Drishyam 3: ಜಾರ್ಜ್ ಕುಟ್ಟಿ ಬಂದೇ ಬಿಟ್ಟ; 'ದೃಶ್ಯಂ 3'ಯಿಂದ ಬಂತು ಬಿಗ್ ಅಪ್‌ಡೇಟ್!
Mohanlal: 2013ರಲ್ಲಿ ಬಂದಿದ್ದ 'ದೃಶ್ಯಂ' ಸಿನಿಮಾ ಹಿಟ್ ಆಗಿತ್ತು. ಕನ್ನಡ ಸೇರಿ ಹಲವು ಭಾಷೆಗಳಿಗೆ ರೀಮೆಕ್ ಆಗಿತ್ತು. 12 ವರ್ಷಗಳ ಬಳಿಕ ಪಾರ್ಟ್-2 ಬಂದಿತ್ತು. ಸಿನಿರಸಿಕರ ಮನಗೆದ್ದಿತ್ತು. ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೃಶ್ಯಂ 3 ಸಿನಿಮಾದಿಂದ ಬಿಗ್ ಅಪ್‌ಡೇಟ್ ಬಂದಿದೆ. ಏನದು?
ದೃಶ್ಯಂ 3 ಸಿನಿಮಾ -
ಮೋಹನ್ ಲಾಲ್ (Mohanlal) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೃಶ್ಯಂ 3 (Drishyam 3) ಸಿನಿಮಾದಿಂದ ಬಿಗ್ ಅಪ್‌ಡೇಟ್ ಬಂದಿದೆ. ಇದೀಗ, ಸ್ವತಃ ಮೋಹನ್‌ಲಾಲ್ ಅವರೇ ಚಿತ್ರದ ಬಗ್ಗೆ ಒಂದು ಮುಖ್ಯ ಅಪ್‌ಡೇಟ್ ನೀಡಿದ್ದಾರೆ. ಮೊದಲ ಎರಡು ಭಾಗಗಳ ಕಥೆ (Story) ಎಲ್ಲರಿಗೂ ಗೊತ್ತೇ ಇದೆ. ದಕ್ಷಿಣ ಭಾರತ, ಉತ್ತರ ಭಾರತ ಅನ್ನೋ ಭೇದವಿಲ್ಲದೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಅದಕ್ಕಾಗಿಯೇ ಮೋಹನ್‌ಲಾಲ್ ಅವರ 'ದೃಶ್ಯಂ 3' ಮೇಲೆ ಇಷ್ಟೊಂದು ನಿರೀಕ್ಷೆ ಇದೆ. ಹಾಗಾದ್ರೆ ಟೀಸರ್ ರಿಲೀಸ್ (Teaser) ಯಾವಾಗ?
ದೃಶ್ಯಂ 3 ಟೀಸರ್ ರಿಲೀಸ್ ಯಾವಾಗ?
ದೃಶ್ಯಂ 3 ಟೀಸರ್ ಏಪ್ರಿಲ್ 29, 2026 ರಂದು ಬಿಡುಗಡೆಯಾಗಲಿದೆ. ಸಂಜೆ 5 ಗಂಟೆಯಿಂದ ಪ್ರೇಕ್ಷಕರು ಟೀಸರ್ ನೋಡಬಹುದು. ಈ ಅನೌನ್ಸ್‌ಮೆಂಟ್ ಜೊತೆಗೆ ಒಂದು ಹೊಸ ಪೋಸ್ಟರ್ ಕೂಡ ಬಿಟ್ಟಿದ್ದಾರೆ. ಅದರಲ್ಲಿ ಮೋಹನ್‌ಲಾಲ್ ಅವರ ಜಾರ್ಜ್‌ಕುಟ್ಟಿ ಪಾತ್ರ, ಕೈಯಲ್ಲಿ ಒಂದು ಮಣ್ಣಿನ ಗುದ್ದಲಿ ಮತ್ತು ಬುಟ್ಟಿ ಹಿಡಿದು ಮನೆಯ ಅಂಗಳದಲ್ಲಿ ನಿಂತಿರುವಂತಿದೆ.
ಇದನ್ನೂ ಓದಿ: Annayya Serial Kannada: ನಾರಿ ಶಕ್ತಿ ಒಂದಾಗಾಯ್ತು! ಕೈಗೆ ಸಿಕ್ಕ ಸೀನ -ಪಿಂಕಿನಾ ಸುಮ್ನೆ ಬಿಡ್ತಾಳಾ ಪಾರು?
