Bigg Boss Kannada 12: ಕೊನೇ ಹಂತದಲ್ಲಿ ಕೈ ಕೊಟ್ಟ ಲಕ್! ಬಿಗ್ ಬಾಸ್ನಿಂದ ರಾಶಿಕಾ ಶೆಟ್ಟಿ ಔಟ್
Rashika Shetty: `ಬಿಗ್ ಬಾಸ್ ಕನ್ನಡ 12’ ಫಿನಾಲೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಹೀಗಿರುವಾಗಲೇ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಹೆಚ್ಚಾಗಿದೆ. ಈ ವಾರ ʻಬಿಗ್ ಬಾಸ್ʼ ಮನೆಯಿಂದ ಹೊರಗೆ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು. ಇದೀಗ ರಾಶಿಕಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದಾರೆ. ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡುವ ರಾಶಿಕಾ ಶೆಟ್ಟಿ ಔಟ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ -
`ಬಿಗ್ ಬಾಸ್ ಕನ್ನಡ 12’ (Bigg Boss Kannada 12 Finale) ಫಿನಾಲೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಹೀಗಿರುವಾಗಲೇ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಹೆಚ್ಚಾಗಿದೆ. ಈ ವಾರ ʻಬಿಗ್ ಬಾಸ್ʼ ಮನೆಯಿಂದ ಹೊರಗೆ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು. ಇದೀಗ ರಾಶಿಕಾ ಶೆಟ್ಟಿ (Rashika Shetty) ಮನೆಯಿಂದ ಹೊರ ಬಂದಿದ್ದಾರೆ. ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡುವ ರಾಶಿಕಾ ಶೆಟ್ಟಿ ಔಟ್ ಆಗಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ವಾರ ಮಿಡ್ ವೀಕ್ ಎಲಿಮಿನೇಷನ್ (Mid week elimination) ನಡೆಯಲಿದೆ ಎಂಬ ಮಾತುಗಳು ಮನೆ ಹೊರಗಡೆ ಕೇಳಿ ಬರುತ್ತಿದೆ.
ಈ ವಾರ ಮನೆಯ ಕ್ಯಾಪ್ಟನ್ ಧನುಷ್ ಅವರನ್ನು ಹೊರತುಪಡಿಸಿ ಉಳಿದ ಕಾವ್ಯಾ, ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ, ರಘು, ರಾಶಿಕಾ, ಅಶ್ವಿನಿ, ಧ್ರುವಂತ್ ನಾಮಿನೇಟ್ ಆಗಿದ್ದರು. ರಾಶಿಕಾ ಅವರು ಈ ಸೀಸನ್ ಟಾಸ್ಕ್ ಮಾಸ್ಟರ್ ಅಂದರೆ ತಪ್ಪಿಲ್ಲ. ಯಾವುದೇ ಟಾಸ್ಕ್‌ನಲ್ಲಿಯೂ ಲೀಲಾಜಾಲವಾಗಿ ಮಾಡಿ ಬಿಡ್ತಾರೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಗೌಡ - ಧ್ರುವಂತ್ ಮೇಲೆ ಎಲ್ರಿಗೂ ಕಣ್ಣು; ಒಬ್ರು ಉತ್ತಮ, ಮತ್ತೊಬ್ರು ಕಳಪೆ!
ಮಿನಿ ಫಿನಾಲೆಯ ಫೈನಲಿಸ್ಟ್
ʻಬಿಗ್ ಬಾಸ್ʼನ ಮಿನಿ ಫಿನಾಲೆಯ ಫೈನಲಿಸ್ಟ್ ಆಯ್ಕೆಯಲ್ಲಿ, ಸ್ಪಂದನಾರನ್ನ ಟಾಸ್ಕ್‌ನಲ್ಲಿ ಸೋಲಿಸಿ ರಾಶಿಕಾ ಮಿನಿ ಫಿನಾಲೆಯ ಫೈನಲಿಸ್ಟ್ ಆಗಿದ್ದರು. ಪ್ರತೀ ಟಾಸ್ಕ್‌ನಲ್ಲೂ ಬೆಸ್ಟ್ ಪರ್ಫಾರ್ಮೆನ್ಸ್ ಕೊಡ್ತಿರುವ ರಾಶಿಕಾಗೆ ಅದ್ಯಾಕೋ ಅದೃಷ್ಟ ಚೆನ್ನಾಗಿರಲಿಲ್ಲ . ಎಷ್ಟೋ ಬಾರಿ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಕೊಟ್ಟು ಹೊರಬಿದ್ದಿದ್ದರು.
