ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ದೇವಿ ಮಹಾತ್ಮೆ’ ಆಡಿಯೋ ಹಕ್ಕುಗಳನ್ನು ಖರೀದಿಸಿದ ʻಹೊಂಬಾಳೆ‌ ಫಿಲ್ಮ್ಸ್ʼ; ರಂಗಾಯಣ ರಘು ನಟನೆಯ ಚಿತ್ರಕ್ಕೆ ಸಿಕ್ತು ಆನೆಬಲ!

‘ಕೆಜಿಎಫ್’, ‘ಕಾಂತಾರ’ ಮುಂತಾದ ಬಿಗ್‌ ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತನ್ನ ‘ಹೊಂಬಾಳೆ ಮ್ಯೂಸಿಕ್’ ಲೇಬಲ್ ಅಡಿಯಲ್ಲಿ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿರುವ ‘ದೇವಿ ಮಹಾತ್ಮೆ’ ಚಿತ್ರದ ಆಡಿಯೋ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.

ʻದೇವಿ ಮಹಾತ್ಮೆʼ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಲ; ಆಡಿಯೋ ರೈಟ್ಸ್‌ ಸೇಲ್‌

-

Avinash GR
Avinash GR May 26, 2026 8:12 PM

ವಿಭಿನ್ನ ಟೈಟಲ್ ಹಾಗೂ ಆಕರ್ಷಕ ಪೋಸ್ಟರ್‌ಗಳ ಮೂಲಕ ಸ್ಯಾಂಡಲ್‌ವುಡ್ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರತಂಡಕ್ಕೆ ಈಗ ದೊಡ್ಡ ಆನೆಬಲ ಬಂದಿದೆ. ಈ ಚಿತ್ರದ ಆಡಿಯೋ ಹಕ್ಕುಗಳು ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ಪಾಲಾಗಿದ್ದು, ಚಿತ್ರತಂಡದ ಸಂತಸವನ್ನು ಇಮ್ಮಡಿಗೊಳಿಸಿದೆ.

ಕನ್ನಡ ಚಿತ್ರರಂಗದಲ್ಲಿ ‘ಕೆಜಿಎಫ್’, ‘ಕಾಂತಾರ’ದಂತಹ ಜಾಗತಿಕ ಮಟ್ಟದ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತನ್ನ ‘ಹೊಂಬಾಳೆ ಮ್ಯೂಸಿಕ್’ ಲೇಬಲ್ ಅಡಿಯಲ್ಲಿ ‘ದೇವಿ ಮಹಾತ್ಮೆ’ ಚಿತ್ರದ ಹಾಡುಗಳ ಆಡಿಯೋ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ. ಈ ಮೂಲಕ ಸಿನಿಮಾಗೆ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಿದೆ.

ʻಪಾರ್ಥನ್ ಪರಪಂಚʼ ಚಿತ್ರಕ್ಕೆ ʻಅಣ್ಣಯ್ಯʼ ಸೀರಿಯಲ್‌ ನಟ ವಿಕಾಶ್‌ ಉತ್ತಯ್ಯ ಹೀರೋ; ಕೋರ್ಟ್ ರೂಮ್ ಡ್ರಾಮಾದಲ್ಲಿ ರಂಗಾಯಣ ರಘು ಜುಗಲ್ಬಂದಿ

ರಂಗಾಯಣ ರಘು ನಟನೆಯ ಸಿನಿಮಾ

ನಟ ರಂಗಾಯಣ ರಘು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್. ಔಟ್ ಅಂಡ್ ಔಟ್ ಕಾಮಿಡಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ರಂಗಾಯಣ ರಘು ಅವರ ಕಾಮಿಡಿ ಟೈಮಿಂಗ್ ಮತ್ತು ನಟನೆ ಪ್ರೇಕ್ಷಕರಿಗೆ ಭರಪೂರ ಮನೋರಂಜನೆ ನೀಡಲಿದೆಯಂತೆ.

ನಾಗರಾಜ ಸೋಮಯಾಜಿ 2ನೇ ಪ್ರಯತ್ನ

ಇತ್ತೀಚೆಗಷ್ಟೇ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಭಾರಿ ಪ್ರಶಂಸೆ ಪಡೆದಿದ್ದ ‘ಮರ್ಯಾದೆ ಪ್ರಶ್ನೆ’ ಸಿನಿಮಾವನ್ನು ನಿರ್ದೇಶಿಸಿದ್ದ ನಾಗರಾಜ ಸೋಮಯಾಜಿ ಈಗ ಎರಡನೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ದೇವಿ ಮಹಾತ್ಮೆಗೆ ಅವರೇ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಬರವಣಿಗೆಯ ವಿಭಾಗದಲ್ಲಿ ಅವರಿಗೆ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ, ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಸಾಥ್ ನೀಡಿರುವುದು ವಿಶೇಷ.

Agnyathavasi Movie: ಪ್ರೊಡಕ್ಷನ್ ಹೌಸ್ ಆರಂಭಿಸಿದ ಹೇಮಂತ್ ರಾವ್; ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಚಿತ್ರ ಏ. 11ಕ್ಕೆ ರಿಲೀಸ್‌

‘ಯುವಿಜಿ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿರಾಜನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಗಾಂಧಿರಾಜನ್ ಅವರು ಸಹ-ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಉತ್ತಮ ತಾಂತ್ರಿಕ ವರ್ಗದ ಬೆಂಬಲವಿದೆ. ಎಸ್.ಕೆ. ರಾವ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಲಿಕಿತ್ ಪ್ರಸಾದ್ ಕೆ. ಶೆಟ್ಟಿ ಅವರ ಸಂಗೀತ ನಿರ್ದೇಶನ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ‘ದೇವಿ ಮಹಾತ್ಮೆ’ ಶೀಘ್ರದಲ್ಲೇ ತನ್ನ ಮೊದಲ ಹಾಡು ಹಾಗೂ ಟ್ರೇಲರ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಹೊಂಬಾಳೆ ಸಂಸ್ಥೆಯ ಸಪೋರ್ಟ್ ಸಿಕ್ಕಿರುವುದು ಈ ಸಿನಿಮಾಗೆ ಆನೆಬಲ ಬಂದಂತಾಗಿದೆ.