ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Darshan Movie: ಈ ವಾರ ದರ್ಶನ್ ನಟನೆಯ ಈ ಹಿಟ್‌ ಮೂವಿ ರೀ-ರಿಲೀಸ್!

Darshan: ಸತತ 35 ವಾರಗಳ ಕಾಲ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡು ಬ್ಲಾಕ್‌ಬಸ್ಟರ್‌ ಲಿಸ್ಟ್‌ ಸೇರಿತ್ತು. ಸಂದರ್ಶನವೊಂದರಲ್ಲಿ ಓಂ ಪ್ರಕಾಶ್‌ ರಾವ್‌ ಅವರು ಹಂಚಿಕೊಂಡಿರುವ ಮಾಹಿತಿಯಂತೆ, ಸಿನಿಮಾ ಅಂದಿನ ದಿನಗಳಲ್ಲೇ ಸುಮಾರು 18 ರಿಂದ 22 ಕೋಟಿ ರೂಪಾಯಿಗಳ ಭರ್ಜರಿ ಕಲೆಕ್ಷನ್‌ ಮಾಡಿ ದಾಖಲೆ ಬರೆದಿತ್ತು.

ಈ ವಾರ ದರ್ಶನ್ ನಟನೆಯ ಈ ಹಿಟ್‌ ಮೂವಿ ರೀ-ರಿಲೀಸ್!

ನಟ ದರ್ಶನ್‌ -

Yashaswi Devadiga
Yashaswi Devadiga Jun 16, 2026 8:27 PM

ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy Case) ದರ್ಶನ್ ಜೈಲು ಸೇರಿದ್ದು ಗೊತ್ತೇ ಇದೆ. ಅವರು ಜೈಲು ಸೇರಿದ ನಂತರ ಅವರು ನಟಿಸಿದ ಒಂದಷ್ಟು ಸಿನಿಮಾಗಳು ಮರು ಬಿಡುಗಡೆ (Re Release) ಆಗಿವೆ. ಇದೀಗ ಮತ್ತೊಂದು ಹಿಟ್ ಸಿನಿಮಾ ರೀ ರಿಲೀಸ್ ಆಗುತ್ತಿದೆ. ʻಕಲಾಸಿಪಾಳ್ಯʼ (kalasipalya movie) ರೀ-ರಿಲೀಸ್‌ಗೆ ಸಜ್ಜಾಗಿದೆ. ವಿಶೇಷವೆಂದರೆ, ಸಿನಿಮಾ ರಿಲೀಸ್‌ಗೆ ಬರುವ ಮುನ್ನವೇ ಬೆಂಗಳೂರಿನ ಪ್ರಮುಖ ಥಿಯೇಟರ್‌ಗಳಲ್ಲಿ ಮುಂಜಾನೆ 6 ಗಂಟೆಯ ʻಫ್ಯಾನ್ಸ್‌ ಶೋʼ ಟಿಕೆಟ್‌ಗಳು ಸಂಪೂರ್ಣವಾಗಿ ಸೋಲ್ಡ್‌ ಔಟ್‌ (Sold Out) ಆಗಿದೆ.

ಮತ್ತೆ ರಿಲೀಸ್‌

'ಶಾಸ್ತ್ರಿ', 'ನಮ್ಮ ಪ್ರೀತಿಯ ರಾಮು' ಹಾಗೂ 'ನವಗ್ರಹ' ಚಿತ್ರಗಳು ರೀ ರಿಲೀಸ್ ಆಗಿ, ಸಖತ್‌ ಸೌಂಡ್‌ ಮಾಡಿದ್ದವು. ʻಬೇರೆ ಭಾಷೆಯ 7 ಸಿನಿಮಾಗಳ ದೃಶ್ಯಗಳನ್ನು ಕಾಪಿ ಪೇಸ್ಟ್ ಮಾಡಿ ಓಂ ಪ್ರಕಾಶ್ ರಾವ್ ಕಟ್ಟಿಕೊಟ್ಟಿದ್ದ ಸಿನಿಮಾ ಇದು.

