Darshan: ದರ್ಶನ್ & ಗ್ಯಾಂಗ್ ವಿರುದ್ಧ ಚಾರ್ಜ್ಫ್ರೇಮ್; ಮುಂದಿನ ವಿಚಾರಣೆ ಹೇಗಿರಲಿದೆ? ಲಾಯರ್ ಫಸ್ಟ್ ರಿಯಾಕ್ಷನ್
ದರ್ಶನ್ (Actor Darshan) ಸೇರಿದಂತೆ ಆರೋಪಿಗಳ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಜೈಲು ಸೇರಿರುವ ದರ್ಶನ್ ಸೇರಿದಂತೆ ಆರೋಪಿಗಳು ನವೆಂಬರ್ 3ರಂದು ಬೆಂಗಳೂರು 64ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾದರು. ದೋಷಾರೋಪಣೆ ನಿಗದಿ ವೇಳೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ತಪ್ಪೊಪ್ಪಿಕೊಳ್ಳದ ಕಾರಣ ವಿಚಾರಣೆಯನ್ನು ಕೋರ್ಟ್ ನವೆಂಬರ್ 10ಕ್ಕೆ ಮುಂದೂಡಿದೆ.
Darshan -
Yashaswi Devadiga
Nov 3, 2025 7:42 PM
ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಸಂಬಂಧ 57ನೇ ಸೆಷನ್ ಕೋರ್ಟ್ ದರ್ಶನ್ (Actor Darshan) ಸೇರಿದಂತೆ ಆರೋಪಿಗಳ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಜೈಲು ಸೇರಿರುವ ದರ್ಶನ್ ಸೇರಿದಂತೆ ಆರೋಪಿಗಳು ನವೆಂಬರ್ 3ರಂದು ಬೆಂಗಳೂರು 64ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾದರು. ದೋಷಾರೋಪಣೆ ನಿಗದಿ ವೇಳೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ತಪ್ಪೊಪ್ಪಿಕೊಳ್ಳದ ಕಾರಣ ವಿಚಾರಣೆಯನ್ನು ಕೋರ್ಟ್ ನವೆಂಬರ್ 10ಕ್ಕೆ ಮುಂದೂಡಿದೆ.
ಇದೀಗ ವಿಚಾರಣೆ ಮುಗಿದ ಬಳಿಕ ದರ್ಶನ್ ಪರ ವಕೀಲರು ಮಾಧ್ಯಮಗಳ ಜೊತೆ ಮಾತನಾಡಿದರು.
ಮುಂದಿನ ಪ್ರಕ್ರಿಯೆ ಏನು?
ವಕೀಲರು ಮಾತನಾಡಿ, ʻಕ್ರಿಮಿನಲ್ ಪ್ರಕರಣದಲ್ಲಿ ಇದೊಂದು ಪ್ರಕ್ರಿಯೆ. ಜೈಲಿನಲ್ಲಿರುವ ಆರೋಪಿಗಳು ಮತ್ತು ಬೇಲ್‌ನಲ್ಲಿರುವ ಆರೋಪಿಗಳು ಹಾಜಾರಾಗಿದ್ದರೆ, ನ್ಯಾಯಾಲಯ ದೋಷಾರೋಪಣೆ ಹೊರಿಸುತ್ತೆ. ಅಂದರೆ ಪೊಲೀಸರು ಏನು ತನಿಖೆ ಮಾಡಿ ಚಾರ್ಜ್‌ಶೀಟ್ ಹಾಕಿದ್ರಲ್ಲ ಅದು ಎವಿಡೆನ್ಸ್ ಅಲ್ಲ. ಕೋರ್ಟ್ ಇವತ್ತು ಏನು ಚಾರ್ಜಸ್ ಅಂತ ಫ್ರೇಮ್ ಮಾಡಿದೆ, ಅದರ ಮೇಲೆ ಈಗ ವಿಚಾರಣೆ ಶುರುವಾಗುತ್ತದೆʼ ಎಂದರು.
ಇದನ್ನೂ ಓದಿ: BBK 12: ಅಶ್ವಿನಿ ಗೌಡ ಮುಖಕ್ಕೆ ಮಸಿ ಬಳಿದು ರಕ್ಷಿತಾ ಪರ ಮಾತನಾಡಿದ ಗಿಲ್ಲಿ- ಧನುಷ್!
