Bigg Boss Kannada 13: ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ; ಲಿಖಿತ್, ಮಂಜಗೆ ಆಸಿಯಾ ಆವಾಜ್
Bigg Boss Kannada 13: ಬಿಗ್‌ಬಾಸ್ ಈ ಸೀಸನ್‌ನ ಸ್ಪರ್ಧಿಗಳ ಪೈಕಿ ಕಿಚ್ಚನ ಚಪ್ಪಾಳೆ ಪಡೆದುಕೊಂಡ ಮೊದಲ ಕಂಟೆಸ್ಟಂಟ್ ಆಸಿಯಾ . ಆದರೀಗ ಅಸಿಯಾ ಲಿಖಿತ್‌ಗೆ ಹೊಡದೇ ಕಳಿಸುವೆ ಎಂದು ಆವಾಜ್ ಹಾಕಿದ್ದಾರೆ. ಮಂಜ ಕೂಡ ಅತಿಯಾದ ಮಾತುಗಳಿಂದ ಆಸಿಯಾ ಅವರನ್ನು ಕೆಣಕಿದ್ದಾರೆ. ‘ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ ಎಂದು ಆಸಿಯಾ ನೇರವಾಗಿ ಹೇಳಿದ್ದಾರೆ. ಏನಿದು ಅಸಲಿ ಮ್ಯಾಟರ್?
ಬಿಗ್ ಬಾಸ್ ಕನ್ನಡ -
ಬಿಗ್‌ಬಾಸ್ (Bigg Boss Kannada 13) ಈ ಸೀಸನ್‌ನ ಸ್ಪರ್ಧಿಗಳ ಪೈಕಿ ಕಿಚ್ಚನ ಚಪ್ಪಾಳೆ ಪಡೆದುಕೊಂಡ ಮೊದಲ ಕಂಟೆಸ್ಟಂಟ್ ಆಸಿಯಾ (Asia). ಆದರೀಗ ಅಸಿಯಾ ಲಿಖಿತ್‌ಗೆ ಹೊಡದೇ ಕಳಿಸುವೆ ಎಂದು ಆವಾಜ್ ಹಾಕಿದ್ದಾರೆ. ಮಂಜ (Manja) ಕೂಡ ಅತಿಯಾದ ಮಾತುಗಳಿಂದ ಆಸಿಯಾ ಅವರನ್ನು ಕೆಣಕಿದ್ದಾರೆ. ‘ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ ಎಂದು ಆಸಿಯಾ ನೇರವಾಗಿ ಹೇಳಿದ್ದಾರೆ.
ಮೊದಲಿಗೆ ಲಿಖಿತ್ ಅವರು ಆಸಿಯಾ ಅವರನ್ನು ಅಣಕಿಸಿದರು. ಆಸಿಯಾ ಎಷ್ಟೇ ಸೂಚನೆ ನೀಡಿದರೂ ಲಿಖಿತ್ ಸುಮ್ಮನಾಗಿಲ್ಲ. ಮಂಜ ಕೂಡ ಅತಿಯಾದ ಮಾತುಗಳಿಂದ ಆಸಿಯಾ ಅವರನ್ನು ಕೆಣಕಿದ್ದಾರೆ. ಲಿಖಿತ್ ಹೀಗೆ ವರ್ತಿಸುವ ವೇಳೆ ಆಸಿಯಾ ಡೈನಿಂಗ್ ಹಾಲ್‌ನಲ್ಲಿ ಕುಳಿತಿದ್ದರು. ಲಿಖಿತ್ ತನ್ನನ್ನ ನೋಡಿ ವ್ಯಂಗ್ಯ ಮಾಡುತ್ತಿದ್ದಂತೆ, `ಮಂಗನ ಥರ ಕಾಣ್ತೀಯ’ ಎಂದು ಆಸಿಯಾ ಅಲ್ಲಿಂದಲೇ ಹೇಳುತ್ತಾರೆ.
