ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Reels Ajji Lakshmi: ಡ್ರಾಮಾ ಜೂನಿಯರ್ಸ್ ಸೂರಜ್ ಅಜ್ಜಿ ನಿಧನ: 'ರೀಲ್ಸ್ ಅಜ್ಜಿ' ಲಕ್ಷ್ಮಿ ಇನ್ನು ನೆನಪು ಮಾತ್ರ

Reels Ajji Lakshmi: ಸರಿಯಾಗಿ ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ಮರಿಮೊಮ್ಮಗ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಫೇಮಸ್‌ ಆದವರು ಲಕ್ಷ್ಮಿ ನಾಯ್ಕ . ಯಲ್ಲಾಪುರ ತಾಲ್ಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ . ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಇವರು ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿಯವರ ಮುತ್ತಜ್ಜಿ.

ಡ್ರಾಮಾ ಜೂನಿಯರ್ಸ್ ಸೂರಜ್ ಅಜ್ಜಿ ನಿಧನ

ಲಕ್ಷ್ಮಿ ನಾಯ್ಕ -

Yashaswi Devadiga
Yashaswi Devadiga Mar 29, 2026 9:42 AM

ಸರಿಯಾಗಿ ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ಮರಿಮೊಮ್ಮಗ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಫೇಮಸ್‌ ಆದವರು ಲಕ್ಷ್ಮಿ ನಾಯ್ಕ (Reels ajji Lakshmi Naik). ಯಲ್ಲಾಪುರ ತಾಲ್ಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ (Passes away). ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಇವರು ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿಯವರ ಮುತ್ತಜ್ಜಿ.

ಜನರ ಅಚ್ಚುಮೆಚ್ಚಿನ ರೀಲ್ಸ್‌ ಅಜ್ಜಿ

ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಅಂದ್ರೆ ಸೂರಜ್ ಯಾವ ರೀಲ್ಸ್ ಹಾಕಿದರೂ ಅದರಲ್ಲಿ ಅಜ್ಜಿ ಯಾಕಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಈ ಅಜ್ಜಿಯನ್ನು ಜನರು ಇಷ್ಟಪಡುತ್ತಿದ್ದಾರೆ.

ಇದನ್ನೂ ಓದಿ: Dhurandhar 2: 1,200 ಕೋಟಿ ರೂ.ಗಳನ್ನು ದಾಟಿದ ಧುರಂಧರ್‌ 2 ಕಲೆಕ್ಷನ್‌!

ಮರಿಮೊಮ್ಮಗ ಡ್ರಾಮಾ ಜೂನಿಯರ್ಸ್ ಸೂರಜ್ ಜೊತೆ ಲೆಕವಿಲ್ಲದಷ್ಟು ರಿಲ್ಸ್ ಮಾಡೋ ಮೂಲಕ ಅನೃಕ ಜನರ ಗಮನಸೆಳೆಯುವಂತೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ 'ರೀಲ್ಸ್ ಅಜ್ಜಿ' ಎಂದೇ ಮನೆಮಾತಾಗಿದ್ದರು.

ಅವರ ಅಗಲಿಕೆಯಿಂದ ಕುಟುಂಬದವರು ಮಾತ್ರವಲ್ಲದೆ ಅಭಿಮಾನಿಗಳಲ್ಲೂ ದುಃಖದ ವಾತಾವರಣ ಮೂಡಿದೆ. ತಮ್ಮ ಸರಳ ಸ್ವಭಾವ ಅಭಿನಯದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದರು. ಅವರ ಪ್ರತಿಯೊಂದು ವಿಡಿಯೋಗಳು ಹಾಗೂ ಅಭಿನಯ ಶೈಲಿ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದು, ಎಲ್ಲ ವಯಸ್ಸಿನವರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದರು.

ಇದನ್ನೂ ಓದಿ: Toxic Movie: ʻಟಾಕ್ಸಿಕ್‌ʼ ಚಿತ್ರಕ್ಕೆ ಕಿಯಾರ ಆಯ್ಕೆ ಆಗಿದ್ದು ಏಕೆ? ನಿರ್ದೇಶಕಿ ಕೊಟ್ಟ ಕಾರಣ ಇದು

ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.