ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: ಜೋಫ್ರಾ ಆರ್ಚರ್‌ ಎದುರು ವೈಭವ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಮೊಯೀನ್‌ ಅಲಿ!

ಇಂಗ್ಲೆಂಡ್‌ ವಿರುದ್ಧ ಟಿ20ಐ ಸರಣಿಯಲ್ಲಿ ಮಾರಕ ವೇಗಿ ಜೋಫ್ರಾ ಆರ್ಚರ್‌ ಭಾರತ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿಯನ್ನು ನಿಯಂತ್ರಿಸಿದ್ದಾರೆ. ಮೂರು ಪಂದ್ಯಗಳ ಪೈಕಿ ಎರಡು ಬಾರಿ 15ರ ವಯಸ್ಸಿನ ಆಟಗಾರನನ್ನು ಔಟ್‌ ಮಾಡಿದ್ದಾರೆ. ಈ ಬಗ್ಗೆ ಮಾಜಿ ಸ್ಪಿನ್ನರ್‌ ಮೊಯೀನ್‌ ಅಲಿ ಪ್ರತಿಕ್ರಿಯೆ ನೀಡಿದ್ದಾರೆ.

ಆರ್ಚರ್‌ ಎದುರು ವೈಭವ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಮೊಯೀನ್‌ ಅಲಿ!

ವೈಭವ್‌ ಸೂರ್ಯವಂಶಿ-ಜೋಫ್ರಾ ಆರ್ಚರ್‌ ಪೈಪೋಟಿ ಬಗ್ಗೆ ಮೊಯೀನ್‌ ಅಲಿ ಅಭಿಪ್ರಾಯ. -

Profile
Ramesh Kote Jul 11, 2026 5:35 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ಮೂರು ಪಂದ್ಯಗಳಲ್ಲಿ ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ವಿಫಲರಾಗಿದ್ದಾರೆ. ಅವರು ಮೂರು ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದ ಹೊರತಾಗಿಯೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ. ಆದರೆ, ಮೂರು ಬಾರಿ ಔಟ್‌ ಆಗಿರುವ ಅವರು ಎರಡು ಬಾರಿ ರಾಜಸ್ಥಾನ್‌ ರಾಯಲ್ಸ್‌ ಸಹ ಆಟಗಾರ ಜೋಫ್ರಾ ಆರ್ಚರ್‌ಗೆ (Jofra Archer) ವಿಕೆಟ್‌ ಒಪ್ಪಿಸಿದ್ದಾರೆ. ಈ ಬಗ್ಗೆ ಆಂಗ್ಲರ ಮಾಜಿ ಸ್ಪಿನ್‌ ಮೊಯೀನ್‌ ಅಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟಿ20ಐ ಸರಣಿಯಲ್ಲಿ ಜೋಫ್ರಾ ಆರ್ಚರ್‌ ಅವರು ಹೊಸ ಚೆಂಡಿನಲ್ಲಿ ವೈಭವ್‌ ಸೂರ್ಯವಂಶಿಗೆ ಅವರಿಗೆ ಶಾರ್ಟ್‌ ಬಾಲ್‌ ದಾಳಿ ನಡೆಸಿ ವಿಕೆಟ್‌ ಕಿತ್ತಿದ್ದರು. ಮೂರನೇ ಪಂದ್ಯದಲ್ಲಿ ಶಾರ್ಟ್‌ ಬಾಲ್‌ಗೆ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಟ್ಟಿದ್ದರು. ನಂತರ ನಾಲ್ಕನೇ ಟಿ20ಐ ಪಂದ್ಯದಲ್ಲಿ ಅವರು ಶಾರ್ಟ್‌ ಬಾಲ್‌ನಲ್ಲಿ ಟಾಪ್‌ ಎಡ್ಜ್‌ ಮಾಡಿಕೊಂಡಿದ್ದರು. ಆ ಮೂಲಕ ಸಿಕ್ಕಂತಹ ಉತ್ತಮ ಆರಂಭವನ್ನು 15ರ ವಯಸ್ಸಿನ ಬ್ಯಾಟ್ಸ್‌ಮನ್‌ ಕೈಚೆಲ್ಲಿಕೊಂಡಿದ್ದರು.

ENG vs IND: 'ಮುಂದಿನ ಪಂದ್ಯವನ್ನು ಗೆದ್ದು ನಂ 1 ಸ್ಥಾನಕ್ಕೇರುವುದು ನಮ್ಮ ಗುರಿ'-ಭಾರತಕ್ಕೆ ಹ್ಯಾರಿ ಬ್ರೂಕ್‌ ವಾರ್ನಿಂಗ್‌!