ಚಿತ್ರ ಬಿಡುಗಡೆಗೂ ಮುನ್ನ ಕೆಲವು ಕಾನೂನು ತೊಂದರೆಗಳನ್ನು ಎದುರಿಸಿದೆ ಎಂದು ಉದ್ಯಮದಲ್ಲಿ ವರದಿಗಳಿದ್ದವು. ಡಿಜಿಟಲ್ ಹಕ್ಕುಗಳ ವಿವಾದದಿಂದಾಗಿ ಚಿತ್ರದ ಬಿಡುಗಡೆ ಸಂದೇಹದಲ್ಲಿದೆ ಎಂಬ ವದಂತಿಗಳಿದ್ದವು. ಆದರೀಗ ಎಲ್ಲ ಅಂತೆ ಕಂತೆಗೆ ಫುಲ್ ಸ್ಟಾಪ್ ಬಿದ್ದಿರುವಂತಿದೆ.
ಕಥೆಯಲ್ಲಿ ಸಸ್ಪೆನ್ಸ್
ಕುತೂಹಲಕಾರಿ ಸಂಗತಿಯೆಂದರೆ, ಈ ಬೃಹತ್ ಯೋಜನೆಗೆ ಇಲ್ಲಿಯವರೆಗೆ ಯಾವುದೇ ದೊಡ್ಡ ಪ್ರಚಾರಗಳು ಸಿಕ್ಕಿಲ್ಲ. ಸಾಮಾನ್ಯವಾಗಿ, ಅಂತಹ ಫ್ರಾಂಚೈಸ್ ಚಿತ್ರಗಳಿಗೆ ಮುಂಚಿತವಾಗಿಯೇ ಹೈಪ್ ಸೃಷ್ಟಿಯಾಗುತ್ತದೆ. ಆದರೆ 'ದೃಶ್ಯಂ 3' ವಿಷಯದಲ್ಲಿ, ಕಥೆಯಲ್ಲಿ ಸಸ್ಪೆನ್ಸ್ ಕಾಯ್ದುಕೊಳ್ಳುವ ಉದ್ದೇಶದಿಂದಲೇ ನಿರ್ಮಾಪಕರು ಮೌನವಾಗಿರಬಹುದೆಂದು ವರದಿ ಆಗುತ್ತಲೇ ಇದೆ.
'ದೃಶ್ಯಂ 3' ಹಿಂದಿ ವರ್ಷನ್ ನಿರ್ಮಾಪಕರಾದ ಪನೋರಮಾ ಸ್ಟುಡಿಯೋಸ್, ಮಲಯಾಳಂ ಒರಿಜಿನಲ್ 'ದೃಶ್ಯಂ 3' ಚಿತ್ರದ ಗ್ಲೋಬಲ್ ಥಿಯೇಟ್ರಿಕಲ್ ಮತ್ತು ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ ಎಂದು ಈ ಹಿಂದೆಯೇ ವರದಿಗಳಾಗಿದ್ದವು.
The official teaser of Drishyam 3 arrives this Wednesday, April 29, at 5 PM IST.
— Mohanlal (@Mohanlal) April 27, 2026
Stay tuned.#Drishyam3 | Worldwide Release | May 21st 2026@jeethu4ever @antonypbvr @KumarMangat @jayantilalgada @AbhishekPathakk #MeenaSagar@aashirvadcine @PanoramaMovies @PenMovies… pic.twitter.com/PE8uymHM24
'ದೃಶ್ಯಂ 3' ಹಿಂದಿ ವರ್ಷನ್ ನಿರ್ಮಾಪಕರಾದ ಪನೋರಮಾ ಸ್ಟುಡಿಯೋಸ್, ಮಲಯಾಳಂ ಒರಿಜಿನಲ್ 'ದೃಶ್ಯಂ 3' ಚಿತ್ರದ ಗ್ಲೋಬಲ್ ಥಿಯೇಟ್ರಿಕಲ್ ಮತ್ತು ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ ಎಂದು ಈ ಹಿಂದೆಯೇ ವರದಿಗಳಾಗಿದ್ದವು. ಈ ಚಿತ್ರದಲ್ಲಿ ಕೂಡ ಮೋಹನ್ ಲಾಲ್, ಮೀನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Karna Serial: ತನ್ನ ಪ್ರೀತಿ ವಿಷಯವನ್ನು ನಿಧಿ ಎದುರು ತೆರೆದಿಟ್ಟಿದ್ದಾಳೆ ನಿತ್ಯಾ!
ತನ್ನ ಕುಟುಂಬದ ರಕ್ಷಣೆಗೆ ನಿಂತಿರುವ ಜಾರ್ಜ್ ಕುಟ್ಟಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ಎರಡೆರಡು ಬಾರಿ ತಪ್ಪಿಸಿಕೊಂಡಿದ್ದಾನೆ. ಈ ಬಾರಿ ಕಥೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.