ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shweta Menon: ಅಶ್ಲೀಲ ದೃಶ್ಯಗಳಲ್ಲಿ ನಟನೆ, ವಯಸ್ಕರ ವೆಬ್‌ಸೈಟ್‌ಗೆ ಕ್ಲಿಪಿಂಗ್ಸ್‌ ಸೇಲ್‌- ಖ್ಯಾತ ನಟಿ ವಿರುದ್ಧ FIR

1991ರಿಂದಲೇ ಚಿತ್ರರಂಗದಲ್ಲಿ ಬಹಳ ಪ್ರಸಿದ್ಧ ರಾದ ಇವರು ನಟಿಯಾಗಿ ಖ್ಯಾತಿ ಪಡೆಯುವ ಜೊತೆಗೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವ ನಟಿ ಶ್ವೇತಾ ಮೆನನ್ ಅವರು ಅಶ್ಲೀಲ ಮತ್ತು ಅಸಭ್ಯ ದೃಶ್ಯಗಳಲ್ಲಿ ನಟಿಸಿರುವ ಆರೋಪ ಸುಳಿಯಲ್ಲಿ ಸಿಲುಕಿದ್ದಾರೆ. ನಟಿ ಶ್ವೇತಾ ಅವರ ಮೇಲೆ ಕೇರಳದ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.

ಹಸಿ-ಬಿಸಿ ದೃಶ್ಯಗಳಲ್ಲಿ ನಟಿಸಿದ್ದ ಖ್ಯಾತ ನಟಿ ವಿರುದ್ಧ FIR

ಶ್ವೇತಾ ಮೆನನ್

Profile Pushpa Kumari Aug 7, 2025 5:18 PM

ನವದೆಹಲಿ: ಮಲಯಾಳಂನ ಖ್ಯಾತ ನಟಿ ಶ್ವೇತಾ ಮೆನನ್ (Shweta Menon) ಅವರು ತಮ್ಮ ಅದ್ಭುತ ಅಭಿ ನಯದಿಂದ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಬಹು ಭಾಷಾ ನಟಿ ಎಂದು ಖ್ಯಾತಿ ಪಡೆದಿದ್ದಾರೆ. 1991ರಿಂದಲೇ ಚಿತ್ರರಂಗದಲ್ಲಿ ಬಹಳ ಪ್ರಸಿದ್ಧ ರಾದ ಇವರು ನಟಿಯಾಗಿ ಖ್ಯಾತಿ ಪಡೆಯುವ ಜೊತೆಗೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಅದರೊಂದಿಗೆ ಟಿವಿ ವಾಹಿನಿಯ ಕೆಲ ಕಾರ್ಯಕ್ರಮದ ಆ್ಯಂಕರ್ ಆಗಿ ಕೂಡ ಜನರನ್ನು ರಂಜಿಸಿದ್ದಾರೆ. ಮಲಯಾಳಂ ಸಿನಿಮಾ ಇಂಡಸ್ಟ್ರಿ ಇವರ ನಟನೆಗೆ ಹೆಚ್ಚು ಅವಕಾಶ ನೀಡಿದ್ದು ಮಾಲಿವುಡ್ ನಲ್ಲಿ ಅಭಿಮಾನಿ ಬಳಗ ಕೂಡ ಇವರಿಗಿದೆ. ಇದೀಗ ನಟಿ ಶ್ವೇತಾ ಮೆನನ್ ಅವರು ಅಶ್ಲೀಲ ಮತ್ತು ಅಸಭ್ಯ ದೃಶ್ಯಗಳಲ್ಲಿ ನಟಿಸಿರುವ ಆರೋಪ ಸುಳಿಯಲ್ಲಿ ಸಿಲುಕಿದ್ದಾರೆ. ನಟಿ ಶ್ವೇತಾ ಅವರ ಮೇಲೆ ಕೇರಳದ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಪ್ರಕರಣದ ಬಗ್ಗೆ ತನಿಖೆ ಮಾಡಲಾಗುತ್ತಿದೆ.

ಕೇರಳದ ಎರ್ನಾಕುಲಂ ಮೂಲದ ಸಾಮಾಜಿಕ ಹೋರಾಟಗಾರ ಮಾರ್ಟಿನ್ ಮೆನಾಚೆರಿ ಅವರು ನಟಿ ಶ್ವೇತಾ ಮೆನನ್ ವಿರುದ್ಧ ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ್ದಾರೆಂಬ ಕಾರಣಕ್ಕೆ ದೂರನ್ನು ದಾಖ ಲಿಸಿದ್ದರು. ನಟಿ ಶ್ವೇತಾ ಮೆನನ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತಿ ಪಡೆದಿದ್ದು ಇದೀಗ ತಮ್ಮ ವೈಯಕ್ತಿಕ ಲಾಭಕ್ಕಾಗಿ ಹಣದಾಸೆಗಾಗಿ ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ್ದಾರೆಂದು ಮಾರ್ಟಿನ್ ಮೆನಾ ಚೆರಿ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಹೀಗಾಗಿ 51 ವರ್ಷದ ನಟಿ ಶ್ವೇತಾ ಮೆನನ್ ವಿರುದ್ಧ, ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 67 ಎ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿಯೂ ಉಲ್ಲೇಖಿಸಲಾಗಿದೆ.

