Prashanth Neel: ಪ್ರಶಾಂತ್ ನೀಲ್ ಚಿತ್ರದಿಂದ ಹೊರ ನಡೆದ್ರಾ ಜೂ. ಎನ್‌ಟಿಆರ್? ಸಿನಿಮಾ ತಂಡ ಹೇಳಿದ್ದೇನು?
Jr NTR: ಪ್ರಶಾಂತ್ ನೀಲ್ ಮತ್ತು ಜೂ. ಎನ್‌ಟಿಆರ್ ಮೊದಲ ಬಾರಿಗೆ ಒಂದಾಗುತ್ತಿರುವ ತೆಲುಗಿನ ಪ್ಯಾನ್ ಇಂಡಿಯಾ ಚಿತ್ರದ ಶೂಟಿಂಗ್ ಆರಂಭವಾಗಿದೆ. ಇನ್ನೂ ಟೈಟಲ್ ಅಂತಿಮವಾಗದ ಈ ಚಿತ್ರ ಮುಂದಿನ ವರ್ಷ ಜೂನ್‌ನಲ್ಲಿ ತೆರೆಗೆ ಬರಲಿದೆ. ಈ ನಡುವೆ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಪ್ರಶಾಂತ್ ನೀಲ್ ಮತ್ತು ಜೂ. ಎನ್‌ಟಿಆರ್ -

ಹೈದರಾಬಾದ್, ಅ. 22: ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್‌ಟಿಆರ್ (Jr NTR) ಮೊದಲ ಬಾರಿ ಒಂದಾಗುತ್ತಿರುವ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸದ್ಯ ಭಾಷೆಯ ಗಡಿಯನ್ನೂ ಮೀರಿ ಇಡೀ ದೇಶದ ಗಮನ ಸೆಳೆಯುತ್ತಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ತಾತ್ಕಾಲಿಕವಾಗಿ ʼಡ್ರ್ಯಾಗನ್ʼ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕರ್ನಾಟಕ ಸೇರಿ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ ಕೆಲವು ದಿನಗಳಿಂದ ಈ ಬಹುನಿರೀಕ್ಷಿತ ಚಿತ್ರದ ಬಗ್ಗೆ ನೆಗೆಟಿವ್ ಮಾತು ಕೇಳಿ ಬರುತ್ತಿದ್ದು, ಪ್ರಶಾಂತ್ ನೀಲ್ ಮತ್ತು ಜೂ. ಎನ್‌ಟಿಆರ್ ಮಧ್ಯೆ ಬಿರುಕು ಬಿಟ್ಟಿದೆ ಎಂಬರ್ಥದಲ್ಲಿ ವದಂತಿ ಹರಿದಾಡುತ್ತಿದೆ. ಅಷ್ಟಕ್ಕೂ ಆಗಿದ್ದೇನು?
ಚಿತ್ರ ತಂಡ ಈ ಸುದ್ದಿಯನ್ನು ತಳ್ಳಿ ಹಾಕಿದೆ. ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಸ್ಪಷ್ಟಪಡಿಸಿದೆ. ಪ್ರಶಾಂತ್ ನೀಲ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಬಗ್ಗೆ ಜೂ. ಎನ್‌ಟಿಆರ್ ಅಸಮಾಧಾನಗೊಂಡಿದ್ದಾರೆ. ಸ್ಕ್ರಿಪ್ಟ್‌ನಲ್ಲಿ ಬದಲಾವಣೆ ಮಾಡಬೇಕೆಂದು ಸೂಚಿಸಿದ್ದಾರೆ. ಅದರೆ ಪ್ರಶಾಂತ್ ನೀಲ್ ಬದಲಾವಣೆಗೆ ಒಪ್ಪಿಕೊಂಡಿಲ್ಲ. ಹೀಗಾಗಿ ಜೂ. ಎನ್‌ಟಿಆರ್ ಚಿತ್ರದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಸದ್ಯ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುವ ವಿಚಾರ ಹೊರ ಬಿದ್ದಿದೆ.
ಜೂ. ಎನ್‌ಟಿಆರ್ ಎಕ್ಸ್ ಪೋಸ್ಟ್:
See you in cinemas on 25 June 2026…. #NTRNeel pic.twitter.com/SkMhyaF71c
— Jr NTR (@tarak9999) April 29, 2025
ಈ ಸುದ್ದಿಯನ್ನೂ ಓದಿ: Producer Ravi Shankar: ಜೂ. ಎನ್‌ಟಿಆರ್ ಹೆಸರಲ್ಲಿ ರುಕ್ಮಿಣಿ ವಸಂತ್‌ಗೆ ಅವಮಾನ ಮಾಡಿದ್ರಾ ತೆಲುಗು ನಿರ್ಮಾಪಕ ರವಿ ಶಂಕರ್? ಏನಿದು ವಿವಾದ?
