Bigg boss Kannada 13: ಬಿಗ್ ಬಾಸ್‌ಗೆ ಸೆಲೆಕ್ಟ್ ಆಗಲು ಇದು ಲಾಸ್ಟ್ ಚಾನ್ಸ್; ಕಠಿಣವಾಯ್ತು ಟಾಸ್ಕ್!
Bigg boss Kannada 13: ಹೊಸ ಸೀಸನ್‌ನ ಆರಂಭಕ್ಕೂ ಮುನ್ನ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ದೀಕ್ಷಾ ಆರ್ ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್ ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್‌ಪಾಸ್ ಆಗಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ. ಇದೀಗ ಹೊಸ ಪ್ರೋಮೋ (Promo) ಔಟ್ ಆಗಿದೆ.
ಬಿಗ್ ಬಾಸ್ ಕನ್ನಡ -
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ʻಬಿಗ್ ಬಾಸ್ʼ (Bigg Boss Kannada 13) ಮತ್ತೆ ಪ್ರೇಕ್ಷಕರನ್ನ ರಂಜಿಸಲು ಸಜ್ಜಾಗಿದೆ. ಆದರೆ, ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯುವುದು ಅಷ್ಟೊಂದು ಸುಲಭವಿಲ್ಲ. ಹೊಸ ಸೀಸನ್‌ನ (New Season) ಆರಂಭಕ್ಕೂ ಮುನ್ನ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ದೀಕ್ಷಾ ಆರ್ ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್ ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್‌ಪಾಸ್ ಆಗಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ. ಇದೀಗ ಹೊಸ ಪ್ರೋಮೋ (Promo) ಔಟ್ ಆಗಿದೆ.
Select ಆಗಲು ಇದು last chance!
ಈಗ 13 ಜನ ವೇಟಿಂಗ್ ಲಿಸ್ಟ್ ನಲ್ಲಿ ಇದ್ದಾರೆ. ಅದರಲ್ಲಿ ಸೆಲೆಕ್ಟ್ ಆದವರು ಮುಂದಿನ ಸುತ್ತಿಗೆ ಆಯ್ಕೆ ಆಗುತ್ತಾರೆ. ಹೀಗಾಗಿ ಕೊಂಚ ಟಾಸ್ಕ್ ಟಫ್ ಇದೆ. ಮಂಜುಗಡ್ಡೆ ಟಭ್‌ನಲ್ಲಿ ಕುಳಿತುಕೊಳ್ಳುವ, ಕಲ್ಲು ಒಡೆಯುವ, ವಾಕ್ಸಿಂಗ್ ಸೇರಿದಂತೆ ಕಷ್ಟದ ಟಾಸ್ಕ್‌ಗಳನ್ನು ಕೊಟ್ಟಿದ್ದಾರೆ ತೀರ್ಪುಗಾರರು. ಇನ್ನೊಂದು ಚಾನ್ಸ್ ಮತ್ತೆ ಸಿಗಲ್ಲ ಅಂತ ಸ್ಪರ್ಧಿಗಳು ಸಖತ್ ಆಗಿಯೇ ಆಡಿದ್ದಾರೆ. ಇದೀಗ ಪ್ರೋಮೋ ಔಟ್ ಆಗಿದೆ.
ಇದನ್ನೂ ಓದಿ: Bhargavi LLB: ಬರಲಿದೆಯಂತೆ ‘ಭಾರ್ಗವಿ ಎಲ್‌ಎಲ್‌ಬಿ - 2’ ಹೊಸ ಸೀಸನ್? ಏನಿದು ಸುದ್ದಿ?
ಇನ್ನೂ ಮೊದಲ ಸಂಚಿಕೆಯಲ್ಲಿ ಜಿ.ಕೆ. ಪೂರ್ಣಿಮಾ, ದೀಕ್ಷಾ ಆರ್. ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್ ಮಂಜು ಭಾಗವಹಿಸಿದ್ದರು. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’ ಆಗಿ ಹೊರಹೊಮ್ಮಿದ್ದಾರೆ.
ಅಗ್ನಿಪರೀಕ್ಷೆ ಹೆಸರಿನಲ್ಲಿ ತಲೆ ಬೋಳಿಸುವಂತೆ ಮಾಡಿದ್ದು, ಸೆಗಣಿ ಮೆತ್ತಿಸಿದ್ದು, ಸಾಲದು ಎನ್ನುವುದಕ್ಕೆ ಗಿನ್ನೆಸ್ ದಾಖಲೆಯನ್ನೇ ಹರಿಯುವಂತೆ ಮಾಡಿದ್ದು, ಒಬ್ಬಾಕೆಗೆ ಫೋನ್ ಮಾಡಿ ಕೆಲಸ ಬಿಡುವಂತೆ ಹೇಳಿರುವುದು.ಇವೆಲ್ಲವೂ ಸಾಕಷ್ಟು ಟ್ರೋಲ್ ಕೂಡ ಆಗಿತ್ತು.
ಬಿಗ್ ಬಾಸ್ ನೋಡಲು ಅವಕಾಶ
ಇದು ಅಗ್ನಿಪರೀಕ್ಷೆ ಸುತ್ತಾದರೆ, ಇನ್ನು ಬಿಗ್ಬಾಸ್ ಸೆಟ್ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ವಾಹಿನಿ ಪ್ರೊಮೋ ಒಂದನ್ನು ಶೇರ್ ಮಾಡಿಕೊಂಡಿದೆ. ಬಿಗ್ಬಾಸ್ನ ಸೆಟ್ ಹೇಗೆ ಇರುತ್ತದೆ ಎನ್ನುವುದನ್ನು ನೋಡುವುದಕ್ಕಾಗಿ ಲಕ್ಷಾಂತರ ಮಂದಿ ಬಯಸುತ್ತಾರೆ. ಆದರೆ ಕೆಲವು ಷರತ್ತುಗಳು ಇರುವ ಹಿನ್ನೆಲೆಯಲ್ಲಿ, ಎಲ್ಲರಿಗೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: Ramayana: ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ರಾಮಾಯಣ ರಿಲೀಸ್!
ಆದ್ದರಿಂದ ಇದಕ್ಕೂ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಅರ್ಹರಿಗೆ ಬಿಗ್ಬಾಸ್ ಸೆಟ್ ನೋಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.