ಇದನ್ನೂ ಓದಿ: Ramayana: ರಾಮಾಯಣ ಸಿನಿಮಾದ ದೃಶ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಕೇಶ್ ಖನ್ನಾ
ಲಿಖಿತ್ ವರ್ತನೆ ರಿಪೀಟ್ ಆಗುತ್ತಿದ್ದಂತೆ ಕುಳಿತ ಜಾಗದಿಂದ ಎದ್ದು ಲಿಖಿತ್ ಬಳಿ ಬರುವ ಆಸಿಯಾ, ‘ಮುಚ್ಕೊಂಡ್ ಇದ್ರೆ ಸರಿ ಇವಾಗ’ ಎಂದು ಲಿಖಿತ್‌ಗೆ ಬೈಯುತ್ತಾರೆ. ಅಲ್ಲಿಂದಲೇ ಮಂಜ ಸೀಟಿ ಹೊಡೆದು ಲಿಖಿತ್‌ಗೆ ಬೆಂಬಲಿಸುವಂತೆ ವರ್ತಿಸುತ್ತಾರೆ. ‘ನಾನು ಈ ಮನೆಯಿಂದ ಹೊರಗಡೆ ಹೋದರೂ ಪರವಾಗಿಲ್ಲ. ಇಬ್ಬರು ಹುಡುಗರನ್ನು ಹೊಡೆದುಹೋದೆ ಅಂತ ಆಗಲಿ’ ಎಂದು ಆಸಿಯಾ ಆಗ ಅಬ್ಬರಿಸಿದ್ದಾರೆ. ಇಷ್ಟು ಸುಮ್ಮನಾಗದ ಮಂಜು ಅಳುಮುಂಜಿ ಎಂದು ರೇಗಿಸಿದ್ದಾರೆ.
ಈ ಕಿರಣ್, ಧನುಷ್, ಲಿಖಿತ್, ಮಂಜ ಹಾಗೂ ಸೆಲೆಬ್ರಿಟಿಗಳಾದ ಯಶಸ್, ಸಂಗೀತಾ ನಾಮಿನೇಟ್ ಆಗಿದ್ದಾರೆ. . ಕಾಮನರ್ಸ್ ವಿಭಾಗದಿಂದ ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್ ಮತ್ತು ಮಂಜ ನಾಮಿನೇಟ್ ಆಗಿದ್ದರೆ, ಸೆಲೆಬ್ರಿಟಿ ವಿಭಾಗದಿಂದ ನಟ ಯಶಸ್ ಕೃಷ್ಣ, ನಟಿ ಸಂಗೀತಾ ಭಟ್ ಡೇಂಜರ್ ಜೋನ್‌ನಲ್ಲಿದ್ದಾರೆ. ಆರಂಭದಿಂದಲೂ ಸೈಲೆಂಟ್ ಆಗಿದ್ದ ಯಶಸ್ ಈ ವಾರ ನಿಯಮ ಮೀರಿ ನಡೆದುಕೊಂಡಿರುವುದು ಅವರಿಗೆ ಮುಳುವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Bigg Boss Kannada 13: ಯಾರೂ ಕೂಡ ಕ್ಯಾಪ್ಟನ್ ಆಗಲು ಅರ್ಹರಲ್ಲ : ಸ್ಪರ್ಧಿಗಳಿಗೆ ಛೀಮಾರಿ ಹಾಕಿದ ಬಿಗ್ ಬಾಸ್
ಜೊತೆಗೆ ಸಂಗೀತಾ ಭಟ್ ಕೂಡ ಉತ್ತಮ ಪ್ರದರ್ಶನ ನೀಡದಿದ್ದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಈ ವಾರ ಸೆಲೆಬ್ರಿಟಿ ಸ್ಪರ್ಧಿಯೊಬ್ಬರು ಮನೆಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದ್ದು, ಅಂತಿಮ ತೀರ್ಪು ಯಾರ ಪರವಾಗಿರಲಿದೆ ಎಂಬುದು ವಾರಾಂತ್ಯದಲ್ಲಿ ಬಹಿರಂಗವಾಗಲಿದೆ.