ಇದನ್ನೂ ಓದಿ: Samantha Ruth Prabhu: ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’!

ಸ್ವತಃ ನಿರ್ದೇಶಕರು ಹೇಳುವಂತೆ ಇದು ರೀ-ಮಿಕ್ಸ್ ಸಿನಿಮಾ. ನಾಯಕಿಯಾಗಿ ರಕ್ಷಿತಾ ಸಾಥ್ ಕೊಟ್ಟಿದ್ದರು.'ಕಲಾಸಿಪಾಳ್ಯ' ಚಿತ್ರದ ಮೊದಲ ಪ್ರದರ್ಶನ ಬೆಳಗ್ಗೆ 6 ಗಂಟೆಗೆ ಶುರುವಾಗುತ್ತಿದೆ. ಮಾಗಡಿ ರಸ್ತೆಯ ಪ್ರಸನ್ನ, ಜೆಪಿ ನಗರದ ಸಿದ್ದೇಶ್ವರ ಹಾಗೂ ಕೆಜಿ ರಸ್ತೆಯ ದರ್ಶನ್ ಫೇವರಿಟ್ ಥಿಯೇಟರ್ ನರ್ತಕಿಯಲ್ಲಿ ಸಿನಿಮಾ ಪ್ರದರ್ಶನವಾಗುವುದು ಖಚಿತವಾಗಿದೆ.ʼ ಸಿನಿಮಾ ಈಗ ಮತ್ತೆ ರಿಲೀಸ್‌ ಆಗುತ್ತಿದೆ.

ಜೂನ್ 19ರ ಶುಕ್ರವಾರ ಪ್ರಸನ್ನ ಚಿತ್ರಮಂದಿರದಲ್ಲಿ 'ಕಲಾಸಿಪಾಳ್ಯ' ಚಿತ್ರದ 6 ಶೋಗಳನ್ನು ಏರ್ಪಡಿಸಲಾಗಿದೆ.22 ವರ್ಷಗಳ ಹಿಂದೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬಂದು ಸಖತ್ ಸದ್ದು ಮಾಡಿತ್ತು. 'ಕಲಾಸಿಪಾಳ್ಯ' ಲೋಕಲ್ ಹೈದ ಕೆಂಚನಾಗಿ ದರ್ಶನ್ ನಟಿಸಿ ಗೆದ್ದಿದ್ದರು.

ಸತತ 35 ವಾರಗಳ ಕಾಲ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡು ಬ್ಲಾಕ್‌ಬಸ್ಟರ್‌ ಲಿಸ್ಟ್‌ ಸೇರಿತ್ತು. ಸಂದರ್ಶನವೊಂದರಲ್ಲಿ ಓಂ ಪ್ರಕಾಶ್‌ ರಾವ್‌ ಅವರು ಹಂಚಿಕೊಂಡಿರುವ ಮಾಹಿತಿಯಂತೆ, ಸಿನಿಮಾ ಅಂದಿನ ದಿನಗಳಲ್ಲೇ ಸುಮಾರು 18 ರಿಂದ 22 ಕೋಟಿ ರೂಪಾಯಿಗಳ ಭರ್ಜರಿ ಕಲೆಕ್ಷನ್‌ ಮಾಡಿ ದಾಖಲೆ ಬರೆದಿತ್ತು.

ಇದನ್ನೂ ಓದಿ: Karan Johar: ಈ ಸೌತ್‌ ಮೂವಿಯ ನಿರ್ಮಾಣಕ್ಕಿಳಿದ ಬಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆ

ರಾಮ್‌ನಾರಾಯಣ್ ಹಾಗೂ ಸಾಧುಕೋಕಿಲ ಸಂಗೀತ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿತ್ತು. ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ದೊಡ್ಡ ಮಟ್ಟದ ಹೊಸ ಸಿನಿಮಾಗಳು ತೆರೆಗೆ ಬಾರದ ಕಾರಣ ಸಿನಿಮಾ ಬಗ್ಗೆ ಮತ್ತೆ ಖುಷ್‌ ಆಗಿದ್ದಾರೆ ಫ್ಯಾನ್ಸ್‌.