ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Darling Krishna: ʻಲವ್‌ ಮಾಕ್‌ಟೇಲ್‌ 3ʼ‌ ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಟಿಕೆಟ್ ಬುಕಿಂಗ್‌ ಓಪನ್; ಬೆಂಗಳೂರಿನಲ್ಲಿ ಹೇಗಿದೆ ರೆಸ್ಪಾನ್ಸ್?‌

Love Mocktail 3 Paid Premiere Show: `ಡಾರ್ಲಿಂಗ್' ಕೃಷ್ಣ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ 'ಲವ್ ಮಾಕ್‌ಟೇಲ್ 3' ಸಿನಿಮಾ ಯುಗಾದಿ ಹಬ್ಬದ ಅಂಗವಾಗಿ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಮಾರ್ಚ್ 18ರಂದು ಆಯೋಜಿಸಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ʻಲವ್‌ ಮಾಕ್‌ಟೇಲ್‌ 3ʼ‌‌ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್‌ ಓಪನ್

-

Avinash GR
Avinash GR Mar 12, 2026 3:47 PM

ʻಡಾರ್ಲಿಂಗ್‌ʼ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ʻಲವ್‌ ಮಾಕ್‌ಟೇಲ್‌ 3ʼ ಸಿನಿಮಾವನ್ನು ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್‌ 19ರಂದು ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾವನ್ನು ಕೃಷ್ಣ ಜೊತೆಗೆ ಅವರ ಪತ್ನಿ ಮಿಲನಾ ನಾಗರಾಜ್‌ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ, ಈ ಸಿನಿಮಾವು ಮಾ.19ರಂದು ಅಧಿಕೃತವಾಗಿ ತೆರೆಕಂಡರೂ, ಅದಕ್ಕೂ ಮುನ್ನ ಪೇಯ್ಡ್‌ ಪ್ರೀಮಿಯರ್‌ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಮಾ.18ರಂದೇ ಲವ್‌ ಮಾಕ್‌ಟೇಲ್‌ 3 ನೋಡಬಹುದು

ಮಾ.18ರ ಬುಧವಾರ ಸಂಜೆಯಿಂದಲೇ ಲವ್‌ ಮಾಕ್‌ಟೇಲ್‌ 3 ಸಿನಿಮಾದ ಪ್ರೀಮಿಯರ್‌ ಶೋಗಳು ಶುರುವಾಗಲಿದ್ದು, ಈಗಾಗಲೇ ಬುಕ್‌ ಮೈ ಶೋನಲ್ಲಿ ಅಡ್ವಾನ್ಸ್‌ ಟಿಕೆಟ್‌ ಬುಕಿಂಗ್ ಓಪನ್‌ ಆಗಿದೆ. ಬೆಂಗಳೂರಿನಲ್ಲಿ 10 ಶೋಗಳನ್ನು ನಿಗದಿ ಮಾಡಲಾಗಿದ್ದು, ಬಹುತೇಕ ಟಿಕೆಟ್‌ಗಳು ಬುಕ್‌ ಆಗಿವೆ. ಬೆಂಗಳೂರಿನ ರೀತಿಯಲ್ಲೇ ಮೈಸೂರಿನ ಡಿಆರ್‌ಸಿ ಸಿನಿಮಾಸ್‌ನಲ್ಲೂ ಲವ್‌ ಮಾಕ್ಟೇಲ್‌ 3 ಸಿನಿಮಾಗೆ ಪ್ರೀಮಿಯರ್‌ ಶೋ ಮಾಡಲಾಗುತ್ತಿದ್ದು, ಅಲ್ಲೂ ಕೂಡ ಬಹುತೇಕ ಟಿಕೆಟ್‌ಗಳು ಸೇಲ್‌ ಆಗಿವೆ. ಬಿಡುಗಡೆಗೆ ಇನ್ನೂ 6 ದಿನಗಳಿದ್ದು, ಈ ಪೇಯ್ಡ್‌ ಪ್ರೀಮಿಯರ್‌ ಶೋಗಳ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ.

