ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻದಳಪತಿʼ ವಿಜಯ್‌ ಸಿಎಂ ಆಗುತ್ತಿದ್ದಂತೆಯೇ ಬದಲಾಯ್ತು ʻಜನ ನಾಯಗನ್‌ʼ ಚಿತ್ರದ ನಸೀಬು; ಡಿಜಿಟಲ್‌ ಹಕ್ಕುಗಳಿಗಾಗಿ ಮುಗಿಬಿದ್ದ OTT ‌ಪ್ಲಾಟ್‌ಫಾರ್ಮ್ಸ್!

ದಳಪತಿ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಡಿಜಿಟಲ್ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಈ ಹಿಂದೆ ಅಮೆಜಾನ್ ಪ್ರೈಮ್ ಒಪ್ಪಂದ ಮುರಿದುಕೊಂಡಿದ್ದರೂ, ಈಗ ಓಟಿಟಿ ಸಂಸ್ಥೆಗಳು ಭಜರ್ರಿ ಹಣ ನೀಡಲು ಪೈಪೋಟಿ ನಡೆಸುತ್ತಿವೆ.

ಬದಲಾಯ್ತು 'ಜನ ನಾಯಗನ್' ನಸೀಬು; ವಿಜಯ್ CM ಆಗುತ್ತಿದ್ದಂತೆ ಭಾರಿ ಡಿಮ್ಯಾಂಡ್

-

Avinash GR
Avinash GR May 12, 2026 1:10 PM

ದಳಪತಿ ವಿಜಯ್‌ ಅವರು ಈಗ ತಮಿಳುನಾಡಿನ ಮುಖ್ಯಮಂತ್ರಿ ಆಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದರೆ, ಮತ್ತೊಂದು ಕಡೆ ಅವರ ಕೊನೆಯ ಸಿನಿಮಾ ʻಜನ ನಾಯಗನ್‌ʼ ರಿಲೀಸ್‌ ಆಗದೇ ಇರುವುದು ಬೇಸರ ತಂದಿದೆ. ಆದರೆ, ʻಜನ ನಾಯಗನ್‌ʼ ರಿಲೀಸ್‌ ಕುರಿತಂತೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಹಲವು ಅಡೆತಡೆಗಳನ್ನು ದಾಟಿರುವ ಜನ ನಾಯಗನ್‌ಗೆ ಒಳ್ಳೆಯ ಟೈಮ್‌ ಬಂತು ಎಂದು ಫ್ಯಾನ್ಸ್‌ ಮಾತನಾಡಿಕೊಳ್ಳುತ್ತಿದ್ದಾರೆ.

ಡಿಜಿಟಲ್‌ ಹಕ್ಕುಗಳಿಗಾಗಿ ಮುಗಿಬಿದ್ದ OTT ‌ಪ್ಲಾಟ್‌ಫಾರ್ಮ್ಸ್

ಜನ ನಾಯಗನ್‌ ಸಿನಿಮಾದ ಒಟಿಟಿ ಹಕ್ಕುಗಳನ್ನು ಅಮೇಜಾನ್‌ ಪ್ರೈಮ್‌ ವಿಡಿಯೋ ಸಂಸ್ಥೆಯು 120 ಕೋಟಿ ರೂ.ಗಳಿಗೆ ಖರೀದಿ ಮಾಡಿತ್ತು. ಯಾವಾಗ ಅಂದುಕೊಂಡ ಸಮಯಕ್ಕೆ ಸಿನಿಮಾವು ತೆರೆಕಾಣಲಿಲ್ಲವೋ, ಒಪ್ಪಂದವನ್ನು ಮುರಿದುಕೊಂಡಿತ್ತು. ಅದರ ನಡುವೆ ಸಿನಿಮಾವು ಲೀಕ್‌ ಆಗಿದ್ದು ನಿರ್ಮಾಪಕರಿಗೆ ದೊಡ್ಡ ಹೊಡೆತ ನೀಡಿತು. ಆದರೆ, ಈಗ ಜನ ನಾಯಗನ್‌ ನಸೀಬು ಬದಲಾಗಿದೆ. ವಿಜಯ್‌ ಸಿಎಂ ಆಗುತ್ತಿದ್ದಂತೆಯೇ, ಜನ ನಾಯಗನ್‌ ಒಟಿಟಿ ಹಕ್ಕುಗಳಿಗೆ ಬೇಡಿಕೆ ಬಂದಿದೆ.

