Bigg Boss Kannada 13: Puzzle ಪೈಪೋಟಿ; ಹೆಜ್ಜೆ ಹೆಜ್ಜೆಗೂ ಸವಾಲ್!
Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ (Bigg Bos Kannada 13) ಬರ್ತಾ ಬರ್ತಾ ಟಾಸ್ಕ್ಗಳು ಕಠಿಣವಾಗುತ್ತಿವೆ. ಸದ್ಯಕ್ಕೆ ಈ ವಾರ ಎರಡು ತಂಡಗಳಲ್ಲಿ ಟಾಸ್ಕ್ ಆಡಬೇಕು ಎಂದು ನಿರ್ಧರಿಸಲಾಗಿದೆ. ಸ್ವತಂತ್ರವಾಗಿ ಆಡುವ ಸಾಮರ್ಥ್ಯ ಇರುವವರು ಯಾರು? ಇಲ್ಲದವರು ಯಾರು ಎಂದು ಕ್ಯಾಪ್ಟನ್ ಧನುಷ್ (Captain Dhanuh) ತೀರ್ಮಾನಿಸಿದ್ದಾರೆ. ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಿಗೆ ಈ ಬಾರಿ ಅತ್ಯಂತ ಕಠಿಣವಾದ ಟಾಸ್ಕ್ ಒಂದನ್ನು ನೀಡಲಾಗಿದೆ. ಹಗ್ಗದ ಮೂಲಕ ಪಜಲ್ ಪೀಸ್ ಹಿಡಿದು ಅಡೆತಡೆಗಳನ್ನು ದಾಟುತ್ತಾ, ಸಮತೋಲನ ಕಾಯ್ದುಕೊಂಡು ಸಾಗಬೇಕು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Bos Kannada 13) ಬರ್ತಾ ಬರ್ತಾ ಟಾಸ್ಕ್ಗಳು ಕಠಿಣವಾಗುತ್ತಿವೆ. ಸದ್ಯಕ್ಕೆ ಈ ವಾರ ಎರಡು ತಂಡಗಳಲ್ಲಿ ಟಾಸ್ಕ್ ಆಡಬೇಕು ಎಂದು ನಿರ್ಧರಿಸಲಾಗಿದೆ. ಸ್ವತಂತ್ರವಾಗಿ ಆಡುವ ಸಾಮರ್ಥ್ಯ ಇರುವವರು ಯಾರು? ಇಲ್ಲದವರು ಯಾರು ಎಂದು ಕ್ಯಾಪ್ಟನ್ ಧನುಷ್ (Captain Dhanuh) ತೀರ್ಮಾನಿಸಿದ್ದಾರೆ. ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಿಗೆ ಈ ಬಾರಿ ಅತ್ಯಂತ ಕಠಿಣವಾದ ಟಾಸ್ಕ್ ಒಂದನ್ನು ನೀಡಲಾಗಿದೆ. ಹಗ್ಗದ ಮೂಲಕ ಪಜಲ್ ಪೀಸ್ ಹಿಡಿದು ಅಡೆತಡೆಗಳನ್ನು ದಾಟುತ್ತಾ, ಸಮತೋಲನ ಕಾಯ್ದುಕೊಂಡು ಸಾಗಬೇಕು.
ಎದುರಾಳಿ ತಂಡದ ಸದಸ್ಯರು ನೀಡುವ ಅಡೆತಡೆಗಳನ್ನು ತಪ್ಪಿಸಿಕೊಂಡು ಸ್ಪರ್ಧಿಗಳು ಸಾಗಬೇಕಿದೆ. ಈ ಕಠಿಣವಾದ ಟಾಸ್ಕ್ನಲ್ಲಿ ಈಜುಕೊಳದಲ್ಲಿ ಪಜಲ್ ಪೀಸ್ ಅನ್ನು ಜೋಡಿಸುವುದು ಕೂಡ ಕಷ್ಟಕರ ಆಗಿದೆ. ಒಂದರ ಹಿಂದೆ ಒಂದರಂತೆ ಎದುರಾಗುವ ಈ ಕಠಿಣ ಸವಾಲುಗಳಿಂದಾಗಿ ಮನೆಯ ಸ್ಪರ್ಧಿಗಳು ಹೈರಾಣಾಗಿದ್ದಾರೆ. ಯಾರು ಈ ಟಾಸ್ಕ್ ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Bigg Boss Kannada 13: ಸ್ನೇಹಕ್ಕೂ ಆಟಕ್ಕೂ ಸಮರ! ತಾಂಡವ್ಗೆ ಕೌಂಟರ್ ಕೊಟ್ಟ ಪ್ರಶಾಂತ್
ಇನ್ನೊಂದು ಕಡೆ ಯಶಸ್ ಅವರ ನಡವಳಿಕೆ ʻಬಿಗ್ ಬಾಸ್ʼ ಮನೆಯಲ್ಲಿ ಇತರ ಸ್ಪರ್ಧಿಗಳ ಟೀಕೆಗೆ ಕಾರಣವಾಗಿದೆ. ಜಗದೀಶ್ ಹಾಗೂ ಪ್ರಶಾಂತ್ ಕೂಡ ಯಶಸ್ ಬಗ್ಗೆ ಮಾತನಾಡಿಕೊಂಡಿದ್ದಾರೆ. ಕಾವ್ಯಾ, ಸೌಂದರ್ಯಾ ಶೆಟ್ಟಿ ಹಾಗೂ ಯಶಸ್ ಅವರು ಕುಳಿತು ಮಾತನಾಡುತ್ತಿದ್ದರು.
ಕಾಲು ಇಟ್ಟುಕೊಳ್ಳಲು ಜಾಗ ಇಲ್ಲ ಎಂದು ಸೌಂದರ್ಯಾ ಅವರು ಹೇಳಿದರು. ಆಗ ಸೌಂದರ್ಯಾ ಅವರ ಕಾಲನ್ನು ಯಶಸ್ ಅವರು ತಮ್ಮ ಅಂಗೈಯಲ್ಲಿ ಹಿಡಿದುಕೊಂಡರು.
ಇದನ್ನೂ ಓದಿ; Bigg Boss Kannada 13: ಸ್ನೇಹಕ್ಕೂ ಆಟಕ್ಕೂ ಸಮರ! ತಾಂಡವ್ಗೆ ಕೌಂಟರ್ ಕೊಟ್ಟ ಪ್ರಶಾಂತ್
ಮನೆಯ ಕ್ಯಾಪ್ಟನ್ ಧನುಷ್ ಕೂಡ ಸೌಂದರ್ಯ ಅವರಿಗೆ ಒಬ್ಬಂಟಿಯಾಗಿ ಆಟವಾಡುವ ಸಾಮರ್ಥ್ಯವಿಲ್ಲ ಯಶಸ್ ಅವರಿಗೂ ಒಬ್ಬರ ಬೆಂಬಲ ಬೇಕಾಗುತ್ತೆ ಎಂದಿದ್ದಾರೆ. ಈ ವಾರ ಎರಡು ತಂಡಗಳಲ್ಲಿ ಟಾಸ್ಕ್ ಆಡಬೇಕು ಎಂದು ನಿರ್ಧರಿಸಲಾಗಿದೆ. ಒಬ್ಬಂಟಿಯಾಗಿ, ಹಾಗೂ ಗ್ರೂಪ್ಗಳಾಗಿ. ಯಶಸ್ ಸೌಂದರ್ಯ ಅವರೊಂದಿಗಿನ ಭಾರೀ ಆಪ್ತತೆ ಈಗ ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಚರ್ಚೆ ಶುರುವಾಗಿದೆ.