ಪ್ರೇಮಿಗಳ ದಿನ ಹಸೆಮಣೆ ಏರಲಿರುವ ಡಾರ್ಲಿಂಗ್‌ ಕೃಷ್ಠ - ಮಿಲನಾ ನಾಗರಾಜ್‌

ಡಾರ್ಲಿಂಗ್‌ ಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ಲವ್‌ ಮಾಕ್‌ಟೇಲ್‌ (Love Mocktail 1) ಚಿತ್ರವು 2020ರ ಜನವರಿ 31ರಂದು ಬಿಡುಗಡೆ ಆಗಿತ್ತು. ಇದು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿದ್ದಲ್ಲದೆ, ಒಟಿಟಿಯಲ್ಲಿ ಬಿಡುಗಡೆಯಾದ ಮೇಲೆ ಭಾರಿ ಸದ್ದು ಮಾಡಿತ್ತು. ಹೀಗೆ ಮೊದಲ ಭಾಗ ಹಿಟ್‌ ಆಗುತ್ತಿದ್ದಂತೆಯೇ, ಲವ್ ಮಾಕ್‌ಟೇಲ್ 2 ಮಾಡುವುದಾಗಿ ನಟ ಕೃಷ್ಣ ಘೋಷಣೆ ಮಾಡಿದರು. ಅದನ್ನು 2022 ರ ಫೆಬ್ರವರಿ 11ರಂದು ಬಿಡುಗಡೆ ಮಾಡಲಾಯಿತು. ಇದು ಮೊದಲ ಭಾಗದ ಮುಂದುವರಿದ ಕಥೆಯನ್ನು ಹೊಂದಿದ್ದ ಈ ಸಿನಿಮಾಕ್ಕೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಅದೇ ಚಿತ್ರದ ಮೂರನೇ ಭಾಗವನ್ನು ಪ್ರೇಕ್ಷಕರ ಮುಂದಿಡಲು ಕೃಷ್ಣ ಅಣಿಯಾಗಿದ್ದಾರೆ. ಈ ಮೂರೂ ಚಿತ್ರಗಳನ್ನು ಡಾರ್ಲಿಂಗ್ ಕೃಷ್ಣ ಅವರೇ ನಿರ್ದೇಶಿಸಿ, ನಿರ್ಮಾಣ ಮಾಡಿರುವುದು ವಿಶೇಷ.

ಡಾರ್ಲಿಂಗ್‌ ಕೃಷ್ಣ & ಮಿಲನಾ ನಾಗರಾಜ್ ಸಂದರ್ಶನ



ಯಾರೆಲ್ಲಾ ಇದ್ದಾರೆ ಪಾರ್ಟ್‌ 3ರಲ್ಲಿ?

ಡಾರ್ಲಿಂಗ್‌ ಕೃಷ್ಣ ಅವರು ಮುಖ್ಯಭೂಮಿಕೆಯಲ್ಲಿದ್ದು, ಮಿಲನಾ ನಾಗರಾಜ್‌ ತೆರೆಮೇಲೆ ಕಾಣಿಸುವ ಸಾಧ್ಯತೆ ಇದೆ. ಅಮೃತಾ ಅಯ್ಯಂಗಾರ್‌, ರೆಚೇಲ್‌ ಡೇವಿಡ್‌, ಸುಶ್ಮಿತಾ, ಅಭಿಲಾಷ್‌, ರಂಜನಿ ಭಾರದ್ವಾಜ್‌, ದಿಲೀಪ್‌ ರಾಜ್‌, ಶ್ವೇತಾ ಆರ್‌ ಪ್ರಸಾದ್‌, ಬಿ ಎಂ ಗಿರಿರಾಜ್‌, ರೇಖಾ ಕೂಡ್ಲಿಗಿ, ವೈಶಾಲಿ ದೀಪಕ್‌ ಜೊತೆಗೆ ಮುಖ್ಯಪಾತ್ರದಲ್ಲಿ ಬೇಬಿ ಸಂವೃತಾ ಕಾಣಿಸಿಕೊಂಡಿದ್ದಾರೆ. ನಕುಲ್‌ ಅಭ್ಯಂಕರ್‌ ಅವರು ಸಂಗೀತ ನೀಡಿದ್ದು, ಶ್ರೀ ಕ್ರೇಜಿ ಮೈಂಡ್ಸ್‌ ಅವರು ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ.