ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಈ ವಾರ ಔಟ್‌ ಆಗೋದು ಯಾರು? ಬಿಗ್‌ ಬಾಸ್‌ ಕೊಟ್ಟ ಹಿಂಟ್‌ ಏನು?

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಮಾಳು (Malu) ಅವರು ಮೂರನೇ ಕ್ಯಾಪ್ಟನ್‌ (Captain) ಆಗಿ ಹೊರ ಹೊಮ್ಮಿದ್ದಾರೆ. ಇನ್ನು ಗಿಲ್ಲಿ ಈ ವಾರ ಕಳಪೆ ಆದರೆ, ಚಂದ್ರಪ್ರಭ ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ. ಈ ವಾರ (Bigg Boss Kannada 12) ಸುದೀಪ್‌ ಅವರು ಟಾಸ್ಕ್‌ ನೀಡದೇ ಎಲ್ಲ ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್‌ (Nominate) ಮಾಡಿದ್ದರು. ಅದರಂತೆ ಈ ವಾರ ಸ್ಪರ್ಧಿಗಳು ಆಡಿದ್ದಾರೆ. ವೀಕೆಂಡ್‌ ಬಂದಿದೆ. ನಾಳೆ ಯಾರು ಮನೆಯಿಂದ ಔಟ್‌ (Out) ಆಗ್ತಾರೆ ಅನ್ನೋದು ಈಗ ವೀಕ್ಷಕರಲ್ಲಿ ಇರೋ ಕುತೂಹಲ.

ಈ ವಾರ ಔಟ್‌ ಆಗೋದು ಯಾರು? ಬಿಗ್‌ ಬಾಸ್‌ ಕೊಟ್ಟ ಹಿಂಟ್‌ ಏನು?

bigg boss kannada -

Yashaswi Devadiga
Yashaswi Devadiga Nov 8, 2025 10:13 AM

ಈ ವಾರ (Bigg Boss Kannada 12) ಸುದೀಪ್‌ ಅವರು ಟಾಸ್ಕ್‌ ನೀಡದೇ ಎಲ್ಲ ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್‌ (Nominate) ಮಾಡಿದ್ದರು. ಇಲ್ಲಿ ಎಲ್ಲರಿಗೂ ವ್ಯಕ್ತಿತ್ವದ ಸಮಸ್ಯೆ ಇದೆ. ಅದನ್ನ ಈ ವಾರ ಪ್ರೂವ್‌ ಮಾಡಿಕೊಳ್ಳಿ ಎಂದು ಹೇಳಿದ್ದರು. ಅದರಂತೆ ಈ ವಾರ ಸ್ಪರ್ಧಿಗಳು ಆಡಿದ್ದಾರೆ. ವೀಕೆಂಡ್‌ ಬಂದಿದೆ. ನಾಳೆ ಯಾರು ಮನೆಯಿಂದ ಔಟ್‌ (Out) ಆಗ್ತಾರೆ ಅನ್ನೋದು ಈಗ ವೀಕ್ಷಕರಲ್ಲಿ ಇರೋ ಕುತೂಹಲ.

ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ

ಈ ವಾರದ ಆರಂಭದಲ್ಲಿ ಗಿಲ್ಲಿ ಮೇಲೆ ರಿಷಾ ಗೌಡ ಅವರು ಹಲ್ಲೆ ಮಾಡಿದ್ದರು. ಸಾಮಾನ್ಯವಾಗಿ ಹಲ್ಲೆ ಮಾಡಿದ ತಕ್ಷಣ ಅವರನ್ನು ಮನೆಯಿಂದ ಕಳುಹಿಸಲಾಗುತ್ತದೆ. ಆದರೆ, ಹಲ್ಲೆ ನಡೆದ ದಿನ ಅವರನ್ನು ಮನೆಯಿಂದ ಕಳುಹಿಸಿರಲಿಲ್ಲ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಅವರು ದೊಡ್ಮನೆಯಿಂದ ಹೊರಕ್ಕೆ ಹೊಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಪ್ರೋಮೋ ಕೂಡ ಈ ಸುಳಿವು ನೀಡಿದೆ.

ಇದನ್ನೂ ಓದಿ: BBK 12: ʻಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆʼ; ಮಾಳು ಖಡಕ್ ಮಾತು!

ಬಿಗ್‌ ಬಾಸ್‌ ಕೊಟ್ಟ ಸುಳಿವು!

ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ನಿಯಮವನ್ನು ರಿಷಾ (Risha) ಅವರು ಬ್ರೇಕ್ ಮಾಡಿದ್ದಾರೆ. ಗಿಲ್ಲಿ ಮೇಲೆ ಅವರು ಕೈ ಮಾಡಿದ್ದಾರೆ. ಕಳೆದ ಸೀಸನ್​ ಅಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆದಾಗ ಸಾಕಷ್ಟು ಚರ್ಚೆಗಳು ನಡೆದವು.

ಆದರೆ ರಿಷಾ ಅವರು ಹಲ್ಲೆ ಮಾಡಿದ ಎಪಿಸೋಡ್‌ನಲ್ಲಿ ಬಿಗ್‌ ಬಾಸ್‌ ಒಂದು ಸೂಚನೆ ನೀಡಿದ್ದರು. ಸಂಚಿಕೆಯಲ್ಲಿ ಮನೆಯ ಸದಸ್ಯರು ಬಿಗ್ ಬಾಸ್​ನ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಎಲ್ಲಾ ನಿಯಮ ಉಲ್ಲಂಘನೆಗಳನ್ನು, ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪರವರು ಚರ್ಚಿಸಿ, ವಿಶ್ಲೇಷಿಸಿ ನ್ಯಾಯ ಒದಗಿಸುತ್ತಾರೆ ಎಂದು ಬರೆಯಲಾಗಿತ್ತು. ರಿಷಾ ಅವರ ಕುರಿತು ವೀಕೆಂಡ್‌ ಪಂಚಾಯ್ತಿಯಲ್ಲಿ ಚರ್ಚೆ ಆಗೋದು ಫಿಕ್ಸ್‌ ಆದಂತಿದೆ.

ಗಿಲ್ಲಿ ಕಳಪೆ

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಮಾಳು (Malu) ಅವರು ಮೂರನೇ ಕ್ಯಾಪ್ಟನ್‌ (Captain) ಆಗಿ ಹೊರ ಹೊಮ್ಮಿದ್ದಾರೆ. ಇನ್ನು ಗಿಲ್ಲಿ ಈ ವಾರ ಕಳಪೆ ಆದರೆ, ಚಂದ್ರಪ್ರಭ ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ. ಗಿಲ್ಲಿ ನಟನಿಗೆ ಕಳಪೆ ಪಟ್ಟ ಸಿಕ್ಕ ಖುಷಿಯಲ್ಲಿದ್ದಾರೆ ʻಬಿಗ್‌ʼ ಸ್ಪರ್ಧಿಗಳು. ಆದರೆ ವೀಕ್ಷಕರು ಈ ಬಗ್ಗೆ ಭಾರೀ ಅಸಮಾಧಾನವನ್ನ ಹೊರ ಹಾಕಿದ್ದಾರೆ.

ಗಿಲ್ಲಿ ಕಳಪೆ ಅನೌನ್ಸ್‌ ಆದ ಬೆನ್ನಲ್ಲೇ ನೆಟ್ಟಿಗರು ಈ ರೀತಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಬಿಗ್‌ ಬಾಸ್‌ ನೋಡ್ತಾ ಇರೋದು ಗಿಲ್ಲಿ ಹಾಗೂ ಕಾವ್ಯಳಿಂದ. ಅವರಿಬ್ಬರ ತಮಾಷೆಯ ಕಚಗುಳಿಗಾಗಿ. ಆದರೆ ಶುಕ್ರವಾರ ಎಪಿಸೋಡ್‌ನಲ್ಲಿ ಏನೂ ಅರ್ಥವೇ ಆಗದ ಚಂದ್ರಪ್ರಭ ಅವರಿಗೆ ಉತ್ತಮ ಅಂತ ಕೊಟ್ಟಿದ್ದಾರೆ. ಆದರೆ ಕಳಪೆ ಸುಧಿ ಅವರ ಕಡೆ ಹೋಗಿತ್ತು.

ಇದನ್ನೂ ಓದಿ: Bigg Boss: ಬಿಗ್‌ ಬಾಸ್‌ಗೆ ಹೋಗಿ ತಪ್ಪು ಮಾಡಿದೆ, ಬಹಳ ಹಿಂಸೆ ಅನುಭವಿಸಿದೆ! ಹೀಗ್ಯಾಕೆ ಅಂದ್ರು ಖ್ಯಾತ ನಿರೂಪಕಿ?

ಆದರೆ ಎಲ್ಲಿ ಹೆಚ್ಚು ನಂಗೇ ವೋಟ್‌ ಬರುತ್ತೆ ಅಂತ ಅಶ್ವಿನಿ, ಜಾಹ್ನವಿ ಎಲ್ಲರೂ ಕಣ್ಣೋಟದ ಲೆಕ್ಕಾಚಾರ ಮಾಡಿ ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.