ಜೋಫ್ರಾ ಆರ್ಚರ್‌ ಹಾಗೂ ವೈಭವ್‌ ಸೂರ್ಯವಂಶಿ ಅವರ ನಡುವಣ ಕಠಿಣ ಸ್ಪರ್ಧೆಯ ಬಗ್ಗೆ ಇಂಗ್ಲೆಂಡ್‌ ಮಾಜಿ ಆಲ್‌ರೌಂಡರ್‌ ಮೊಯೀನ್‌ ಅಲಿ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ನೆಟ್ಸ್‌ನಲ್ಲಿ ಜೋಫರಾ ಆರ್ಚರ್‌ ಎದುರು ವೈಭವ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಪ್ರಾಬಲ್ಯ ಸಾಧಿಸಿರುವ ವಿಷಯವನ್ನು ನಾನು ಕೇಳಿದ್ದೇನೆ. ಆದರೆ, ಅದೇ ರೀತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

"ಸೂರ್ಯವಂಶಿಗೆ ಜೋಫ್ರಾ ಆರ್ಚರ್‌ ಬೌಲ್‌ ಮಾಡುತ್ತಿರುವ ಹಾದಿ ನನಗೆ ಇಷ್ಟವಾಗಿದೆ. ಐಪಿಎಲ್‌ ಟೂರ್ನಿಯ ಸಂದರ್ಭದಲ್ಲಿ ಆರ್ಚರ್‌ಗೆ ಹಲವು ಬಾರಿ ವೈಭವ್‌ ಸೂರ್ಯವಂಶಿ ದೊಡ್ಡ ಹೊಡೆತಗಳನ್ನು ಹೊಡೆದಿರುವ ವಿಡಿಯೊಗಳನ್ನು ರಾಜಸ್ಥಾನ್‌ ರಾಯಲ್ಸ್‌ ಅಪ್‌ಲೋಡ್‌ ಮಾಡಿದ್ದನ್ನು ವೀಕ್ಷಿಸಿದ್ದೇನೆ. ವೈಭವ್‌ ಅವರನ್ನು ಔಟ್‌ ಮಾಡಲು ಆರ್ಚರ್‌ ಎಸೆದ ಬೌನ್ಸರ್‌ ಅದ್ಭುತವಾಗಿತ್ತು. ವೈಭವ್‌ ಅದ್ಭುತ ಬ್ಯಾಟ್ಸ್‌ಮನ್‌ ಹಾಗೂ ಅವರ ಸಾಮರ್ಥ್ಯವನ್ನು ನಾನು ಹೀಯಾಳಿಸುತ್ತಿಲ್ಲ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ," ಎಂದು ಮೊಯೀನ್‌ ಅಲಿ ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ತಿಳಿಸಿದ್ದಾರೆ.

ವೈಫಲ್ಯದ ಹೊರತಾಗಿಯೂ ವೈಭವ್‌ ಸೂರ್ಯವಂಶಿಯನ್ನು ಬೆಂಬಲಿಸಿದ ಅಭಿಷೇಕ್‌ ನಾಯರ್!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಸಂಜು ಸ್ಯಾಮ್ಸನ್‌ ಅವರು ಯುಕೆ ಪ್ರವಾಸದಲ್ಲಿ ಸತತ ಮೂರು ಬಾರಿ ವಿಫಲರಾದ ಕಾರಣ, ಇಂಗ್ಲೆಂಡ್‌ ವಿರುದ್ಧದ ಎರಡನೇ ಪಂದ್ಯಕ್ಕೆ ಸಂಜು ಬದಲು ವೈಭವ್‌ ಸೂರ್ಯವಂಶಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ, ಬಿಹಾರ ಮೂಲದ ಯುವ ಬ್ಯಾಟ್ಸ್‌ಮನ್‌ ಮೂರೂ ಪಂದ್ಯಗಳಲ್ಲಿ ಐಪಿಎಲ್‌ ಟೂರ್ನಿಯಲ್ಲಿ ತೋರಿದ ಆಟವನ್ನು ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಅವರು ಕ್ರಮವಾಗಿ 14, 13 ಹಾಗೂ 15 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು.

776 ರನ್‌ಗಳನ್ನು ಬಾರಿಸಿದ್ದ ವೈಭವ್‌

2026ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ವೈಭವ್‌ ಸೂರ್ಯವಂಶಿ ಅವರು 237.30ರ ಸ್ಟ್ರೈಕ್‌ ರೇಟ್‌ನಲ್ಲಿ 776 ರನ್‌ಗಳನ್ನು ಬಾರಿಸಿದ್ದರು ಹಾಗೂ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದರು. ಇದರಲ್ಲಿ ಅವರು ಒಂದು ಶತಕ ಹಾಗೂ ಐದು ಅರ್ಧಶತಕಗಳನ್ನು ಸಿಡಿಸಿದ್ದರು.