ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Elvish Yadav: ಮನೆ ಮೇಲಿನ ಗುಂಡಿನ ದಾಳಿ; ಕೊನೆಗೂ ಮೌನ ಮುರಿದ ಯೂಟ್ಯೂಬರ್ ಎಲ್ವಿಶ್ ಯಾದವ್

Bigg Boss Winner house: ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಅವರ ಮನೆ ಹೊರಗೆ ಮೂವರು ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಒಂದು ಡಜನ್‌ಗೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದ್ದು, ಗುಂಡು ಹಾರಿಸುವ ಸಮಯದಲ್ಲಿ ಎಲ್ವಿಶ್ ಯಾದವ್ ಅವರ ನಿವಾಸದಲ್ಲಿ ಇರಲಿಲ್ಲ. ಘಟನೆ ಕುರಿತು ಎಲ್ವಿಶ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮನೆ ಮೇಲೆ ಗುಂಡಿನ ದಾಳಿ ಎಲ್ವಿಶ್ ಯಾದವ್ ಹೇಳಿದ್ದೇನು?

ಎಲ್ವಿಶ್ ಯಾದವ್‌

Profile Sushmitha Jain Aug 18, 2025 9:28 PM

ಗುರುಗ್ರಾಮ: ಜನಪ್ರಿಯ ಯೂಟ್ಯೂಬರ್ (YouTuber) ಮತ್ತು ಬಿಗ್ ಬಾಸ್ ಒಟಿಟಿ (Bigg Boss OTT) 2 ವಿಜೇತ ಎಲ್ವಿಶ್ ಯಾದವ್‌ (Elvish Yadav) ಅವರು ಗುರುಗ್ರಾಮದ ತಮ್ಮ ಮನೆಯ ಮೇಲೆ ಆಗಸ್ಟ್ 17ರ ಬೆಳಗ್ಗೆ ನಡೆದ ಗುಂಡಿನ ದಾಳಿಯ (‌‌Firing) ಬಗ್ಗೆ ಮೌನ ಮುರಿದಿದ್ದಾನೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅವರು, ನಾನು ಮತ್ತು ಕುಟುಂಬ ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ. “ನಿಮ್ಮ ಶುಭಾಶಯಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಾನು ಮತ್ತು ನನ್ನ ಕುಟುಂಬ ಸುರಕ್ಷಿತವಾಗಿದ್ದೇವೆ. ನಿಮ್ಮ ಕಾಳಜಿಯನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ” ಎಂದು ಅವರು ಬರೆದಿದ್ದಾನೆ.

ಘಟನೆಯ ವಿವರ
ಗುರುಗ್ರಾಮದ ಸೆಕ್ಟರ್ 57ರಲ್ಲಿರುವ ಎಲ್ವಿಶ್‌ ಮನೆಯ ಮೇಲೆ ಬೆಳಗ್ಗೆ 5:30ರಿಂದ 6:00ರ ನಡುವೆ ಮೂವರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು 24ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದ್ದಾರೆ. ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಎಲ್ವಿಶ್ ಆ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ, ಆದರೆ ಕೆಲವು ಕುಟುಂಬದ ಸದಸ್ಯರು ಒಳಗಿದ್ದರು. ಗುಂಡುಗಳು ನೆಲಮಾಳಿಗೆ ಮತ್ತು ಮೊದಲನೇ ಮಹಡಿಗೆ ತಗುಲಿದ್ದವು. ಆದರೆ ಎಲ್ವಿಶ್ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ವಾಸಿಸುತ್ತಾರೆ.

ಈ ಸುದ್ದಿಯನ್ನು ಓದಿ : Viral Video: ಚಲಿಸುತ್ತಿದ್ದ ಕಾರ್‌ ಮೇಲೆ ಕೂತು ಜೋರಾಗಿ ಸಾಂಗ್‌ ಹಾಕಿ ಮೋಜು ಮಸ್ತಿ; ಕಿಡಿಗೇಡಿಯ ವಿಡಿಯೋ ವೈರಲ್‌

ಪೊಲೀಸ್ ಕಾರ್ಯಾಚರಣೆ
ಗುರುಗ್ರಾಮ ಪೊಲೀಸ್‌ರ ಪಿಆರ್‌ಒ ಸಂದೀಪ್ ಕುಮಾರ್, “ಮೂವರು ಮಾಸ್ಕ್ ಧರಿಸಿದ ದುಷ್ಕರ್ಮಿಗಳು ಎಲ್ವಿಶ್ ಯಾದವ್‌ ಅವರ ಮನೆಯ ಹೊರಗೆ ಗುಂಡು ಹಾರಿಸಿದ್ದಾರೆ. ಘಟನೆಯ ಸಮಯದಲ್ಲಿ ಎಲ್ವಿಶ್ ಮನೆಯಲ್ಲಿ ಇರಲಿಲ್ಲ” ಎಂದು ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಕುಟುಂಬದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು.

ದಾಳಿಯ ಹೊಣೆ ಹೊತ್ತ ಗ್ಯಾಂಗ್
ಹಿಮಾಂಶು ಭಾವ್ ಗ್ಯಾಂಗ್ ಎಂಬ ಗುಂಪು ಈ ದಾಳಿಯ ಜವಾಬ್ದಾರಿಯನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದು, ಎಲ್ವಿಶ್ ಜೂಜಿನ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾನೆ ಎಂದು ಆರೋಪಿಸಿದೆ. ಆದರೆ, ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಇನ್ನೂ ಖಚಿತವಾಗಿಲ್ಲ. ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದ ಎಲ್ವಿಶ್‌ನ ತಂದೆ ರಾಮ್ ಅವತಾರ್ ಯಾದವ್, “ಯಾವುದೇ ಬೆದರಿಕೆ ಕರೆಗಳು ಬಂದಿರಲಿಲ್ಲ. ಎಲ್ವಿಶ್ ಸುರಕ್ಷಿತನಾಗಿದ್ದಾನೆ. ಆದರೆ, ಯಾರಾದರೂ ಹೊರಗಿದ್ದರೆ ಜೀವಕ್ಕೆ ಅಪಾಯವಾಗುತಿತ್ತು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