ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hanumantha Marriage: ಹನುಮಂತ ಲಮಾಣಿ ಮದುವೆ ಯಾವಾಗ? ಹುಡುಗಿ ಬಗ್ಗೆ ಗುಟ್ಟು ಬಿಚ್ಚಿಟ್ಟ ಗೋಲ್ಡ್ ಸುರೇಶ್

2019ರಲ್ಲಿ ಸರಿಗಮಪ ಸೀಸನ್‌ 15 ರಲ್ಲಿ ಪಾಲ್ಗೊಳ್ಳುವ ಮೂಲಕ ಹನುಮಂತು ಹೆಚ್ಚು ಪ್ರಸಿದ್ದಿ ಪಡೆದರು. ಆ ಬಳಿಕ‌ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗ‌ ಬಿಗ್‌ ಬಾಸ್‌ ಕನ್ನಡದ 11ನೇ ಆವೃತ್ತಿಯ ವಿಜೇತರಾಗಿ ಹನುಮಂತ ಲಮಾಣಿ ಹೊರ ಹೊಮ್ಮಿದ್ದಾರೆ. ಇನ್ನು ಹನುಮಂತ ಲಮಾಣಿ ಮದುವೆ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸುದ್ದಿ ಹರಿದಾಡುತ್ತಿದೆ.

ಹನುಮಂತು ಮದ್ವೆ ಆಗೋ ಹುಡುಗಿ ಬಗ್ಗೆ ಗುಟ್ಟು ಬಿಚ್ಚಿಟ್ಟ ಗೋಲ್ಡ್‌ ಸುರೇಶ್‌

Profile Pushpa Kumari May 14, 2025 1:40 PM

ಬೆಂಗಳೂರು: ಬಿಗ್ ಬಾಸ್' ಕನ್ನಡ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದ  ಹನುಮಂತ ಲಮಾಣಿ, (Bigg Boss Winner Hanumantha Lamani) ತಮ್ಮ ಮುಗ್ಧತೆಯಿಂದಲೇ ಜನತೆಯ ಮನ ಗೆದ್ದಿದ್ದರು. ಕರ್ನಾಟ ಕದ ಜನತೆಗೆ ಹನುಮಂತ ಲಮಾಣಿಯ ಪರಿಚಯವಾಗಿದ್ದೇ ಅವರ ಗಾಯನದ ಮೂಲಕ, 2019ರಲ್ಲಿ ಸರಿಗಮಪ ಸೀಸನ್‌ 15 ರಲ್ಲಿ ಪಾಲ್ಗೊಳ್ಳುವ ಮೂಲಕ ಹನುಮಂತು ಹೆಚ್ಚು ಪ್ರಸಿದ್ದಿ ಪಡೆದರು. ಆ ಬಳಿಕ‌ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡದ 11ನೇ ಸೀಸನ್‌ ವಿಜೇತರಾಗಿ ಹನುಮಂತ ಲಮಾಣಿ ಹೊರ ಹೊಮ್ಮಿದ್ದಾರೆ. ಇನ್ನು ಹನುಮಂತ ಲಮಾಣಿ ಮದುವೆ ಕುರಿತ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸುದ್ದಿ ಹರಿದಾಡುತ್ತಿದೆ. ಬಿಗ್ ಬಾಸ್' ಮನೆಯೊಳಗೆ ಇರುವಾಗಲೇ ತನಗೆ ಗರ್ಲ್‌ಫ್ರೆಂಡ್ ಇರುವುದಾಗಿಯೂ ಹೇಳಿ ಕೊಂಡಿರುವ ಹನುಮಂತು ಶೀಘ್ರದಲ್ಲೇ ಮದುವೆ ಆಗು ವುದಾಗಿಯೂ ಹೇಳಿಕೊಂಡಿದ್ದರು. ಇದೀಗ ಹನುಮಂತು ಮದುವೆ ಬಗ್ಗೆ ಗೋಲ್ಡ್ ಸುರೇಶ್ ಇಂಟ್ರಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ

