ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಬಿಗ್‌ ಬಾಸ್‌ ಸೀಸನ್ 13ರ ಆರಂಭಕ್ಕೆ ಡೇಟ್ ಫಿಕ್ಸ್! ಸರ್​ಪ್ರೈಸ್​ ಕೊಟ್ಟ ಕಿಚ್ಚ

ಬಿಗ್ಬಾಸ್ 13 (Bigg Boss 13)ಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಕನ್ನಡ (Bigg Boss Kannada) ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಗ್ರ್ಯಾಂಡ್ ಪ್ರೀಮಿಯರ್ ದಿನಾಂಕ ಹಾಗೂ ಸಮಯ ಬಹಿರಂಗವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6, 2026ರಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಬಿಗ್‌ ಬಾಸ್‌ ಸೀಸನ್ 13ರ ಆರಂಭಕ್ಕೆ ಡೇಟ್ ಫಿಕ್ಸ್!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Aug 21, 2026 9:07 PM

ಬಿಗ್​ಬಾಸ್​ 13 (Bigg Boss 13)ಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಕನ್ನಡ (Bigg Boss Kannada) ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಗ್ರ್ಯಾಂಡ್ ಪ್ರೀಮಿಯರ್ ದಿನಾಂಕ ಹಾಗೂ ಸಮಯ ಬಹಿರಂಗವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6, 2026ರಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಫ್ಲೈಟ್​ ಮೋಡ್​ ಆನ್​

ಪ್ರತಿಯೊಬ್ಬರಿಗೂ ಹಾರುವ ಕನಸು ಇರುತ್ತದೆ. ಆದರೆ, ರೆಕ್ಕೆ ಕಟ್ಟುವ ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಫ್ಲೈಟ್​ ಮೋಡ್​ ಆನ್​ ಆದ ಮೇಲೆ ಹೊರಗಡೆ ನೆಟ್​ವರ್ಕ್​ ಕಟ್​ ಆಗುತ್ತದೆ. ನಿಮ್ಮ ನಿಜವಾದ ಕ್ಯಾರೆಕ್ಟರ್​ ಹೊರಕ್ಕೆ ಬರುತ್ತದೆ. ಎನ್ನುತ್ತಲೇ ಬಿಗ್​ಬಾಸ್​ ಪಯಣದ ಕುರಿತು ಸುದೀಪ್​ ಮಾತನಾಡಿದ್ದಾರೆ.

ಇದನ್ನೂ ಓದಿ: Kareena Kapoor: 3ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ? ಕೊನೆಗೂ ಸ್ಪಷ್ಟನೆ ಕೊಟ್ಟ ತಂಡ

ಜರ್ನಿ ನಿಮ್ಮದೇ ಆದರೂ ಟೇಕಾಫ್​ನಿಂದ ಲ್ಯಾಂಡಿಂಗ್​ ವರೆಗೂ ನಿಮ್ಮ ಕಂಟ್ರೋಲ್​ನಲ್ಲಿ ಯಾವುದೂ ಇರುವುದಿಲ್ಲ ಆದರೆ, ರಿಮೋಟ್​ ಸೈಡಿಗಿಟ್ಟು ಈ ಜರ್ನಿಯ ಭಾಗ್ಯ ನೋಡುವ ಮಜಾನೇ ಬೇರೆ ಎನ್ನುತ್ತಲೇ ಬಿಗ್​ಬಾಸ್​ ಗ್ರ್ಯಾಂಡ್​ ಟೇಕ್​ ಆಫ್​ ಸೆಪ್ಟೆಂಬರ್​ 6ರಂದು ಸಂಜೆ 7 ಗಂಟೆಗೆ ಎನ್ನುವ ಮಾಹಿತಿ ಕೊಟ್ಟಿದ್ದಾರೆ.

ಈವರೆಗೆ ವಾಹಿನಿ ಯಾವುದೇ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿಲ್ಲ. ಸುದೀಪ್ ನಿರೂಪಣೆಯೇ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಹಲವು ಸೀಸನ್‌ಗಳಿಂದ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಬರುತ್ತಿರುವ ಸುದೀಪ್ ಹೊಸ ಲುಕ್ ಈ ಬಾರಿಯೂ ವಿಶೇಷವಾಗಿರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Folk dancer: ಸಹ ಡ್ಯಾನ್ಸರ್ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪ್ರಸಿದ್ಧ ಜಾನಪದ ನಟ; ತರಾಟೆಗೆ ತೆಗೆದುಕೊಂಡ ಪತ್ನಿ

ಈ ಬಾರಿ ವಿಶೇಷತೆ ಏನು?

'ಅಗ್ನಿ ಪರೀಕ್ಷೆ'ಗೆ ಒಟ್ಟು 60 ಮಂದಿ ಬಂದಿದ್ದರು. ಜನರ ವೋಟಿಂಗ್ ಮೂಲಕ ನಡೆಯಲಿದೆ ಆಯ್ಕೆ: ಮನೆಯೊಳಗೆ ಹೋಗೋದು ಮೂರೇ ಮಂದಿ. ಎಲ್ಲವೂ ನಡೆದ ಮೇಲೆ ಇಲ್ಲಿ ವೀಕ್ಷಕರ ಮತದ ಆಧಾರದ ಮೇಲೆ ಕೇವಲ ಮೂರು ಮಂದಿಯನ್ನಷ್ಟೇ ಆಯ್ಕೆ ಮಾಡಿ ಬಿಗ್‌ ಬಾಸ್‌ ಮನೆಗೆ ಕಳುಹಿಸಲಾಗುತ್ತದೆ.