ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gilli Nata: ಗಿಲ್ಲಿ ಗೆದ್ದಿದ್ದೇ ಡಿ ಬಾಸ್‌ ಫ್ಯಾನ್ಸ್‌ನಿಂದ, ಅದೃಷ್ಟದಿಂದ; ಜಾಹ್ನವಿ

Jhanvi: ನಿರೂಪಕಿ ಜಾಹ್ನವಿ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ ಮೂಲಕ ಸಿಕ್ಕಾಪಟ್ಟೆ ಫೇಮಸ್‌ ಆದರು. ದೊಡ್ಮನೆಗೆ ಎಂಟ್ರಿ ಕೊಡುವ ಮುನ್ನವೇ ಸಿನಿಮಾಗಳಲ್ಲಿ ಜಾಹ್ನವಿ ಬ್ಯುಸಿಯಾಗಿದ್ದರು. ಜಾಹ್ನವಿ ನಟಿಸಿದ ಸಿನಿಮಾಗಳು ಇದೀಗ ರಿಲೀಸ್‌ಗೆ ಸಜ್ಜಾಗಿವೆ. ಯುವ ಸರ್ಕಾರ್ ಈ ಸಿನಿಮಾದಲ್ಲಿ ವೀರೇನ್ ಕೇಶವ್ ಅವರು ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಬಿಗ್ ಬಾಸ್ ಜಾಹ್ನವಿ, ಶ್ರುತಿ ದೇಶಪಾಂಡೆ ಹಾಗೂ ಅಲ್ಫಿಯಾ ನಟಿಸಿದ್ದಾರೆ. ಇದೀಗ ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಜಾಹ್ನವಿ ಹಂಚಿಕೊಂಡರು.

ಗಿಲ್ಲಿ ಗೆದ್ದಿದ್ದೇ ಡಿ ಬಾಸ್‌ ಫ್ಯಾನ್ಸ್‌ನಿಂದ, ಅದೃಷ್ಟದಿಂದ; ಜಾಹ್ನವಿ

ನಟಿ ಜಾಹ್ನವಿ -

Yashaswi Devadiga
Yashaswi Devadiga Feb 13, 2026 7:38 PM

ನಿರೂಪಕಿ ಜಾಹ್ನವಿ (Jhanvi R) ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ (Bigg Boss Kannada 12) ಮೂಲಕ ಸಿಕ್ಕಾಪಟ್ಟೆ ಫೇಮಸ್‌ ಆದರು. ದೊಡ್ಮನೆಗೆ ಎಂಟ್ರಿ ಕೊಡುವ ಮುನ್ನವೇ ಸಿನಿಮಾಗಳಲ್ಲಿ ಜಾಹ್ನವಿ ಬ್ಯುಸಿಯಾಗಿದ್ದರು. ಜಾಹ್ನವಿ ನಟಿಸಿದ ಸಿನಿಮಾಗಳು ಇದೀಗ ರಿಲೀಸ್‌ಗೆ (Release) ಸಜ್ಜಾಗಿವೆ. ಯುವ ಸರ್ಕಾರ್ (Yuva Sarkar) ಈ ಸಿನಿಮಾದಲ್ಲಿ ವೀರೇನ್ ಕೇಶವ್ ಅವರು ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಬಿಗ್ ಬಾಸ್ ಜಾಹ್ನವಿ, ಶ್ರುತಿ ದೇಶಪಾಂಡೆ ಹಾಗೂ ಅಲ್ಫಿಯಾ ನಟಿಸಿದ್ದಾರೆ. ಇದೀಗ ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಜಾಹ್ನವಿ ಹಂಚಿಕೊಂಡರು.

ಎಲ್ಲಿ ಹೋದ್ರು ಜನ ಮಾತನಾಡಿಸ್ತಾರೆ

ಬಿಗ್‌ ಬಾಸ್‌ ಆದಮೇಲೆ ಎಲ್ಲಿ ಹೋದ್ರು ಜನ ಮಾತನಾಡಿಸ್ತಾರೆ. ಬಿಗ್‌ ಬಾಸ್‌ ಬಗ್ಗೆ ಹೇಳ್ತಾರೆ. ಇನ್ನು ತುಂಬಾ ಜನಕ್ಕೆ ನಾನು ಸಹಾಯ ಮಾಡ್ತಿದ್ದೆ, ಆದರೆ ಸಮಾಜ ಸೇವೆಯನ್ನ ನಾನು ತೋರಿಸ್ತಾ ಕೊಳ್ತಾ ಇರಲಿಲ್ಲ. ಈಗೀಗ ಎಲ್ಲರೂ ನಮ್ಮ ಹಾಗೇ ಬೇರೆಯವರಿಗೆ ಸಹಾಯ ಮಾಡಲಿ ಅಂತ ಪೋಸ್ಟ್ ಮಾಡ್ತೀನಿ. ನನ್ನ ಆದಾಯದ 10% ಹಣವನ್ನ ಸಮಾಜಸೇವೆಗೆ ಮೀಸಲಿಡ್ತೀನಿ ಎಂದರು.

