ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಜೋಡಿ ಟಾಸ್ಕ್‌ನಲ್ಲಿ ಯಶಸ್‌ - ಸೌಂದರ್ಯಗೆ ಗೆಲುವು! ಕ್ಯಾಪ್ಟನ್ಸಿ ರೇಸ್‌ಗೆ ಲಗ್ಗೆ

Bigg Boss Kannada 13: ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಮನೆಯಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಆಟದ ಬಣ್ಣ ಬದಲಾಗುತ್ತಿದೆ. ಹೊರನೋಟಕ್ಕೆ ಎಲ್ಲರೂ ಸಹಜವಾಗಿಯೇ ವರ್ತಿಸುತ್ತಿರುವಂತೆ ಕಂಡರೂ, ಮನೆಯೊಳಗೆ ಯಾರನ್ನು ನಂಬಬೇಕು, ಯಾರನ್ನು ಅನುಮಾನಿಸಬೇಕು ಎಂಬ ಗೊಂದಲ ಮಾತ್ರ ಹೆಚ್ಚಾಗುತ್ತಿದೆ. ಈ ನಡುವೆ ನಡೆದ ‘ಗುಳ್ಳೆ ನರಿ’ (Gule Nari task) ಟಾಸ್ಕ್‌ ಸ್ಪರ್ಧಿಗಳ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಎಲ್ಲರ ಕಣ್ಣೆದುರೇ ಇದ್ದರೂ ತಮ್ಮ ನಿಜವಾದ ಪಾತ್ರವನ್ನು ರಹಸ್ಯವಾಗಿಟ್ಟುಕೊಂಡ ಯಶಸ್‌ ಇದೀಗ ಆಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಜೋಡಿ ಟಾಸ್ಕ್‌ನಲ್ಲಿ ಯಶಸ್‌ - ಸೌಂದರ್ಯಗೆ ಗೆಲುವು!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 26, 2026 8:29 AM

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಮನೆಯಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಆಟದ ಬಣ್ಣ ಬದಲಾಗುತ್ತಿದೆ. ಹೊರನೋಟಕ್ಕೆ ಎಲ್ಲರೂ ಸಹಜವಾಗಿಯೇ ವರ್ತಿಸುತ್ತಿರುವಂತೆ ಕಂಡರೂ, ಮನೆಯೊಳಗೆ ಯಾರನ್ನು ನಂಬಬೇಕು, ಯಾರನ್ನು ಅನುಮಾನಿಸಬೇಕು ಎಂಬ ಗೊಂದಲ ಮಾತ್ರ ಹೆಚ್ಚಾಗುತ್ತಿದೆ. ಈ ನಡುವೆ ನಡೆದ ‘ಗುಳ್ಳೆ ನರಿ’ (Gule Nari task) ಟಾಸ್ಕ್‌ ಸ್ಪರ್ಧಿಗಳ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಎಲ್ಲರ ಕಣ್ಣೆದುರೇ ಇದ್ದರೂ ತಮ್ಮ ನಿಜವಾದ ಪಾತ್ರವನ್ನು ರಹಸ್ಯವಾಗಿಟ್ಟುಕೊಂಡ ಯಶಸ್‌ ಇದೀಗ ಆಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಅನುಮಾನಗಳ ನಡುವೆ ಯಶಸ್‌ ರಹಸ್ಯ ಆಟ!

‘ಗುಳ್ಳೆ ನರಿ’ ಯಾರು ಎಂಬ ಪ್ರಶ್ನೆ ಮನೆಯ ಸದಸ್ಯರನ್ನು ಕಾಡುತ್ತಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ಒಬ್ಬೊಬ್ಬರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆಸಿಯಾ ಫಿರ್ದೋಸ್‌ ಅವರು ಆಸಿಯಾ ಮತ್ತು ಗಾನವಿ ಅವರ ಬಗ್ಗೆ ಶಂಕೆ ವ್ಯಕ್ತಪಡಿಸಿರುವುದು ಮನೆಯೊಳಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಜೀ ಕನ್ನಡ ವಾಹಿನಿಯಲ್ಲಿ ʻ45ʼ ಸಿನಿಮಾದ ಮೊದಲ ಪ್ರೀಮಿಯರ್; ಒಟ್ಟಿಗೆ ರಂಜಿಸಲಿದ್ದಾರೆ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ

