Bhagyalakshmi Kannada Serial: ಭಾಗ್ಯ ಲಕ್ಷ್ಮೀ ಸೀರಿಯಲ್ ಅಂತ್ಯ? ಆದಿ-ಭಾಗ್ಯ ಒಂದಾದ್ರಾ?
Kannada Serial: ಕಲರ್ಸ್ ಕನ್ನಡದ ಜನಪ್ರಿಯ ಮೆಗಾ ಧಾರಾವಾಹಿ ಭಾಗ್ಯಲಕ್ಷ್ಮೀ . ಇದೀಗ ಸೀರಿಯಲ್ ಅಂತಿಮ ಘಟ್ಟ ತಲುಪಿದೆ ಎನ್ನಲಾಗುತ್ತಿದೆ. ಆದಿಯ ಪ್ರೀತಿಯನ್ನು ಒಪ್ಪಿಕೊಂಡಿರುವ ಭಾಗ್ಯಳ ಮುಂದೆ, ಪಶ್ಚಾತ್ತಾಪದಿಂದ ತಾಂಡವ್ ಕ್ಷಮೆ ಕೇಳಿದ್ದಾನೆ. ಭಾಗ್ಯ ಯಾರನ್ನು ಆಯ್ಕೆ ಮಾಡುತ್ತಾಳೆ ಮತ್ತು ಧಾರಾವಾಹಿ (Serial) ಮುಕ್ತಾಯವಾಗಲಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ. ತಾಂಡವ್ ಕೊಡುವ ಕಾಟ ಒಂದೆಡೆಯಾದರೆ, ಜೀವನದ ದಾರಿ ಮತ್ತೊಂದೆಡೆ ಸವಾಲಾಗಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ -
ಕಲರ್ಸ್ ಕನ್ನಡದ (Colors Kannada) ಜನಪ್ರಿಯ ಮೆಗಾ ಧಾರಾವಾಹಿ ಭಾಗ್ಯಲಕ್ಷ್ಮೀ (bhagyalakshmi kannada serial). ಇದೀಗ ಸೀರಿಯಲ್ ಅಂತಿಮ ಘಟ್ಟ ತಲುಪಿದೆ ಎನ್ನಲಾಗುತ್ತಿದೆ. ಆದಿಯ ಪ್ರೀತಿಯನ್ನು ಒಪ್ಪಿಕೊಂಡಿರುವ ಭಾಗ್ಯಳ ಮುಂದೆ, ಪಶ್ಚಾತ್ತಾಪದಿಂದ ತಾಂಡವ್ ಕ್ಷಮೆ ಕೇಳಿದ್ದಾನೆ. ಭಾಗ್ಯ ಯಾರನ್ನು ಆಯ್ಕೆ ಮಾಡುತ್ತಾಳೆ ಮತ್ತು ಧಾರಾವಾಹಿ (Serial) ಮುಕ್ತಾಯವಾಗಲಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ. ತಾಂಡವ್ ಕೊಡುವ ಕಾಟ ಒಂದೆಡೆಯಾದರೆ, ಜೀವನದ ದಾರಿ ಮತ್ತೊಂದೆಡೆ ಸವಾಲಾಗಿದೆ. ಇಂತಹ ಸಮಯದಲ್ಲಿ ಆದಿ(Aadi) ಮತ್ತೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಸಾವಿರ ಎಪಿಸೋಡ್ ಕಂಡ ಸೀರಿಯಲ್
ಭಾಗ್ಯಾ ಈಗ ಮೊದಲಿನಂತೆ ಅಮಾಯಕ ಹೆಣ್ಣಲ್ಲ. ಅವಳು ಈಗ ಸ್ವಾವಲಂಬಿಯಾಗಿ ಬದುಕಲು ಕಲಿಯುತ್ತಿದ್ದಾಳೆ. ಆದರೆ ತಾಂಡವ್ ಮಾಡಿರುವ ಅವಮಾನಗಳು ಅವಳನ್ನು ಇಂದಿಗೂ ಕಾಡುತ್ತಿವೆ. ಇನ್ನು ಸೀರಿಯಲ್ ವಿಚಾರಕ್ಕೆ ಬಂದರೆ, ಸಾವಿರ ಎಪಿಸೋಡ್ ಕಂಡ ಸೀರಿಯಲ್ ಇದು. ಹಲವು ಧಾರಾವಾಹಿಗಳಲ್ಲಿ ಲೀಡ್ ಪಾತ್ರಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಆದರೆ ಇಲ್ಲಿ ಹಾಗಲ್ಲ. ಇಂದಿಗೂ ಎಲ್ಲ ಪಾತ್ರಗಳೂ ಹಾಗೇ ಇವೆ.
ಇದನ್ನೂ ಓದಿ: South OTT: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸೌತ್ ಸಿನಿಮಾಗಳಿವು!