ಇದನ್ನೂ ಓದಿ: ಪಾರ್ವತಮ್ಮ ರಾಜ್‌ಕುಮಾರ್‌ ತಂಗಿ ಮಗನ 'ಯುವ ಸರ್ಕಾರ್' ಚಿತ್ರದಲ್ಲಿ ʻಬಿಗ್‌ ಬಾಸ್ʼ ಜಾಹ್ನವಿ; ಈ ಚಿತ್ರಕ್ಕೆ ಸಿಕ್ಕಿದೆ ಶಿವಣ್ಣನ ಆಶೀರ್ವಾದ

ಡಿ ಬಾಸ್‌ ಫ್ಯಾನ್ಸ್‌ ಸಪೋರ್ಟ್‌ ಇರಬೋದು

ಗಿಲ್ಲಿ ಬಗ್ಗೆ ಮಾತನಾಡಿ, ಗಿಲ್ಲಿ ತುಂಬಾ ನಗಿಸಿದ್ದಾನೆ. ಈ ಲೆವಲ್‌ಗಿದೆ ಅಂತ ಗೊತ್ತೀರಲಿಲ್ಲ. ಡೆವಿಲ್‌ ಸಿನಿಮಾದಲ್ಲಿಯೂ ಗಿಲ್ಲಿ ಕೆಲಸ ಮಾಡಿದ್ದ. ಡಿ ಬಾಸ್‌ ಫ್ಯಾನ್ಸ್‌ ಗಿಲ್ಲಿ ಸಪೋರ್ಟ್‌ ಮಾಡಿರಬಹುದು. ಅವನ ಕಮ್ಯುನಿಟಿ ಇಂದ ಸಪೋರ್ಟ್‌ ಸಿಕ್ಕಿರಬಹುದು. ನಮ್‌ ಥರ ಭಾಷೆ ಮಾತಾಡೋ ಹುಡುಗ ಇದ್ದಾಗ ಕನೆಕ್ಟ್‌ ಆಗಿರಬಹುದು.

ಸೋಷಿಯಲ್‌ ಮೀಡಿಯಾ ಕೂಡ ಇದಕ್ಕೆ ಇದೆ. ಸೋಷಿಯಲ್‌ ಮೀಡಿಯಾ ಎಡಿಟ್‌, ಟ್ರೋಲ್‌ ಮಾಡಿ ರೀಚ್‌ ಮಾಡಿಸಿದ್ದಾರೆ. ಹಾಗಾಗೆ ಅವನಿಗೆ ಹೆಸರು ಬಂದಿದೆ. ನಟರಾಜ್‌ ಅಂತಿದ್ದ, ಈಗ ಗಿಲ್ಲಿ ನಟ ಆಗಿದ್ದಾನೆ. ಎಲ್ಲ ಫ್ಯಾಕ್ಟರ್ಸ್‌ ವರ್ಕ್‌ ಆಗಿದೆ. ನಮ್ಮವರು ಅಂತ ಬಂದಾಗ ಯಾರೂ ಬಿಟ್ಟುಕೊಡಲ್ಲ. ಡಿ ಬಾಸ್‌ ಫ್ಯಾನ್ಸ್‌ ಕನ್ವರ್ಟ್‌ ಆಗಿರಬಹುದು. ಗಿಲ್ಲಿಗೂ ಟ್ಯಾಲೆಂಟ್‌ ಕೂಡ ಇದೆ. ತುಂಬಾ ಜನ ಟ್ಯಾಲೆಂಟ್‌ ಇರತ್ತೆ. ಎಲ್ಲದಕ್ಕೂ ಬರೆದುಕೊಂಡು ಬರಬೇಕು. ಲಕ್‌ ಕೂಡ ಇರಬೇಕು ಎಂದರು.



ಸಿನಿಮಾ ವಿಚಾರಕ್ಕೆ ಬರೋದಾದರೆ, ಶ್ರೀಮತಿ ಪಾರ್ವತಮ್ಮ ರಾಜ್‌ಮಾರ್ ಅವರ ತಂಗಿಯ ಪುತ್ರ ಸಂತೋಷ್ ಕುಮಾರ್ ಈ ಹಿಂದೆ ಬಿಂದಾಸ್ ಗೂಗ್ಲಿ, ಕ್ಯಾಂಪಸ್ ಕ್ರಾಂತಿ ಸೇರಿದಂತೆ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದರು‌. ಈಗ ಅವರು ಸದ್ದಿಲ್ಲದೆ ತಮ್ಮ ನಿರ್ದೇಶನದ 4 ನೇ ಸಿನಿಮಾದ ಶೂಟಿಂಗ್‌ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಕೊನೇ ಹಂತಕ್ಕೆ ತಂದಿದ್ದಾರೆ.

ಇದನ್ನೂ ಓದಿ: Golden Star Ganesh Brother: ಅಣ್ಣ ಹಾಕಿಕೊಟ್ಟ 4 ಕೋಟಿ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್‌ ಸಹೋದರ ಬೇಸರ

ಈ ಸಿನಿಮಾದಲ್ಲಿ ವೀರೇನ್ ಕೇಶವ್ ಅವರು ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಬಿಗ್ ಬಾಸ್ ಜಾಹ್ನವಿ, ಶ್ರುತಿ ದೇಶಪಾಂಡೆ ಹಾಗೂ ಅಲ್ಫಿಯಾ ನಟಿಸಿದ್ದಾರೆ. ಈ ಸಿನಿಮಾವನ್ನು ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ನೇರವಾಗಿ ಶೂಟಿಂಗ್‌ ಮಾಡಲಾಗಿದೆ. ಹಾಗಾಗಿ ಸಿನಿಮಾದಲ್ಲಿ ಮೂರು ಭಾಷೆಯ ಕಲಾವಿದರೂ ನಟಿಸಿದ್ದಾರೆ. ನಟ ಧರ್ಮಕೀರ್ತಿರಾಜ್, ತಂದೆ ಕೀರ್ತಿರಾಜ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.