Bigg Boss Kannada 13: ಬಿಗ್ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ದಾಟಿ ಬಂದ ಲಿಖಿತ್ ಔಟ್!
Bigg Boss Kannada 13:ಬಿಗ್ ಬಾಸ್ ಮನೆಯಿಂದ ಲಿಖಿತ್ ಗೋಂದಿ ಎಲಿಮಿನೇಟ್ (Eliminate) ಆಗಿದ್ದಾರೆ. ಈ ಬಾರಿ ಜನಸಾಮಾನ್ಯರಿಗೆ ದೊಡ್ಮನೆ ಬಾಗಿಲು ತೆರೆದಿದ್ದು, ದೇಶಾದ್ಯಂತ ಲಕ್ಷಾಂತರ ಅಪ್ಲಿಕೇಶನ್‌ಗಳು ಬಂದಿದ್ದವು. ಆ ಅಪಾರ ಪ್ರಮಾಣದ ಅರ್ಜಿಗಳಲ್ಲಿ 60 ಜನರನ್ನ ಫಿಲ್ಟರ್ ಮಾಡಿ ʻಅಗ್ನಿಪರೀಕ್ಷೆʼ ಸುತ್ತಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.ಅಗ್ನಿಪರೀಕ್ಷೆʼಯಲ್ಲಿ, ತೀರ್ಪುಗಾರರ ತೀವ್ರ ಪರೀಕ್ಷೆ ಹಾಗೂ ಜನರ ವೋಟಿಂಗ್ ನಿರ್ಧಾರದ ಆದಾರದ ಮೇಲೆ ಲಿಖಿತ್ ಗೋಂದಿ ʻಅಗ್ನಿಪರೀಕ್ಷೆʼಯಲ್ಲಿ ಪಾಸ್ ಆಗಿ ʻಬಿಗ್ ಬಾಸ್ʼ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೀಗ ಮನೆಯಿಂದ ಔಟ್ ಆಗಿದ್ದಾರೆ.
ಲಿಖಿತ್ ಗೋಂದಿ -
ಬಿಗ್ ಬಾಸ್ ಮನೆಯಿಂದ ಲಿಖಿತ್ ಗೋಂದಿ (Likith Gondi) ಎಲಿಮಿನೇಟ್ (Eliminate) ಆಗಿದ್ದಾರೆ. ಈ ಬಾರಿ ಜನಸಾಮಾನ್ಯರಿಗೆ ದೊಡ್ಮನೆ ಬಾಗಿಲು ತೆರೆದಿದ್ದು, ದೇಶಾದ್ಯಂತ ಲಕ್ಷಾಂತರ ಅಪ್ಲಿಕೇಶನ್‌ಗಳು ಬಂದಿದ್ದವು. ಆ ಅಪಾರ ಪ್ರಮಾಣದ ಅರ್ಜಿಗಳಲ್ಲಿ 60 ಜನರನ್ನ ಫಿಲ್ಟರ್ ಮಾಡಿ ʻಅಗ್ನಿಪರೀಕ್ಷೆʼ (Agniparikshe) ಸುತ್ತಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.ಅಗ್ನಿಪರೀಕ್ಷೆʼಯಲ್ಲಿ, ತೀರ್ಪುಗಾರರ ತೀವ್ರ ಪರೀಕ್ಷೆ ಹಾಗೂ ಜನರ ವೋಟಿಂಗ್ ನಿರ್ಧಾರದ ಆದಾರದ ಮೇಲೆ ಲಿಖಿತ್ ಗೋಂದಿ ʻಅಗ್ನಿಪರೀಕ್ಷೆʼಯಲ್ಲಿ ಪಾಸ್ ಆಗಿ ʻಬಿಗ್ ಬಾಸ್ʼ ದೊಡ್ಮನೆಗೆ (Bigg Boss Kannada 13) ಎಂಟ್ರಿ ಕೊಟ್ಟಿದ್ದರು. ಆದರೀಗ ಮನೆಯಿಂದ ಔಟ್ ಆಗಿದ್ದಾರೆ.
ಅಗ್ನಿಪರೀಕ್ಷೆಯ ಸ್ಪರ್ಧಿಯಾಗಿದ್ದ ಲಿಖಿತ್
ಸಂಗೀತಾ ಭಟ್, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಅವರು ಡೇಂಜರ್ ಝೋನ್ನಲ್ಲಿ ಇದ್ದರು. ವಿಮಾನಯಾನದ ಕಾನ್ಸೆಪ್ಟ್ ಆಗಿರುವುದರಿಂದ ಕಮಾಂಡೋಗಳ ಮಾದರಿಯಲ್ಲಿ ವೇಷ ಧರಿಸಿದವರು ಬಿಗ್ ಬಾಸ್ ಮನೆಗೆ ಬಂದು, ಎಲಿಮಿನೇಟ್ ಆಗುವ ಸದಸ್ಯರನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ.
