ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Duleep Trophy 2025: ಉತ್ತರ ವಲಯ ತಂಡಕ್ಕೆ ಶುಭಮನ್‌ ಗಿಲ್‌ ನಾಯಕ!

ಮುಂಬರುವ 2025ರ ದುಲೀಪ್‌ ಟ್ರೋಫಿ ಟೂರ್ನಿಗೆ ಉತ್ತರ ವಲಯ ತಂಡವನ್ನು ಪ್ರಕಟಿಸಲಾಗಿದೆ. ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ಗೆ ಉತ್ತರ ವಲಯ ತಂಡದ ನಾಯಕತ್ವವನ್ನು ನೀಡಲಾಗಿದೆ. ಅಲ್ಲದೆ ಭಾರತ ತಂಡದ ಯುವ ವೇಗಿಗಳಾದ ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾಗೆ ಅವಕಾಶವನ್ನು ನೀಡಲಾಗಿದೆ.

ದುಲೀಪ್‌ ಟ್ರೋಫಿ ಟೂರ್ನಿಗೆ ಉತ್ತರ ವಲಯ ತಂಡ ಪ್ರಕಟ!

ದುಲೀಪ್‌ ಟ್ರೋಫಿ ಉತ್ತರ ವಲಯ ತಂಡಕ್ಕೆ ಶುಭಮನ್‌ ಗಿಲ್‌ ನಾಯಕ.

Profile Ramesh Kote Aug 7, 2025 5:55 PM

ನವದೆಹಲಿ: ಮುಂಬರುವ ದುಲೀಪ್‌ ಟ್ರೋಫಿ ಟೂರ್ನಿಯ (Duleep Trophy 2025) ನಿಮಿತ್ತ ಉತ್ತರ ವಲಯ (North ZOne) ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ಗೆ (Shubman Gill) ನಾಯಕತ್ವವನ್ನು ನೀಡಲಾಗಿದೆ. ಭಾರತ ತಂಡದ ಯುವ ವೇಗಿಗಳಾದ ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಆಟಗಾರರು ಕೂಡ ಈ ತಂಡದಲ್ಲಿ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಅಂದ ಹಾಗೆ ಶುಭಮನ್‌ ಗಿಲ್‌ ಅವರ ಆತ್ಮೀಯ ಗೆಳೆಯ ಅಭಿಷೇಕ್‌ ಶರ್ಮಾಗೆ ಈ ತಂಡದಲ್ಲಿ ಅವಕಾಶ ಸಿಗಲಿಲ್ಲ. ಏಕೆಂದರೆ ಸೆ 9 ರಂದು ಆರಂಭವಾಗುವ ಏಷ್ಯಾ ಕಪ್‌ ಟೂರ್ನಿಯಲ್ಲಿ ಅವರು ಭಾರತ ತಂಡದ ಪರ ಆಡಲಿದ್ದಾರೆ. ಆಗಸ್ಟ್‌ 29 ರಂದು ದುಲೀಪ್‌ ಟ್ರೋಫಿ ಆರಂಭವಾಗಲಿದೆ.

ಈ ಟೂರ್ನಿಯು ತನ್ನ ಮೂಲ ಸ್ವರೂಪಕ್ಕೆ ಮರಳಲಿದೆ. ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಈಶಾನ್ಯ ವಲಯಗಳಿಂದ ಆರು ತಂಡಗಳು ಪ್ರಶಸ್ತಿಗಾಗಿ ಈ ಟೂರ್ನಿಯಲ್ಲಿ ಕಾದಾಟ ನಡಸಲಿವೆ. ಇದು ಆಯಾ ವಲಯಗಳ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಆದ್ದರಿಂದ, ಎಲ್ಲಾ ಆಟಗಾರರಿಗೆ ನ್ಯಾಯಯುತ ಅವಕಾಶಗಳನ್ನು ನೀಡಲು ಬಿಸಿಸಿಐ ವಲಯ ಸ್ವರೂಪವನ್ನು ಮರಳಿ ತರಲು ನಿರ್ಧರಿಸಿದೆ.

IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್‌ ಬುಮ್ರಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಉತ್ತರ ವಲಯದ ಆಯ್ಕೆದಾರರು ಶುಭಮನ್ ಗಿಲ್‌, ಅರ್ಷದೀಪ್‌ ಸಿಂಗ್‌ ಮತ್ತು ಹರ್ಷಿತ್ ರಾಣಾ ಅವರನ್ನು ಟೂರ್ನಿಯ ಸಮಯದಲ್ಲಿ ರಾಷ್ಟ್ರೀಯ ಕರ್ತವ್ಯಕ್ಕೆ ಕರೆ ಬಂದರೆ, ಅವರ ಸ್ಥಾನಗಳಿಗೆ ಬದಲಿ ಆಟಗಾರರನ್ನು ಘೋಷಿಸಿದ್ದಾರೆ. ಭಾರತ ತಂಡ 2025ರ ಏಷ್ಯಾ ಕಪ್‌ ಟೂರ್ನಿಯ ನಿಮಿತ್ತ ತರಬೇತಿಯನ್ನು ಪ್ರಾರಂಭಿಸಲಿದೆ. ಗಿಲ್‌ ಇನ್ನು ಮುಂದೆ ಭಾರತ ಟಿ20ಐ ತಂಡದಲ್ಲಿ ನಿಯಮಿತವಾಗಿಲ್ಲದಿದ್ದರೂ, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ, ಗೌತಮ್ ಗಂಭೀರ್ ಅವರ ಮಾರ್ಗದರ್ಶನದ ಅಡಿಯಲ್ಲಿ ಟಿ20ಐ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ.



ದುಲೀಪ್‌ ಟ್ರೋಫಿ ಟೂರ್ನಿಯ ಉತ್ತರ ವಲಯ ತಂಡ

ಶುಭಮನ್‌ ಗಿಲ್‌ (ನಾಯಕ), ಶುಭಮ್‌ ಖಜೂರಿಯಾ, ಅಂಕಿತ್‌ ಕುಮಾರ್‌, ಆಯುಷ್‌ ಬದೋನಿ, ಯಶ್‌ ಧುಲ್‌, ಅಂಕಿತ್‌ ಕಲ್ಸಿ, ನಿಶಾಂತ್‌ ಸಿಂಧು, ಸಹಿಲ್‌ ಲೊತ್ರಾ, ಮಯಾಂಕ್‌ ದಾಗರ್‌, ಯುಧ್ವೀರ್‌ ಸಿಂಗ್‌ ಚರಕ್‌, ಅರ್ಷದೀಪ್‌ ಸಿಂಗ್‌, ಹರ್ಷಿತ್‌ ರಾಣಾ, ಅನ್ಶುಲ್‌ ಕಾಂಬೋಜ್‌, ಅಕಿಬ್‌ ನಬಿ, ಕನ್ನಯ್ಯ ವಾಧವನ್‌ (ವಿ.ಕೀ).

ಮೀಸಲು ಆಟಗಾರರು: ಶುಭಮ್‌ ಅರೋರಾ (ವಿ.ಕೀ), ಜಸ್ಕರಣ್‌ವೀರ್‌ ಸಿಂಗ್‌ ಪಾಲ್‌, ರವಿ ಚೌಹಾಣ್‌, ಅಬಿದ್‌ ಮುಷ್ತಾಖ್‌, ನಿಶುಂಕ್‌ ಬಿರ್ಲಾ, ಉಮರ್‌ ನಾಜಿರ್‌, ದಿವೇಶ್‌ ಶರ್ಮಾ

ಶುಭಮ್‌ ರೊಹಿಲ್ಲಾ, ಗುರ್ನುರ್‌ ಬ್ರಾರ್‌ ಹಾಗೂ ಅನುಜ್‌ ಥಾರ್ಕಲ್‌ ಅವರನ್ನು ಶುಭಮನ್‌ ಗಿಲ್‌, ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ಅವರ ಸ್ಥಾನಗಳಿಗೆ ಮೀಸಲು ಆಟಗಾರರಾಗಿ ಸ್ಥಾನವನ್ನು ಪಡೆದಿದ್ದಾರೆ.