ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Om Prakash Rao: ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಕೊಟ್ಟ ಸ್ಪಷ್ಟನೆ ಏನು?

Om Prakash Rao: ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ (Om Prakash Rao) ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಕಮಿಷನರ್ ಆಫೀಸ್‌ಗೆ ನಟ ಭಾಸ್ಕರ್ ಶೆಟ್ಟಿ ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಮಾಧ್ಯಮವೊಂದಕ್ಕೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಕೊಟ್ಟ ಸ್ಪಷ್ಟನೆ ಏನು?

ಓಂಪ್ರಕಾಶ್ ರಾವ್ -

Yashaswi Devadiga
Yashaswi Devadiga Aug 22, 2026 7:23 PM

ಖ್ಯಾತ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ (Om Prakash Rao) ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಕಮಿಷನರ್ ಆಫೀಸ್‌ಗೆ ನಟ ಭಾಸ್ಕರ್ ಶೆಟ್ಟಿ (Bhaskar Shetty) ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಮಾಧ್ಯಮವೊಂದಕ್ಕೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ನನಗೆ ಸಿನಿಮಾ ಮೇಲೆ ಅಪಾರ ಪ್ರೀತಿ ಇದೆ

ನಾನು ದುಡ್ಡು ತೆಗೊಂಡು ಇನ್ನು ಜಾಸ್ತಿ ಸಾಲ ಮಾಡಿ ಸಿನಿಮಾ ಮಾಡಿದಂತವನು. ಆಮೇಲೆ ಅಡ್ಜ್‌ಸ್ಮೆಂಟ್‌ ಅನ್ನೋದು ನನ್ನ ಲೈಫ್‌ ಅಲ್ಲೆ ಇಲ್ಲ. ನಾನು ಇವತ್ತು ಕೂಡ ಈ ರೀತಿ ಓಡಾಡುತ್ತಿದ್ದೀನಿ ಅಂದ್ರೆ ನನಗೆ ಸಿನಿಮಾ ಮೇಲೆ ಇರುವ ಅಪಾರ ಪ್ರೀತಿ. ದುಡ್ಡು ತೆಗೊಂಡು ಐಷಾರಾಮಿ ಜೀವನ ನಡೆಸಬಹುದಿತ್ತು. ನನಗೆ ಆದರೆ ಅದು ಮನಸ್ಸಿಗೆ ಬರಲಿಲ್ಲ. ಮತ್ತು ತುಂಬಾದಿನ ಆದಮೇಲೆ ಒಳ್ಳೆ ಸಿನಿಮಾ ಮಾಡ್ತಾ ಇದ್ದೀವಿ. ಇದು ಒಂದು ನಾಂದಿ ಆಗಬೇಕು.

ಇದನ್ನೂ ಓದಿ: Kareena Kapoor: 3ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ? ಕೊನೆಗೂ ಸ್ಪಷ್ಟನೆ ಕೊಟ್ಟ ತಂಡ

ಸುಮ್ಮನೆ ಅಪಪ್ರಚಾರ

‘ನಾನು ಯಾರಿಗೂ ಧಮ್ಕಿ ಹಾಕಿಲ್ಲ, ಸಿನಿಮಾ ಮಾಡೋದು ತಡ ಆಗಿರುವ ಕಾರಣ ಬೇಸರ ಮಾಡಿಕೊಂಡು ಈ ರೀತಿ ಮಾತನಾಡಿದ್ದಾರೆ. ಆ ಸಿನಿಮಾದಲ್ಲಿ ಭಾಸ್ಕರ್ ಶೆಟ್ಟಿ ಕೂಡ ನಟಿಸಿದ್ದಾರೆ. ಅವರನ್ನು ಹೀರೋ ಅಂತಾ ಪ್ರಮೋಟ್ ಮಾಡಿಲ್ಲ ಅನ್ನೋದಕ್ಕೆ ಈ ರೀತಿ ಆರೋಪ ಮಾಡಿದ್ದಾರೆ. ಇನ್ನೂ 5 ದಿನಗಳ ಶೂಟಿಂಗ್ ಬಾಕಿಯಿದೆ. ಅವರು ಫೈನಾನ್ಸ್ ಕೊಡ್ಸಿದ್ದಾರೆ ಹೊರತು. ಅವರಿಂದ ಅಷ್ಟು ದುಡ್ಡು ಪಡೆದಿಲ್ಲ. ಈಗ ನನ್ನ ಮೇಲೆ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ .

ಏನಿದು ಆರೋಪ?

ರಾವ್‌ ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾರೆಂದು ದೂರುದಾರರ ಆರೋಪ ಮಾಡಿದ್ದಾರೆ. ಹಣ ವಾಪಸ್ ಕೇಳಲು ಮನೆಗೆ ಹೋದಾಗ ಬೆದರಿಕೆ ಹಾಕ್ತಿದ್ದಾರೆ ಅಂತ ಫಿನಿಕ್ಸ್ ಚಿತ್ರತಂಡ ಆರೋಪ ಮಾಡ್ತಿದೆ. ದೂರುದಾರರ ಮೇಲೆಯೇ ಗಲಾಟೆ ಆರೋಪ ಹೊರಿಸಿ ಭಯಭೀತರನ್ನಾಗಿಸಿದೆ ಎಂದು ಆರೋಪಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮೂಲಕ ದೂರು ಸಲ್ಲಿಕೆ ಆಗಿದೆ.

ದೂರಿನ ಪ್ರಕಾರ, ಭಾಸ್ಕರ್ ಅವರು ಈ ಹಿಂದೆ ನಟ ದರ್ಶನ್ ಅವರ 'ಯೋಧ' ಚಿತ್ರದಲ್ಲಿ ಓಂ ಪ್ರಕಾಶ್ ರಾವ್ ಅವರೊಂದಿಗೆ ಕೆಲಸ ಮಾಡಿದ್ದರು. ಆ ಚಿತ್ರದ ಕೆಲಸದ ಮೂಲಕ ಇವರಿಬ್ಬರಿಗೂ ಪರಸ್ಪರ ಪರಿಚಯವಿತ್ತು.

ಇದನ್ನೂ ಓದಿ: Bigg Boss Kannada 13: ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?

ಓಂ ಪ್ರಕಾಶ್ ರಾವ್ ಅವರು ಮತ್ತೊಂದು ಚಿತ್ರಕ್ಕಾಗಿ ಆರ್ಥಿಕ ನೆರವು ಕೋರಿದಾಗ, ಈ ಹಿಂದಿನ ವೃತ್ತಿಪರ ಪರಿಚಯದ ಕಾರಣದಿಂದಾಗಿ ಭಾಸ್ಕರ್ ಅವರು ನಿರ್ದೇಶಕರನ್ನು ನಂಬಿದ್ದರು ಎಂದು ಆರೋಪಿಸಲಾಗಿದೆ.