ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Das: ಪುಷ್ಪಾ ಹೇಳಿಕೆಗೆ ದೀಪಿಕಾ ದಾಸ್‌ ತಿರುಗೇಟು; ಬೀದಿಗೆ ಬಂತು ಯಶ್‌ ಫ್ಯಾಮಿಲಿ ಜಗಳ!

ನಟ ಯಶ್‌ (Yash) ಅವರ ತಾಯಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಕೊತ್ತಲವಾಡಿ ಎಂಬ ಸಿನಿಮಾದ ನಿರ್ಮಾಪಕಿಯಾಗಿದ್ದ ಪುಷ್ಪಾ ಅವರು ಮಾಧ್ಯಮಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದ್ದರು. ಈ ಸಿನಿಮಾ ರಿಲೀಸ್ ಬಳಿಕ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ.

ಪುಷ್ಪಾ ಹೇಳಿಕೆಗೆ ದೀಪಿಕಾ ದಾಸ್‌ ತಿರುಗೇಟು

Vishakha Bhat Vishakha Bhat Aug 23, 2025 3:08 PM

ಬೆಂಗಳೂರು: ನಟ ಯಶ್‌ ಅವರ ತಾಯಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಕೊತ್ತಲವಾಡಿ ಎಂಬ ಸಿನಿಮಾದ ನಿರ್ಮಾಪಕಿಯಾಗಿದ್ದ (Deepika Das) ಪುಷ್ಪಾ ಅವರು ಮಾಧ್ಯಮಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದ್ದರು. ಈ ಸಿನಿಮಾ ರಿಲೀಸ್ ಬಳಿಕ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಎದುರಾದ ಪ್ರಶ್ನೆಗೆ ಉತ್ತರಿಸಿರುವ ಪುಷ್ಪಾ ಅರುಣ್‌ಕುಮಾರ್ ದೀಪಿಕಾ ದಾಸ್ ಬಗ್ಗೆ ಮಾತನಾಡಿದ್ದಾರೆ. ಇದೀಗ ಪುಷ್ಪಾ ಹೇಳಿದ ಒಂದು ಹೇಳಿಕೆ ಕುಟುಂಬದಲ್ಲಿ ಕಲಹವನ್ನು ಹೊತ್ತಿಸಿದೆ. ಮುಂದಿನ ಸಿನಿಮಾದಲ್ಲಿ ನಿಮ್ಮ ಸಂಬಂಧಿ ದೀಪಿಕಾ ದಾಸ್‌ ಅವರ ಬಗ್ಗೆ ಚಾನ್ಸ್‌ ಕೊಡ್ತೀರಾ ಎಂದು ಮಾಧ್ಯಮದವರು ಕೇಳಿದಾಗ ಪುಷ್ಪಾ ಅರುಣ್‌ಕುಮಾರ್‌ ಗರಂ ಆಗಿದ್ದರು.

ನಮಗೂ ದೀಪಿಕಾ ದಾಸ್‌ಗೆ ಆಗೊಲ್ಲ. ಅವಳು ಯಾವ ದೊಡ್ಡ ಹೀರೋಯಿನ್ ಅಂತಾ ಆಯ್ಕೆ ಮಾಡಿಕೊಳ್ಳಲಿ, ಅವಳು ಏನು ಸಾಧನೆ ಮಾಡಿದ್ದಾಳೆ. ಅವಳು ಸಂಬಂಧ ಆದರೂ ದೂರದಲ್ಲೇ ಇಟ್ಟಿದ್ದೀವಿ, ಈಥರ ಪ್ರಶ್ನೆ ಕೇಳಬೇಡಿ ನಮ್ಮ ಮಗ ಬೈಯೋದಿಲ್ವಾ? ಎಂದು ಖಾರವಾಗಿ ಉತ್ತರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಇದೀಗ ದೀಪಿಕಾ ದಾಸ್‌ ಯಶ್‌ ತಾಯಿಗೆ ಕೌಂಟರ್‌ ಕೊಟ್ಟಿದ್ದಾರೆ. ದೀಪಿಕಾ ದಾಸ್ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ. `ಹೊಸ ಕಲಾವಿದರನ್ನ ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡುವುದನ್ನ ಕಲಿತಿರಬೇಕು. ಇಲ್ಲಿಯವರೆಗೂ ಯಾರ ಹೆಸರನ್ನೂ ಹೇಳಿಕೊಂಡು ಬಂದಿಲ್ಲ ಮುಂದೆನೂ ಬರುವುದಿಲ್ಲ.

ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ.. ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದು ಖಡಕ್‌ ಉತ್ತರ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Narendra Modi: "ನಮ್ಮದೇ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಯಾಗಲಿದೆ"; ಭಾರತದ ಮಹತ್ವಾಕಾಂಕ್ಷೆಗಳನ್ನು ವಿವರಿಸಿದ ಮೋದಿ

ದೀಪಿಕಾ ದಾಸ್ ಅವರು ಕನ್ನಡ ಕಿರುತೆರೆ ನಟಿಯಾಗಿ ಗಮನ ಸೆಳೆದಿದ್ದಾರೆ. ಮೊದಲು ನಾಗಿಣಿ ಧಾರವಾಹಿಯಿಂದ ಫೇಮಸ್‌ ಆದ ದೀಪಿಕಾ, ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಗ್‌ಬಾಸ್‌ ನಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದರು. ದೀಪಿಕಾ ದಾಸ್​ಗೆ ಪುಷ್ಪಾ ಅವರು ದೊಡ್ಡಮ್ಮ ಆಗಬೇಕು. ಪುಷ್ಪಾ ಹಾಗೂ ದೀಪಿಕಾ ದಾಸ್ ತಾಯಿ ಸೋದರಿಯರು. ಹೀಗಾಗಿ, ಸಂಬಂಧದಲ್ಲಿ ಯಶ್ ಹಾಗೂ ದೀಪಿಕಾ ಅಣ್ಣ-ತಂಗಿ. ಆದರೆ ಈ ಕುಟುಂಬದ ನಡುವೆ ಯಾವುದೂ ಸರಿ ಇಲ್ಲ ಎಂದು ಇದೀಗ ತಿಳಿದು ಬಂದಿದೆ.