ಶ್ವೇತಾ ಮೆನನ್ ಅಶ್ಲೀಲ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಅದರಿಂದ ಆರ್ಥಿಕ ಲಾಭ ಪಡೆಯ ಬೇಕೆಂಬ ಉದ್ದೇಶದಿಂದ ಅದನ್ನು ಸೋಶಿಯಲ್ ಮೀಡಿಯಾ ಹಾಗೂ ವಯಸ್ಕರ ವೆಬ್‌ ಸೈಟ್‌ಗಳಲ್ಲಿ ಶೇರ್ ಆಗುವಂತೆ ಮಾಡಿದ್ದಾರೆ ಎಂದು ನಟಿ ಶ್ವೇತಾ ವಿರುದ್ಧ ಮಾರ್ಟಿನ್ ಮೆನಾಚೆರಿ ಆರೋಪ ಮಾಡಿದ್ದಾರೆ. ನಟಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು ಈಗಾಗಲೇ ಪೊಲೀಸರು ತನಿಖೆ ಕೂಡ ನಡೆಸುತ್ತಿದ್ದಾರೆ.

ನಟಿ ಶ್ವೇತಾ ಮೆನನ್ ವಿರುದ್ಧ ಮಾಡಲಾಗಿದ್ದ ಆರೋಪದ ಕುರಿತು ಅನೇಕ ಅನುಮಾನಗಳು ಕೂಡ ವ್ಯಕ್ತವಾಗುತ್ತಿದೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘಕ್ಕೆ ಅಧ್ಯಕ್ಷ ಸ್ಥಾನಕ್ಕೆ ನಟಿ ಶ್ವೇತಾ ಕೂಡ ಸ್ಪರ್ಧಿಸಬೇಕೆಂದುಕೊಂಡಿದ್ದರಂತೆ. ಇದೇ ಆಗಸ್ಟ್ 15 ರಂದು 'ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್' ಇದರ ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯಲಿದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಿಂದ ನಟಿ ಶ್ವೇತಾ ಅವರನ್ನು ದೂರ ಇಡಲು ಈ ಗಿಮಿಕ್ ಮಾಡಲಿರುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನು ಓದಿ:Aparichithe Movie: 'ತಾಯವ್ವ' ನಟಿ ಗೀತಪ್ರಿಯ ಈಗ 'ಅಪರಿಚಿತೆ'- ಚಿತ್ರದ ಶೀರ್ಷಿಕೆ ಪೋಸ್ಟರ್‌ ರಿಲೀಸ್‌

ನಟಿ ಶ್ವೇತಾ ಮೆನನ್ ಮಲಯಾಳಂನಲ್ಲಿ 'ಸಾಲ್ಟ್ ಆ್ಯಂಡ್ ಪೆಪ್ಪರ್', 'ರತಿನಿರ್ವೇದಂ' , 'ಕಾಳಿ ಮಣ್ಣು'ಪಾಲೆರಿ ಮಾಣಿಕ್ಯಂ: ಒರು ಪಾತಿರಕೊಲಪತಕತಿಂತೆ ಕಥಾ' ಸೇರಿದಂತೆ ಅನೇಕ ಸಿನಿಮಾ ಗಳಲ್ಲಿ ನಟಿಸಿದ್ದಾರೆ. 1994ರ ಫೆಮಿನಾ ಮಿನ್ ಇಂಡಿಯಾ ಏಷ್ಯಾ ಪೆಸಿಫಿಕ್ ಆಗಿದ್ದವರು. ಕೇರಳ ರಾಜ್ಯ ಪ್ರಶಸ್ತಿ ಹಾಗೂ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ನಟ ಉಪೇಂದ್ರ ಅಭಿನಯದ 'ಓಂಕಾರ' ಸಿನಿಮಾದಲ್ಲಿಯೂ ಅಭಿನಯಿಸಿದ್ದರು. 2018ರ ಮಲಯಾಳಂ ಬಿಗ್ ಬಾಸ್ ಸೀಸನ್ 1ರ ಸ್ಪರ್ಧಿಯಾಗಿ ಕೂಡ ಭಾಗವಹಿಸಿ ಖ್ಯಾತಿ ಪಡೆದಿದ್ದ ಇವರು ತಮ್ಮ 51ನೇ ವಯಸ್ಸಿಗೆ ಅಶ್ಲೀಲ ನಟನೆಯ ಗಂಭೀರವಾದ ಆರೋಪ ಹೊಂದಿರುವುದು ಅವರ ಅಭಿಮಾನಿಗಳಿಗೆ ಆಘಾತವಾಗಿದೆ.