Jana Nayagan postponed: 'ಜನ ನಾಯಗನ್‌' ಸಿನಿಮಾ ರಿಲೀಸ್‌ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್‌ ಬೇಸರ

ಮೂಲಗಳ ಪ್ರಕಾರ, ಚುನಾವಣೆಗೂ ಮುನ್ನ ಈ ಚಿತ್ರದ ಹಕ್ಕುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದ OTT ಸಂಸ್ಥೆಗಳು ಈಗ ಮುಗಿಬಿದ್ದು ಪೈಪೋಟಿ ನಡೆಸುತ್ತಿವೆ. ಒಟಿಟಿ ಪ್ಲಾಟ್‌ಫಾರ್ಮ್‌ವೊಂದು ಈಗ 150 ಕೋಟಿ ರೂ.ವರೆಗೂ ಹಣ ನೀಡಲು ಸಜ್ಜಾಗಿದ್ದು, ನಿರ್ಮಾಪಕರ ಮುಂದೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಒಂದು ವೇಳೆ ಈ ಡೀಲ್ ಫೈನಲ್ ಆದಲ್ಲಿ, ಕೆವಿಎನ್ ಪ್ರೊಡಕ್ಷನ್ಸ್‌ಗೆ ಅದು ದೊಡ್ಡ ಮಟ್ಟದ ಆರ್ಥಿಕ ಬಲ ತುಂಬಲಿದೆ. ಆದರೆ, ನಿರ್ಮಾಪಕರು ಈ ಆಫರ್‌ ಅನ್ನು ಒಪ್ಪಿಕೊಂಡಿದ್ದಾರಾ ಇಲ್ಲವಾ ಅನ್ನೋದು ಈವರೆಗೂ ಖಚಿತವಾಗಿಲ್ಲ.

ಬಿಡುಗಡೆ ಬಗ್ಗೆ ಕೆವಿಎನ್‌ ಹೇಳಿದ್ದೇನು?

"ನಾವು ದೇಶದ ಕಾನೂನನ್ನು ಪಾಲಿಸಬೇಕು. ಯಾವುದೇ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಾವು ಸೆನ್ಸಾರ್ ಪ್ರಮಾಣಪತ್ರವನ್ನು ಪಡೆಯಬೇಕು. 2025ರ ಡಿಸೆಂಬರ್‌ನಲ್ಲಿ ನಾವು ಸೆನ್ಸಾರ್‌ಗೆ ಅರ್ಜಿ ಸಲ್ಲಿಸಿದ್ದೆವು. ಅದರ ನಂತರ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ. ಪರಿಷ್ಕರಣಾ ಸಮಿತಿಯು ಈಗ ಚಿತ್ರವನ್ನು ನೋಡಿದೆ. ನಮಗೆ ಆದಷ್ಟು ಬೇಗ ಪ್ರಮಾಣಪತ್ರ ಸಿಗುತ್ತದೆ ಎಂದು ನಂಬಿದ್ದೇವೆ. ಈ ಚಿತ್ರವು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬರಲಿದೆ. ಜನರು ದೊಡ್ಡ ಪರದೆಯ ಮೇಲೆ ಈ ಚಿತ್ರವನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ" ಎಂದು ವೆಂಕಟ್‌ ಕೆ ನಾರಾಯಣ ಹೇಳಿದ್ದಾರೆ.

ಇನ್ನು, ಎಲ್ಲಾ ಅಂದುಕೊಂಡಂತೆ ಆದರೆ, ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲಿ "ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್‌ ಅವರು ನಟಿಸಿರುವ ಜನ ನಾಯಗನ್‌.." ಎಂದು ಇರುವ ಸಾಧ್ಯತೆ ಇದೆಯಂತೆ. ಆ ಕುರಿತು ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಶುರುವಾಗಿದೆ.