು ತೆರೆಯಿತು, ಅದೇ ಆತ್ಮವಿಶ್ವಾಸದೊಂದಿಗೆ ಸೀಸನ್ 2 ಯೋಜಿಸಿದೆವು. ಮೊದಲ ಸೀಸನ್‌ನಲ್ಲಿದ್ದ ಎಲ್ಲಾ ಕುತೂಹಲಗಳಿಗೆ ಈ ಸೀಸನ್‌ನಲ್ಲಿ ಉತ್ತರ ನೀಡಲಾಗಿದೆ. ಮುಂದಿನ ದಿನಗಳಲ್ಲಿ Zee5 ಮೂಲಕ ಪ್ರತಿ ತಿಂಗಳು ಒಂದೊಂದು ಹೊಸ ಒರಿಜಿನಲ್ ಪ್ರಾಜೆಕ್ಟ್ ಪ್ರೇಕ್ಷಕರ ಮುಂದೆ ಬರಲಿದೆ" ಎಂದು ತಿಳಿಸಿದರು.

ನಿರ್ಮಾಪಕಿ ಶ್ರುತಿ ನಾಯ್ಡು ಮಾತನಾಡಿ, "ಕನ್ನಡದ ‘ಅಯ್ಯನ ಮನೆ’ ವೆಬ್ ಸರಣಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದಾಗ ನನಗೆ ಅತೀವ ಸಂತೋಷವಾಯಿತು. Zee5 ವೇದಿಕೆ ಹಾಗೂ ರಾಘವೇಂದ್ರ ಹುಣಸೂರು ಅವರ ಸಹಕಾರದಿಂದ ಕನ್ನಡದಲ್ಲಿಯೇ ಒಂದು ಅತ್ಯುತ್ತಮ ಒರಿಜಿನಲ್ ವೆಬ್ ಸರಣಿ ಮಾಡಬೇಕೆಂಬ ನಮ್ಮ ಕನಸು ನನಸಾಗಿದೆ. ಎಲ್ಲಾ ಕಲಾವಿದರು ಬಹಳ ಪ್ರೀತಿಯಿಂದ ಈ ಪಾತ್ರಗಳಿಗೆ ಜೀವ ತುಂಬಿದ್ದಾರೆ, ಅದರಲ್ಲೂ ಪ್ರತಿಯೊಬ್ಬರೂ ರಮೇಶ್ ಇಂದಿರಾ ಅವರ ಬರವಣಿಗೆಯ ಅಭಿಮಾನಿಗಳಾಗಿದ್ದಾರೆ. ಕನ್ನಡದ ಸ್ವಂತ ಕಂಟೆಂಟ್‌ಗಳಿಗೆ ಪ್ರೇಕ್ಷಕರು ಇದೇ ರೀತಿ ಬೆಂಬಲ ನೀಡುತ್ತಿರಬೇಕು" ಎಂದು ಮನವಿ ಮಾಡಿದರು.

ನಿರ್ದೇಶಕ ರಮೇಶ್ ಇಂದಿರಾ ತಮ್ಮ ಅನುಭವ ಹಂಚಿಕೊಳ್ಳುತ್ತಾ, "ಸರಣಿಯನ್ನು ಜನರು ಕೊಂಡಾಡುತ್ತಿದ್ದು, ನಿರೀಕ್ಷೆಗೂ ಮೀರಿದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಕಥೆಯಲ್ಲಿ ಏನೋ ವಿಶೇಷತೆ ಇದೆ ಎಂಬ ಕಾರಣಕ್ಕೇ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಇದನ್ನು ವೀಕ್ಷಿಸಿದ್ದಾರೆ. ನಾವೆಲ್ಲರೂ ಸೇರಿ ಕಂಡ ಕನಸನ್ನು ಇಂದು ನನಸು ಮಾಡಿದ್ದೇವೆ. ಪ್ರಾಮಾಣಿಕವಾಗಿ ಕಥೆ ಬರೆದರೆ ಮಾತ್ರ ಇಂತಹ ಯಶಸ್ಸು ಸಾಧ್ಯವಾಗುತ್ತದೆ. ಕನ್ನಡ Zee5 ತಂಡದಲ್ಲಿರುವ ಉತ್ಸಾಹ ನಮಗೆ ದೊಡ್ಡ ಶಕ್ತಿ ನೀಡಿತು, ಈ ಯಶಸ್ಸಿಗೆ ಕಾರಣರಾದ ರಾಘವೇಂದ್ರ ಹುಣಸೂರು, ದೀಪಕ್ ಶ್ರೀರಾಮುಲು ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದಗಳು" ಎಂದರು.

ವಿಭಿನ್ನ ಪಾತ್ರ

ಸರಣಿಯಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರೂಪೇಶ್ ಶೆಟ್ಟಿ ಮಾತನಾಡಿ, "ಮೊದಲ ಸೀಸನ್ ನೋಡಿದಾಗಿನಿಂದಲೂ ನಾನು ಈ ಸರಣಿಯ ಅಭಿಮಾನಿಯಾಗಿದ್ದೆ. ರಮೇಶ್ ಇಂದಿರಾ ಅವರ ನಿರ್ದೇಶನ ಹಾಗೂ ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯ ಗುಣಮಟ್ಟ ತಿಳಿದಿದ್ದರಿಂದ ಸೀಸನ್ 2ಕ್ಕೆ ಕರೆ ಬಂದಾಗ ತಕ್ಷಣ ಒಪ್ಪಿಕೊಂಡೆ. ನಾನು ಈ ಹಿಂದೆ ಮಾಡಿದ್ದ ಮನರಂಜನಾತ್ಮಕ ಪಾತ್ರಗಳಿಗೆ ಹೋಲಿಸಿದರೆ ಇದು ಬಹಳ ಸೂಕ್ಷ್ಮವಾದ ಹಾಗೂ ಸೌಮ್ಯ ಸ್ವಭಾವದ ಪಾತ್ರವಾಗಿತ್ತು. ನಿರ್ದೇಶಕರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದು ಉತ್ತಮ ಅನುಭವ ನೀಡಿತು, ಸೀಸನ್ 3 ಬಂದರೆ ನನ್ನ ಪಾತ್ರಕ್ಕೆ ಮತ್ತಷ್ಟು ತಿರುವುಗಳು ಸಿಗುವ ನಿರೀಕ್ಷೆಯಿದೆ" ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Bigg Boss Kannada 13: ಕಳಪೆ ಆಯ್ಕೆಯಲ್ಲಿ ಮನೆಯವರ ಒಮ್ಮತ; ಈ ಮೂವರು ಜೈಲಿಗೆ, ಕಣ್ಣೀರಿಟ್ಟ ಗಾನವಿ!

ಈ ಯಶಸ್ವಿ ವೆಬ್ ಸರಣಿಯಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್, ಹಿತಾ ಚಂದ್ರಶೇಖರ್, ಅನಿರುದ್ಧ ಆಚಾರ್ಯ, ಖುಷಿ ಚಂದ್ರಶೇಖರ್, ರಮೇಶ್ ಇಂದಿರಾ, ಅಶ್ವಿತಾ ಆರ್. ಹೆಗಡೆ, ರೂಪೇಶ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ವಿಜಯ್ ಶೋಭರಾಜ್, ಶೋಭರಾಜ್ ಪಾವೂರು, ಭಾನು ಪ್ರಕಾಶ್ ಹಾಗೂ ಅಮೃತಾ ಸೇರಿದಂತೆ ದೊಡ್ಡ ತಾರಾಗಣವೇ ಅಭಿನಯಿಸಿದೆ.