ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daiji Movie: ರಮೇಶ್ ಅರವಿಂದ್ ಅಭಿನಯದ ʼದೈಜಿ ಚಿತ್ರʼಕ್ಕೆ ದಿಗಂತ್‌ ಸೇರ್ಪಡೆ

Daiji Movie: ನಟ ರಮೇಶ್ ಅರವಿಂದ್ ಅಭಿನಯದ, ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ ನಿರ್ದೇಶನದ ʼದೈಜಿ ಚಿತ್ರʼ ಕ್ಕೆ ಗಾಳಿಪಟ ಖ್ಯಾತಿಯ ದಿಗಂತ್ ಅವರು ಸೇರ್ಪಡೆ ಆಗಿದ್ದು, ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರದಲ್ಲಿ ಇವರಿಬ್ಬರು ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ರಮೇಶ್ ಅರವಿಂದ್ ಅಭಿನಯದ ʼದೈಜಿ ಚಿತ್ರʼಕ್ಕೆ ದಿಗಂತ್‌ ಸೇರ್ಪಡೆ

Profile Siddalinga Swamy May 6, 2025 3:38 PM

ಬೆಂಗಳೂರು: ʼದೈಜಿ ಚಿತ್ರʼ (Daiji Movie) ಸ್ಯಾಂಡಲ್‌ವುಡ್‌ನ ನಟ ರಮೇಶ್ ಅರವಿಂದ್ ಅವರ (Ramesh Aravind) 106ನೇ ಚಿತ್ರವಾಗಿದ್ದು, ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ತಾರಾಗಣ ಬಳಗದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ಇತ್ಯಾದಿ ನಟರು ಕಾಣಿಸಿಕೊಳ್ಳಲಿದ್ದಾರೆ. ಹೊಸ ವಿಷಯ ಏನೆಂದರೆ ಗಾಳಿಪಟ ಖ್ಯಾತಿಯ ದಿಗಂತ್ (Diganth) ಅವರು ಸೇರ್ಪಡೆ ಆಗಿದ್ದು, ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ದಿಗಂತ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರದಲ್ಲಿ ಇವರಿಬ್ಬರು ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ʼದೈಜಿ ಚಿತ್ರʼ ದಲ್ಲಿ ರಮೇಶ್ ಅರವಿಂದ್ ಅವರು ಸೂರ್ಯ ಪಾತ್ರದಲ್ಲಿ, ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ, ದಿಗಂತ್ ಅವರು ಗಗನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಶೇಕಡ 50% ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಚಿತ್ರದ ಛಾಯಾಗ್ರಹಣ ಶ್ರೀಶಾ ಕುದುವಳ್ಳಿ ಅವರು ಮಾಡುತ್ತಿದ್ದು, ನಿರ್ಮಾಣ ರವಿ ಕಶ್ಯಪ್ ಅವರು ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Babucha Pant Fashion: ಸಮ್ಮರ್‌ ಫ್ಯಾಷನ್‌ಗೆ ಮರಳಿದ ದೊಗಲೆ ಬಬುಚಾ ಪ್ಯಾಂಟ್‌

ನಟ ದಿಗಂತ್ ಅವರು ʼದೈಜಿ ಚಿತ್ರʼ ದಲ್ಲಿ ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರದಲ್ಲಿ ಇವರಿಬ್ಬರು ಜತೆಯಾಗಿ ಕಾಣಿಸಿಕೊಳ್ಳಲಿರುವುದು ವಿಶೇಷವಾಗಿದೆ.