ಬಳಿಕ ʻಬಿಗ್ ಬಾಸ್ʼ ಮನೆಯ ಕ್ಯಾಪ್ಟನ್ ಆಗಿಯೇ ಬಿಟ್ಟರು.ʻಬಿಗ್ ಬಾಸ್ʼ ಮನೆಯಲ್ಲಿ ಟಾಸ್ಕ್ ಅಂತ ಬಂದಾಗ, ಹುಡುಗರಿಗೂ ಫೈಟ್ ಕೊಡ್ತಿರುವ ಕಂಟೆಸ್ಟೆಂಟ್ ರಾಶಿಕಾ ಅಂತಂದ್ರೆ ಅದರಲ್ಲಿ ತಪ್ಪಿಲ್ಲ. ಕಾರಣ, ಯಾವುದೇ ಟಾಸ್ಕ್ ಕೊಟ್ಟರೂ ರಾಶಿಕಾ ಶೆಟ್ಟಿ ಇತರ ಮಹಿಳಾ ಸ್ಪರ್ಧಿಗಳಿಗಿಂತ ಟಫ್ ಫೈಟ್ ಕೊಟ್ಟಿದ್ದಾರೆ.
ಈ ಜೋಡಿ ಸಖತ್ ಹೈಲೈಟ್
ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದವರು ಎದುರಾಳಿಗಳಾವುದು, ಪರಸ್ಪರ ಕೂಗಾಡುತ್ತಿದ್ದವರು ಸ್ನೇಹಿತರಾಗಿಬಿಡುವುದು ಹೊಸದೇನು ಅಲ್ಲ. ಕೆಲವೊಮ್ಮೆ ಈ ಭಿನ್ನಾಭಿಪ್ರಾಯ ಬಹಳ ಬೇಗ ಶಮನವಾಗಿಬಿಡುತ್ತದೆ. ಸೂರಜ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಗೆ ಬಂದಿದ್ದರು. ಆರಂಭದಿಂದಲೂ ರಾಶಿಕಾ ಜೊತೆ ಬಹಳ ಕ್ಲೋಸ್ ಆಗಿದ್ದರು. ಈ ಜೋಡಿ ಸಖತ್ ಹೈಲೈಟ್ ಆಗಿತ್ತು.
ರಕ್ಷಿತಾ ಗಿಲ್ಲಿ ಜೊತೆ ಅಷ್ಟಕಷ್ಟೆ
ಗಿಲ್ಲಿ ವಿಚಾರವಾಗಿ ರಕ್ಷಿತಾ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ರಾಶಿಕಾ ಸಿಟ್ಟು ಹೊರಹಾಕಿದ್ದರು. ರಕ್ಷಿತಾ ವಿರುದ್ಧ ಒಂದಷ್ಟು ಆರೋಪಗಳನ್ನು ಮಾಡಿ ಕಳಪೆ ಕೊಟ್ಟಿದ್ದರು. ರಾಶಿಕಾ ಶೆಟ್ಟಿ ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದ್ದು ಕಡಿಮೆ. ಇಡೀ ಸೀಸನ್ ಅಲ್ಲಿ ಒಮ್ಮೆ ಅಥವಾ ಎರಡು ಬಾರಿ ಇಬ್ಬರೂ ಒಟ್ಟಿಗೆ ಇದ್ದರು. ಒಬ್ಬರನ್ನೊಬ್ಬರು ಬೆಂಬಲಿಸಿದ್ದೂ ಬೆರಳೆಣಿಕೆ ಬಾರಿ ಮಾತ್ರ. ಇಬ್ಬರ ಮಧ್ಯೆ ಆಗಾಗ ವೈಮನಸ್ಸು ಮೂಡುತ್ತಲೇ ಇರುತ್ತಿತ್ತು.
ಇದನ್ನೂ ಓದಿ: Bigg Boss Kannada 12: ಎಪಿಸೋಡ್ ನೋಡಿ ಕಿಚ್ಚ ಮಾತನಾಡಲ್ವಾ? ರಾಶಿಕಾ-ರಕ್ಷಿತಾ ಮ್ಯಾಟರ್‌ಗೆ ನೆಟ್ಟಿಗರ ತರಾಟೆ
ರಾಶಿಕಾ ಶೆಟ್ಟಿ ಒಬ್ಬ ಕನ್ನಡ ನಟಿ ಮತ್ತು ಮಾಡೆಲ್, ಇವರು ಯೋಗರಾಜ್ ಭಟ್ ನಿರ್ದೇಶನದ "ಮನದ ಕಡಲು" ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ರು "ದೊರೆಸಾನಿ" ಕನ್ನಡ ಸೀರಿಯಲ್ ಮತ್ತು ತೆಲುಗು ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ.