Karna Serial: ತನ್ನ ಪ್ರೀತಿ ವಿಷಯವನ್ನು ನಿಧಿ ಎದುರು ತೆರೆದಿಟ್ಟಿದ್ದಾಳೆ ನಿತ್ಯಾ!
Karna Serial: ಕರ್ಣನ ಮೇಲೆ ನಿತ್ಯಾಳಿಗೆ ಪ್ರೀತಿ ಆಗಿದೆ. ಈ ಮೊದಲು ಪ್ರೋಮೋದಲ್ಲಿ ನಿತ್ಯಾಳಿಂದ ಒಲವ ಗುಟ್ಟು ರಟ್ಟಾಗಿ ನಿಧಿ ಹಾಗೂ ಕರ್ಣ ಒಂದಾಗುವಂತೆ ಇತ್ತು. ಆದರೀಗ ಹೊಸ ಪ್ರೋಮೋ ನೋಡಿ ವಿಕ್ಷಕರು ಶಾಕ್ ಆಗಿದ್ದಾರೆ. ನಿತ್ಯಾ ತಾನು ಕರ್ಣನನ್ನು ಪ್ರೀತಿಸುತ್ತಿರುವ ವಿಷಯವನ್ನು ತಂಗಿ ನಿಧಿಗೆ ತಿಳಿಸುತ್ತಾಳೆ. ಆದರೆ, ಕರ್ಣನನ್ನು ಪ್ರೀತಿಸುತ್ತಿದ್ದ ನಿಧಿ, ಅಕ್ಕನ ಸಂತೋಷಕ್ಕಾಗಿ ಪ್ರೀತಿ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.
ಕರ್ಣ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ (Karna Serial Kannada) ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಈ ಮೊದಲು ಪ್ರೋಮೋದಲ್ಲಿ ನಿತ್ಯಾಳಿಂದ ಒಲವ ಗುಟ್ಟು ರಟ್ಟಾಗಿ ನಿಧಿ (Nidhi Karna) ಹಾಗೂ ಕರ್ಣ ಒಂದಾಗುವಂತೆ ಇತ್ತು. ಆದರೀಗ ಹೊಸ ಪ್ರೋಮೋ (New Promo) ನೋಡಿ ವಿಕ್ಷಕರು ಶಾಕ್ ಆಗಿದ್ದಾರೆ. ನಿತ್ಯಾ ತಾನು ಕರ್ಣನನ್ನು ಪ್ರೀತಿಸುತ್ತಿರುವ ವಿಷಯವನ್ನು ತಂಗಿ ನಿಧಿಗೆ ತಿಳಿಸುತ್ತಾಳೆ. ಆದರೆ, ಕರ್ಣನನ್ನು ಪ್ರೀತಿಸುತ್ತಿದ್ದ ನಿಧಿ, ಅಕ್ಕನ ಸಂತೋಷಕ್ಕಾಗಿ ಪ್ರೀತಿ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.
ಪ್ರೀತಿ ವಿಷಯವನ್ನು ನಿಧಿ ಎದುರು ತೆರೆದಿಟ್ಟಿದ್ದಾಳೆ ನಿತ್ಯಾ!
ಹೌದು ಕರ್ಣನ ಮೇಲೆ ನಿತ್ಯಾಳಿಗೆ ಪ್ರೀತಿ ಆಗಿದೆ. ಒಂಟಿ ಆಗಿ ಮಗುವನ್ನು ಹೊತ್ತು ಈ ಸಮಾಜದಲ್ಲಿ ಬದುಕೋದು ಕಷ್ಟ. ನನ್ನಲ್ಲಿ ಪ್ರೀತಿ ಚಿಗುರಿದೆ. ಕರ್ಣನ ಮೇಲೆ ಪ್ರೀತಿ ಹುಟ್ಟಿದೆ. ಹೊಸ ಭರವಸೆ ಮೂಡಿದೆ. ಕರ್ಣನನ್ನು ಮನಸಾರೆ ಪ್ರೀತಿಸುತ್ತಿರುವೆ ಎಂದು ನಿಧಿ ಮುಂದೆ ನಿತ್ಯಾ ಹೇಳಿದ್ದಾಳೆ.
ಇದನ್ನೂ ಓದಿ: Toxic Movie: 'ಟಾಕ್ಸಿಕ್' ಮತ್ತೆ ಪೋಸ್ಟ್‌ಪೋನ್? ಏನಿದು ಸುದ್ದಿ?
ನಾನು ಅವರನ್ನು ಪ್ರೀತಿಸ್ತಾ ಅವರಿಗೆ ಮೋಸ ಮಾಡುತ್ತಿದ್ದೆನೋ ಎಂದು ಎನ್ನಿಸುವುದೂ ಉಂಟು. ಆದರೆ ಇದರಲ್ಲಿ ತಪ್ಪೇನಿಲ್ಲ ಎಂದೂ ಅನ್ನಿಸುತ್ತಿದೆ ಎನ್ನುತ್ತಾಳೆ. ಇದನ್ನು ಕೇಳಿ ನಿಧಿ ಕುಸಿದು ಹೋಗುತ್ತಾಳೆ. ತಾನು ಹೇಳಲು ಬಂದಿರುವ ವಿಷಯವನ್ನು ಅಕ್ಕನಿಗೆ ಅವಳು ಹೇಳುವುದೇ ಇಲ್ಲ. ಸದಾ ಅಕ್ಕನ ಶ್ರೇಯಸ್ಸನ್ನೇ ಬಯಸುವ ಆಕೆ ಅಕ್ಕನಿಗಾಗಿ ಕರ್ಣನನ್ನು ಬಿಟ್ಟುಕೊಡಲು ರೆಡಿಯಾಗಿದ್ದಾಳೆ.
ನಿತ್ಯಾಳಿಂದ ರಟ್ಟಾಯ್ತು ಒಲವ ಗುಟ್ಟು
ಇದಾಗಲೇ ಕರ್ಣ ಸೀರಿಯಲ್ ಪ್ರೊಮೋದಲ್ಲಿ ನಿಧಿ ಮತ್ತು ಅರ್ಜುನ್ ಮದುವೆ ಎಂಬಂತೆ ತೋರಿಸಲಾಗಿದೆ. ತಾಳಿ ಕಟ್ಟುವ ಸಮಯದಲ್ಲಿ, ನಿತ್ಯಾ ಅಲ್ಲಿಗೆ ಬಂದು ಕರ್ಣ ಮತ್ತು ನಿಧಿ ಪ್ರೀತಿಸ್ತಾ ಇರುವ ವಿಷಯ ತಿಳಿಸುತ್ತಾಳೆ. ಮಗು ಕೂಡ ತೇಜಸ್‌ದು, ನಾನು ಕರ್ಣನನ್ನು ಮದುವೆನೇ ಆಗಿಲ್ಲ ಎಂದು ಹೇಳಿದ್ದಾಳೆ ನಿತ್ಯಾ. ಈ ಸತ್ಯ ಇಡೀ ಮನೆಗೆ ಘಾಸಿ ಉಂಟು ಮಾಡುವಂತೆ ಇತ್ತು.
ಈಗಿನ ಪ್ರೊಮೋದಲ್ಲಿ ಸದ್ಯ ನಿತ್ಯಾ ತನ್ನ ಪ್ರೀತಿಯನ್ನು ನಿಧಿ ಎದುರು ಹೇಳಿಕೊಂಡಿದ್ದಾಳೆ. ಹಾಗಿದ್ದರೆ ಮದುವೆಯ ಪ್ರೊಮೋ ತೋರಿಸಿದ್ದು ಅದು ಕನಸಾ ಎಂಬ ಸಂಶಯ ವೀಕ್ಷರದ್ದು.
ರಮೇಶ್ ಹೀರೊ ಹೀರೋಯಿನ್ ವಿರುದ್ಧ ಆಗಾಗ್ಗ ರಣತಂತ್ರ ರೂಪಿಸುತ್ತಿರುತ್ತಾನೆ. ಅರ್ಜುನ್ ಎಂಬ ಹೊಸ ಬಾಣ ಬಿಟ್ಟಿದ್ದ. ಕರ್ಣ ಹಾಗೂ ನಿಧಿ ಪ್ರೀತಿ ಮಾಡುತ್ತಿದ್ದಾರೆ ಅಂತ ಗೊತ್ತಿದ್ದರೂ ರಮೇಶ್ ನಿಧಿಗಾಗಿ ಹುಡುಗನ ಕರೆಸಿದ್ದ. ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದ. ಕರ್ಣ ತನಗೆ ಇಷ್ಟ ಇಲ್ಲದಿದ್ದರೂ ನಿತ್ಯಾಳ ಮದುವೆ ಆಗುವ ಪರಿಸ್ಥಿತಿ ಬಂತು.
ಇದನ್ನೂ ಓದಿ: Amruthadhaare serial: ಗೌತಮ್‌ಗೆ ಸಾಥ್ ಕೊಟ್ಟ ಅರಸನ ಕೋಟೆ ಅಖಿಲಾಂಡೇಶ್ವರಿ! ತನ್ನ ಸಾಮ್ರಾಜ್ಯಕ್ಕೆ ಮರಳಿದ ದಿವಾನ್
ಆ ಬಳಿಕವೂ ರಮೇಶ್ ತೊಂದರೆ ಕೊಡೋದನ್ನು ಮುಂದುವರಿಸಿದ್ದ. ಇದೀಗ ಮತ್ತೆ ರಮೇಶ್ ಕುತಂತ್ರವೇ ಗೆಲ್ಲುತ್ತಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.