ʻಇದೀಗ ಎಲ್ಲ ಆರೋಪಿಗಳ ಮೇಲೆ ದೋಷಾರೋಪಣೆ ಹೊರಿಸಿದ್ದಾರೆ. ನಿಮ್ಮ ಮೇಲೆ ಇರುವ ಇಂಥ ಪ್ರಕರಣ, ಸೆಕ್ಷನ್ಗಳು ಹಾಕಲಾಗಿದೆ ಎಂಬುದನ್ನು ಜಡ್ಜ್ ಸಾಹೇಬರು ಎಲ್ಲ ಆರೋಪಿಗಳ ಎದುರು ಓದಿದ್ದಾರೆ. ಆದರೆ ಎಲ್ಲ ಆರೋಪಿಗಳು ಅದನ್ನು ನಿರಾಕರಿಸಿದ್ದಾರೆ. ಈ ಪ್ರಕರಣಕ್ಕೂ ತಮಗೂ ಸಂಬಂಧ ಇಲ್ಲ, ವಿಚಾರಣೆ ನಡೆಯಲಿ. ವಿಚಾರಣೆ ಎದುರಿಸಲು ನಾವು ಸಿದ್ಧರಿದ್ದೇವೆ ಅಂತ ಆರೋಪಿಗಳು ಉತ್ತರ ಕೊಟ್ಟಿದ್ದಾರೆ’ ಎಂದಿದ್ದಾರೆ ವಕೀಲರು.
ಸಾಕ್ಷಿಗಳ ಪಟ್ಟಿಯನ್ನು ನೀಡಬೇಕು
ಇನ್ನು ಮುಂದಿನ ಪ್ರಕ್ರಿಯೆ ಏನು ಅಂದರೆ ಸಾಕ್ಷಿಯ ವಿಚಾರಣೆಗೆ ಒಂದು ದಿನ ನಿಗದಿ ಮಾಡಲಾಗುತ್ತದೆ. ಅದಕ್ಕೂ ಮುನ್ನ ಪ್ರಾಸಿಕ್ಯೂಷನ್ನವರು ಸಾಕ್ಷಿಗಳ ಪಟ್ಟಿಯನ್ನು ನೀಡಬೇಕು.ಈ ಪ್ರಕರಣದಲ್ಲಿ ಎಷ್ಟು ಜನ ಸಾಕ್ಷಿಗಳಿದ್ದಾರೆ, ಅಂದರೆ ಎಷ್ಟು ಜನ ವಿಚಾರಣೆ ಮಾಡುತ್ತೇವೆ? ಅಂತ ಪ್ರಾಸಿಕ್ಯೂಶನ್ ಅವರು ಕೋರ್ಟ್‌ಗೆ ಹಾಗೂ ನಮಗೆ ಮುಂಚಿತವಾಗಿಯೇ ಒಂದು ಅರ್ಜಿಯನ್ನ ಕೊಡಬೇಕಾಗುತ್ತದೆ.
ಅದರ ಆಧಾರದ ಮೇಲೆ ಸಾಕ್ಷಿಗಳನ್ನು ಕರೆಯಲು ದಿನಾಂಕವನ್ನು ಕೋರ್ಟ್ ನಿಗದಿ ಮಾಡುತ್ತದೆ’ ಎಂದು ದರ್ಶನ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕೋ ಅಥವಾ ಖುದ್ದಾಗಿ ಹಾಜರಾಗಬೇಕೋ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ ಎಂದರು.
ಆರೋಪ ನಿರಾಕರಿಸಿದ ದರ್ಶನ್ & ಗ್ಯಾಂಗ್
ದರ್ಶನ, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಕೂಡ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಗಾಗಿ ಮುಂದಿನ ಹಂತದ ಸಾಕ್ಷಿಗಳ ವಿಚಾರಣೆಗೆ ನ್ಯಾಯಾಲಯ ನವೆಂಬರ್ 10ರಂದು ದಿನಾಂಕ ನಿಗದಿ ಪಡಿಸಿದೆ.
ಇದನ್ನೂ ಓದಿ: BBK 12: ಅಶ್ವಿನಿ ಗೌಡ ಮುಖಕ್ಕೆ ಮಸಿ ಬಳಿದು ರಕ್ಷಿತಾ ಪರ ಮಾತನಾಡಿದ ಗಿಲ್ಲಿ- ಧನುಷ್!
ಇಂದು ಏನೇನಾಯ್ತು?
ಜಡ್ಜ್ ಸಮ್ಮುಖದಲ್ಲಿ ಆರೋಪಿಗಳನ್ನು ಪೊಲೀಸರು ನಿಲ್ಲಿಸಿದರು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳಿಗೆ ಜಡ್ಜ್ ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ಕೊಲೆ, ಅಪಹರಣ, ಸಾಕ್ಷಿನಾಶ, ಅಕ್ರಮ ಕೂಟ, ಕ್ರಿಮಿನಲ್ ಒಳಸಂಚು ಸೇರಿದಂತೆ ಹಲವು ಆರೋಪಗಳನ್ನು ಎಲ್ಲ ಆರೋಪಿಗಳ ಎದುರು ಓದಿ ಹೇಳಲಾಯಿತು. ಆರೋಪ ಒಪ್ಪಿಕೊಂಡರೆ ಶಿಕ್ಷೆ ಪ್ರಕಟ ಆಗುತ್ತಿತ್ತು. ಆರೋಪಗಳನ್ನು ಒಪ್ಪಿಕೊಳ್ಳದ ಕಾರಣ ಸಾಕ್ಷ್ಯಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.