ಆದರೆ, ನಿಜವಾದ ಗುಳ್ಳೆ ನರಿ ಯಶಸ್‌ ಎಂಬ ವಿಚಾರ ಮಾತ್ರ ಯಾರಿಗೂ ತಿಳಿದಿಲ್ಲ. ತಮ್ಮ ಪಾತ್ರದ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿರುವ ಅವರು, ಮನೆಯವರ ಮಾತುಗಳನ್ನು ಗಮನಿಸುತ್ತಾ ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಮೇಲೆ ಯಾರಿಗೂ ಅನುಮಾನ ಬಾರದಂತೆ ಆಟವಾಡುತ್ತಿರುವ ಯಶಸ್‌ ಅವರ ತಂತ್ರಗಾರಿಕೆ ಸದ್ಯ ಗಮನ ಸೆಳೆಯುತ್ತಿದೆ.

ಟಾಸ್ಕ್‌ನಲ್ಲಿ ಯಶಸ್‌-ಸೌಂದರ್ಯ ಜೋಡಿ ಗೆಲುವು

ಒಂದೆಡೆ ಗುಳ್ಳೆ ನರಿಯನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ಕ್ಯಾಪ್ಟನ್ಸಿ ರೇಸ್‌ಗೆ ಪ್ರವೇಶ ಪಡೆಯಲು ಸ್ಪರ್ಧಿಗಳಿಗೆ ವಿಶೇಷ ಜೋಡಿ ಟಾಸ್ಕ್‌ ನೀಡಲಾಯಿತು. ‘ಬುದ್ಧಿವಂತರಿಗೆ ಮಾತ್ರ’ ಎಂಬ ಹೆಸರಿನ ಈ ಸವಾಲಿನಲ್ಲಿ ಮೂರು ಜೋಡಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು. ತಾಂಡವ್‌ ರಾಮ್‌ ಮತ್ತು ಪ್ರಶಾಂತ, ಆಸಿಯಾ ಫಿರ್ದೋಸ್‌ ಮತ್ತು ಧನುಷ, ಯಶಸ್‌ ಮತ್ತು ಸೌಂದರ್ಯ ಶೆಟ್ಟಿ.

ಈ ಪೈಪೋಟಿಯಲ್ಲಿ ಯಶಸ್‌ ಹಾಗೂ ಸೌಂದರ್ಯ ಶೆಟ್ಟಿ ಜೋಡಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಇದರೊಂದಿಗೆ ಇಬ್ಬರಿಗೂ ಕ್ಯಾಪ್ಟನ್ಸಿ ರೇಸ್‌ನಲ್ಲಿ ಸ್ಪರ್ಧಿಸುವ ಅವಕಾಶ ದೊರೆತಿದೆ.

ಇನ್ನು ತಾಂಡವ್‌-ಪ್ರಶಾಂತ್‌ ಹಾಗೂ ಆಸಿಯಾ-ಧನುಷ್‌ ಜೋಡಿಗಳು ಈ ಸುತ್ತಿನಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದೆ ಕ್ಯಾಪ್ಟನ್ಸಿ ಅವಕಾಶದಿಂದ ವಂಚಿತರಾದರು.

ಇದನ್ನೂ ಓದಿ: Bigg Boss Kannada 13: ಯಶಸ್ ಮಾಸ್ಟರ್‌ ಪ್ಲ್ಯಾನ್‌! ಗೊಂದಲದಲ್ಲಿ ಮನೆ ಮಂದಿ

ಮುಂದಿನ ದಿನಗಳಲ್ಲಿ ತಿರುವು ಸಿಗುತ್ತಾ?

ಸದ್ಯ ಯಶಸ್‌ ಪಾಲಿಗೆ ಒಂದೇ ದಿನದಲ್ಲಿ ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ. ಒಂದು ಕಡೆ ತಮ್ಮ ಗುಳ್ಳೆ ನರಿ ಪಾತ್ರವನ್ನು ಯಾರಿಗೂ ತಿಳಿಯದಂತೆ ಗೌಪ್ಯವಾಗಿಟ್ಟುಕೊಂಡಿದ್ದಾರೆ. ಮತ್ತೊಂದೆಡೆ ಸೌಂದರ್ಯ ಅವರ ಜೊತೆಗಿನ ಜೋಡಿ ಟಾಸ್ಕ್‌ನಲ್ಲಿ ಗೆದ್ದು ಕ್ಯಾಪ್ಟನ್ಸಿ ಸ್ಪರ್ಧೆಯಲ್ಲೂ ಸ್ಥಾನ ಪಡೆದಿದ್ದಾರೆ.