ಒಟಿಟಿಪ್ಲೇ ವೆಬ್‌ಸೈಟ್ ಕೂಡ ಚಿತ್ರತಂಡದ ಮಧ್ಯೆ ತಿಣುಕಾಟ ನಡೆದಿದೆ ಎನ್ನುವ ವರದಿಯನ್ನು ನಿರಾಕರಿಸಿದೆ. ಇವರ ಮಧ್ಯೆ ಯಾವುದೇ ಗೊಂದಲ ತಲೆದೋರಿಲ್ಲ ಎಂದು ತಿಳಿಸಿದೆ. ವಾಸ್ತವವಾಗಿ ಜೂ. ಎನ್‌ಟಿಆರ್ ಚಿತ್ರದ ಭಾಗವಾಗಲು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ತಾವು ಚಿತ್ರದಿಂದ ಹೊರ ನಡೆದಿರುವ ಬಗ್ಗೆ ವದಂತಿ ಹೇಗೆ ಸೃಷ್ಟಿಯಾಯ್ತು ಎನ್ನುವ ಬಗ್ಗೆ ಅವರಿಗೇ ಅಚ್ಚರಿಯಾಗಿದೆ. ಸದ್ಯ ಶೂಟಿಂಗ್ ಮುಂದುವರಿದಿದೆ. ಸದ್ಯದಲ್ಲೇ ಹೈದರಾಬಾದ್‌ನಲ್ಲಿ ಮುಂದಿನ ಹಂತದ ಚಿತ್ರೀಕರಣ ಆರಂಭವಾಗಲಿದೆ. ಇಲ್ಲಿ ಜೂ. ಎನ್‌ಟಿಆರ್ ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ ಎಂದು ವಿವರಿಸಿದೆ. ಈಗಾಗಲೇ ಘೋಷಿಸಿದಂತೆ ಮುಂದಿನ ವರ್ಷ ಜೂನ್ 25ರಂದು ಚಿತ್ರ ತೆರೆಗೆ ಬರಲಿದ್ದು, ಸಿನಿಮಾ ತಂಡ ಸದ್ಯದಲ್ಲೇ ಟೈಟಲ್ ರಿವೀಲ್ ಮಾಡಲಿದೆ.
ಸ್ಯಾಂಡಲ್‌ವುಡ್‌ನ ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಪ್ರಶಾಂತ್ ನೀಲ್ ಜೂ. ಎನ್‌ಟಿಆರ್ ಜತೆ ಕೈಜೋಡಿದ್ದಾರೆ ಎನ್ನುವಾಗಲೇ ಇದು ಕುತೂಹಲದ ಕೇಂದ್ರಬಿಂದು ಎನಿಸಿಕೊಂಡಿತ್ತು. ಸದ್ಯ ʼಕಾಂತಾರ ಚಾಪ್ಟರ್ 1ʼ ಮೂಲಕ ಗಮನ ಸೆಳೆದ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬೃಹತ್ ಪ್ರಮಾಣದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಸೆರೆ ಹಿಡಿಯಲು ಪ್ರಶಾಂತ್ ನೀಲ್ ಯೋಜನೆ ಹಾಕಿಕೊಂಡಿದ್ದು, ಜೂ. ಎನ್‌ಟಿಆರ್ ಇಮೇಜ್‌ಗೆ ತಕ್ಕಂತೆ ಮೂಡಿ ಬರಲಿದೆ. ಜತೆಗೆ ವಿದೇಶದಲ್ಲಿಯೂ ಶೂಟಿಂಗ್ ನಡೆಯಲಿದೆ.
ಕನ್ನಡಿಗರಾದ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಛಾಯಾಗ್ರಾಹಕ ಭುವನ್ ಗೌಡ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕ, ನಾಯಕಿ, ಸಂಗೀತ ನಿರ್ದೇಶಕ ಮತ್ತು ಸಿನಿಮಾಟೋಗ್ರಾಫರ್ ಕನ್ನಡಿಗರೇ ಎನ್ನುವುದು ವಿಶೇಷ.