ಬಿಗ್ ಬಾಸ್' ಶೋನಲ್ಲಿ ಅಳಿಯ ಹನುಮಂತು ಮದುವೆಯನ್ನು ತಾನೇ ಮಾಡುತ್ತೇನೆ ಎಂದು 'ಗೋಲ್ಡ್' ಸುರೇಶ್ ಹೇಳಿ ದ್ದರು. ಈಗ ಅವರು ಹೋದಲ್ಲೆಲ್ಲಾ "ಹನುಮಂತು ಮದುವೆಯನ್ನು ಯಾವಾಗ ಮಾಡಿಸುತ್ತಿರಿ ಎಂದು ಕೇಳ್ತಿದ್ದಾರಂತೆ, ಈ ಬಗ್ಗೆ ಮಾತನಾಡಿರುವ ಗೋಲ್ಡ್ ಸುರೇಶ್‌, "ನಮ್ ಹನುಮಂತು ಮದುವೆಯಾಗಲಿರುವ ಹುಡುಗಿ ಇನ್ನೂ ಓದುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ನಾನು ಈಗಾಗಲೇ ಅವರ ಜೊತೆ ಮಾತನಾಡಿದ್ದೇನೆ. ಅವರ ವಿದ್ಯಾಭ್ಯಾಸ ಮುಗಿದ್ಮೇಲೆ ಮದುವೆ ಮಾಡುವುದಕ್ಕೆ ಎಲ್ಲಾ ತಯಾರಿಯಲ್ಲಿ ಇದ್ದೇವೆ ಎಂದು'ಗೋಲ್ಡ್' ಸುರೇಶ್ ಹೇಳಿದ್ದಾರೆ.

ಇದನ್ನು ಓದಿ: Kannada New Movie: ವಿಭಿನ್ನ ಶೀರ್ಷಿಕೆ ಮೂಲಕ ಕುತೂಹಲ ಮೂಡಿಸಿದ ‘ದಿ’ ಚಿತ್ರದ ಟ್ರೈಲರ್‌ ಔಟ್‌

ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಗಾಯಕ ಹನುಮಂತ ತಾನು ಪ್ರೀತಿ ಮಾಡುವ ಹುಡುಗಿಯ ಕುರಿತಾಗಿ ಪ್ರಸ್ತಾಪಿಸಿದ್ದರು. ಬಿಗ್ ಬಾಸ್ ಶೋ ಆದ ಬಳಿಕ ನಾನು ಮದುವೆ ಮಾಡಿಕೊಳ್ತೀನಿ. ಈಗಾಗಲೇ ನಾನು ಹುಡುಗಿ ನೋಡೀನಿ ಎಂದು ದೋಸ್ತ ಧನರಾಜ್ ಆಚಾರ್ ಮುಂದೆ ಹೇಳಿ ಕೊಂಡಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಹಾಗೂ ಗೋಲ್ಡ್ ಸುರೇಶ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಸುರೇಶ್ ಅವರನ್ನು ಹನುಮಂತ‌ ಮಾವ ಎಂದು ಕರೆದರೆ, ಹನುಮಂತ ಅವರನ್ನು ಸುರೇಶ್ ಅಳಿಯ ಎನ್ನುತ್ತಿದ್ದರು. ಹನುಮಂತ ನನ್ನ ಅಳಿಯ. ನನ್ನ ಪ್ರೀತಿ ಯಾವಾಗಲೂ ಅವನ ಮೇಲೆ ಇರುತ್ತದೆ. ಅವನ ಮದುವೆಯನ್ನು ನಾನೇ ಮಾಡುತ್ತೇನೆ ಎಂದು ಗೋಲ್ಡ್ ಸುರೇಶ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇನ್ನು, ಈ ವರ್ಷವೇ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಗಳ ಮದುವೆಗಳು ಸಾಲಾಗಿ ನಡೆಯುತ್ತಿದೆ.‌ ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ತಮ್ಮ ಪ್ರಿಯಕರನ ಜೊತೆ ಮದುವೆ ಯಾಗಿದ್ದಾರೆ. ಅದಾದ ಬಳಿಕ ಮತ್ತೋರ್ವ ಸ್ಪರ್ಧಿ ರಂಜಿತ್ ತಮ್ಮ ಪ್ರೇಯಸಿ ಮಾನಸ ಅವರನ್ನು ಮದುವೆಯಾದರು.ಇದೀಗ ಹನುಮಂತು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಸೋಷಿ ಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದು ಇದಕ್ಕೆ ಗೋಲ್ಡ್ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.