ತಾಂಡವ್ ಭಾಗ್ಯಳ ಕಾಲಿಗೆ ಬಿದ್ದು ಕ್ಷಮೆ
ಕಥೆ ವಿಚಾರಕ್ಕೆ ಬಂದರೆ, ಭಾಗ್ಯ ಮೊದಲಿಗೆ ತಾಂಡವ್ ಹಾಗೂ ಶ್ರೇಷ್ಠಾಳಿಂದ ಪಡಬಾರದ ಕಷ್ಟ ಪಟ್ಟಳು. ಆದಿ ಬಂದ ತಕ್ಷಣ ಭಾಗ್ಯಾಳ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾನೆ. ಅವನು ಭಾಗ್ಯಾಳ ಮೇಲೆ ಮೊದಲಿನಿಂದಲೂ ಅಪಾರ ಗೌರವ ಇಟ್ಟುಕೊಂಡಿದ್ದಾನೆ. ಭಾಗ್ಯಾಳ ಪ್ರತಿ ಹೆಜ್ಜೆಯಲ್ಲೂ ಬೆಂಬಲವಾಗಿ ನಿಲ್ಲಲು ಆದಿ ನಿರ್ಧರಿಸಿದ್ದಾನೆ ಎನ್ನಲಾಗುತ್ತಿದೆ.
ಭಾಗ್ಯ ತನಗೆ ಆದಿಯ ಮೇಲೆ ಇರುವ ಪ್ರೀತಿಯನ್ನು ಹೇಳಿಕೊಂಡಿದ್ದಾಳೆ. ಆದಿ ದೇಶ ಬಿಟ್ಟು ಹೋಗದಂತೆ ತಡೆದಿದ್ದಾಳೆ. ಇನ್ನೇನು ಆದಿ-ಭಾಗ್ಯ ಒಂದಾಗಬೇಕು ಎನ್ನುವಷ್ಟರಲ್ಲಿಯೇ ತನ್ನ ತಪ್ಪಿನ ಅರಿವಾಗಿರುವ ತಾಂಡವ್ ಭಾಗ್ಯಳ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.
ಕ್ಲೈಮ್ಯಾಕ್ಸ್ ಏನು?
ಸದ್ಯ ಭಾಗ್ಯ ಮೊದಲಿನಂತೆಯೇ ಅಮ್ಮನ ಮಾತಿನಂತೆ ತಾಂಡವ್ನ ಬಳಿ ಹೋಗ್ತಾಳಾ ಅಥವಾ ತನ್ನ ಪಾಲಿಗೆ ದೇವರಾಗಿರೋ ಆದಿಯ ಬಳಿ ಹೋಗ್ತಾಳಾ ಎನ್ನುವ ಕುತೂಹಲ ಬಾಕಿ ಇದೆ. ಆದರೆ ಇದೆಲ್ಲನೋಡಿದ್ರೆ ಧಾರಾವಾಹಿ ಅಂತ್ಯ ಹಾಡೋದು ಪಕ್ಕಾ ಎನ್ನಲಾಗುತ್ತಿದೆ. ವೀಕ್ಷಕರು ಈಗ ಭಾಗ್ಯಾಳ ಗೆಲುವನ್ನು ನೋಡಲು ಕಾತರರಾಗಿದ್ದಾರೆ.
ಆದಿ ಮತ್ತು ಭಾಗ್ಯಾಳ ನಡುವಿನ ಸಂಬಂಧ ಯಾವ ತಿರುವು ಪಡೆಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಇನ್ನು ಸೀರಿಯಲ್ ಅಂತ್ಯ ಹಾಡುತ್ತಾ ಎನ್ನೋದು ಅಧಿಕೃತವಾಗಿ ಯಾವುದೇ ಮಾಹಿತಿ ತಂಡ ಹೇಳಿಕೊಂಡಿಲ್ಲ.
ಇದನ್ನೂ ಓದಿ: Drug Case: ಡ್ರಗ್ಸ್ ಕೇಸ್; ನಟಿ ಅಂಜು ಕೃಷ್ಣ ಸೇರಿ ಎಂಟು ಮಂದಿ ಬಂಧನ
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸುಷ್ಮಾ ಕೆ ರಾವ್, ಪದ್ಮಜಾ ರಾವ್, ಹರೀಶ್ ರಾಜ್, ಮುಖ್ಯಮಂತ್ರಿ ಚಂದ್ರು, ಸುದರ್ಶನ್ ರಂಗಪ್ರಸಾದ್, ಕಾವ್ಯ ಗೌಡ, ಸುಕೃತಾ ನಾಗ್, ಭವ್ಯ ಶ್ರೀ ಮುಂತಾದವರು ಅಭಿನಯಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಸಂಜೆ 7 ಕ್ಕೆ ಭಾಗ್ಯಲಕ್ಷ್ಮೀ ಪ್ರಸಾರ ಕಾಣುತ್ತಿದೆ.