ಅಗ್ನಿಪರೀಕ್ಷೆಯ ಸ್ಪರ್ಧಿಯಾಗಿದ್ದ ಲಿಖಿತ್ ಗೋಂದಿ, ಬಿಗ್‌ಬಾಸ್ ಮನೆ ಬಿಗ್‌ಬಾಸ್ ಅಗ್ನಿಪರೀಕ್ಷೆಗೆ ತಂದೆಯೊಂದಿಗೆ ಆಗಮಿಸಿದ್ದರು. ಅಪ್ಪ ಮತ್ತು ಮಗನ ಜೋಡಿ ಎಲ್ಲರ ಗಮನ ಸೆಳೆದಿದ್ದರು. ತಂದೆ-ಮಗ ಜೊತೆಯಾಗಿ ಬರಬಹುದು ಎಂಬ ನಿರೀಕ್ಷೆ ಹೆಚ್ಚಿತ್ತು.
ಲಿಖಿತ್ ಆಟ ಕೂಡ ಚೆನ್ನಾಗಿ ಆಡಿದ್ದಾರೆ. ಆದರೆ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲ. ಅದು ಅವರಿಗೆ ಮೈನಸ್ ಆಗಿದೆ. ಈ ವಾರ ಟಾಸ್ಕ್‌ನ ಜವಾಬ್ದಾರಿ ವಹಿಸಿದ್ದ ಮಂಜು ಹಾಗೂ ಲಿಖಿತ್ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ನಿರ್ವಹಿಸಿದ್ದರು. ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಟಾಸ್ಕ್‌ನ್ನೇ ರದ್ದು ಮಾಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಉಸ್ತುವಾರಿಗಳಾಗಿ ಮಂಜು ಮತ್ತು ಲಿಖಿತ್ ಅವರಿಗೆ ಆಟವನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನೀಡಲಾಗಿತ್ತು.
ಆಸಿಯಾ ಜೊತೆ ಕಿರಿಕ್
ಲಿಖಿತ್ ಗೋಂದಿ ಅವರ ನಡವಳಿಕೆಯಿಂದ ಜಗಳ ಶುರುವಾಗಿತ್ತು. ಡೈನಿಂಗ್ ಹಾಲ್‌ನಲ್ಲಿ ಕುಳಿತಿದ್ದ ಆಸಿಯಾ ಅವರನ್ನ ನೋಡಿ ಲಿಖಿತ್ ವ್ಯಂಗ್ಯವಾಗಿ ಅಣಕಿಸಲು ಪ್ರಾರಂಭಿಸಿದ್ರು. ಆಸಿಯಾ ಎಷ್ಟೇ ಎಚ್ಚರಿಕೆ ನೀಡಿದ್ರೂ, ಸುಮ್ಮನಾಗದ ಲಿಖಿತ್ ತಮ್ಮ ರೇಗಿಸುವ ಚಟುವಟಿಕೆಯನ್ನ ಮುಂದುವರಿಸಿದರು.
ಇದನ್ನೂ ಓದಿ: Bigg Boss Kannada 13: `ಹೊರಡೋದಾದ್ರೆ ಹೊರಡಿ'; ಗಾನವಿಯ ಬಾಯಿ ಬಂದ್ ಮಾಡಿದ ಸುದೀಪ್!
ಇದರಿಂದ ತಾಳ್ಮೆ ಕಳೆದುಕೊಂಡ ಆಸಿಯಾ ಫಿರ್ದೋಸ್, “ಮಂಗನ ತರಹ ಕಾಣ್ತಿಯಾ" ಎಂದು ಕುಳಿತ ಜಾಗದಿಂದಲೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡ್ರು.ಇಬ್ಬರ ಚೇಷ್ಟೆ ಹಾಗೂ ಅಣಕಿಸುವಿಕೆಯಿಂದ ಕೋಪದ ಗಡಿ ದಾಟಿದ ಆಸಿಯಾ, "ನಾನು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋದರೂ ಪರವಾಗಿಲ್ಲ, ಆದರೆ ಈ ಇಬ್ಬರು ಹುಡುಗರನ್ನ ಹೊಡೆದುಹೋದೆ ಅಂತ ಆಗ್ಲಿ..” ಎಂದು ಅಬ್ಬರಿಸಿದ್ದರು.