Kantara: Chapter 1: ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 6.56 ಕೋಟಿ ರೂ. ದೋಚಿದ ʼಕಾಂತಾರ: ಚಾಪ್ಟರ್ 1'; ಹೃತಿಕ್ ರೋಷನ್, ಪವನ್ ಕಲ್ಯಾಣ್ ದಾಖಲೆ ಉಡೀಸ್
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ: ಚಾಪ್ಟರ್ 1' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ರಿಲೀಸ್‌ಗಿಂತ ಮೊದಲೇ ಕೋಟಿ ಕೋಟಿ ರೂ. ಬಾಚಿಕೊಂಡಿದೆ. ಸ್ಯಾಕ್ನಿಲ್ಕ್ ವೆಬ್‌ಸೈಟ್ ವರದಿಯ ಪ್ರಕಾರ ಭಾರತದಲ್ಲಿ 6,846 ಶೋಗಳ 1.9 ಲಕ್ಷ ಟಿಕೆಟ್ ಈಗಾಗಲೇ ಬುಕ್ ಆಗಿದ್ದು, ಆ ಮೂಲಕ 6.56 ಕೋಟಿ ರೂ. ದೋಚಿಕೊಂಡಿದೆ.

ಹೈದರಾಬಾದ್‌ನಲ್ಲಿ ನಡೆದ ʼಕಾಂತಾರ: ಚಾಪ್ಟರ್ 1' ಪ್ರಮೋಷನ್ ಕಾರ್ಯಕ್ರಮಲ್ಲಿ ಚಿತ್ರತಂಡ. -

ಬೆಂಗಳೂರು: ಅಕ್ಟೋಬರ್ 2ರಂದು ವಿಶ್ವಾದ್ಯಂತ 7 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಹಲವು ಭಾಷೆಗಳಲ್ಲಿ ʼಕಾಂತಾರ: ಚಾಪ್ಟರ್ 1' (Kantara: Chapter 1) ಸಿನಿಮಾ ತೆರೆಗೆ ಬರಲಿದೆ. ಘೋಷಣೆಯಾದಾಗಿನಿಂದಲೇ ಭಾರಿ ಕುತೂಹಲ ಕೆರಳಿಸಿದ ಈ ಚಿತ್ರ 2022ರಲ್ಲಿ ರಿಲೀಸ್ ಆದ ʼಕಾಂತಾರʼದ ಪ್ರೀಕ್ವೆಲ್. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ರಿಲೀಸ್‌ಗಿಂತ ಮೊದಲೇ ಕೋಟಿ ಕೋಟಿ ರೂ. ಬಾಚಿಕೊಂಡಿದೆ. ಚಿತ್ರದ ಮೇಲೆ ಮೂಡಿರುವ ನಿರೀಕ್ಷೆ ಗಮನಿಸಿದರೆ 1 ಸಾವಿರ ಕೋಟಿ ರೂ. ಕ್ಲಬ್ ಸೇರುವ ಎಲ್ಲ ಲಕ್ಷಣಗಳಿವೆ ಎಂದು ಸಿನಿಪಂಡಿತರು ಭವಿಷ್ಯ ನುಡಿದಿದ್ದು, ಅದಕ್ಕೆ ಸೂಚನೆ ಎನ್ನುವಂತೆ ಅಡ್ವಾನ್ಸ್ ಬುಕ್ಕಿಂಗ್ ಕಲೆಕ್ಷನ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ.
ಈಗಾಗಲೇ ʼಕಾಂತಾರ: ಚಾಪ್ಟರ್ 1ʼ ಸಿನಿಮಾದ ಟ್ರೈಲರ್ ಮತ್ತು ಹಾಡು ರಿಲೀಸ್ ಆಗಿದ್ದು, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ʼಕಾಂತಾರʼದಲ್ಲಿ ತುಳುನಾಡಿನ ವಿಶಿಷ್ಟ ಭೂತಾರಾಧನೆಯನ್ನು ಪರಿಚಯಿಸಿದ್ದ ರಿಷಬ್ ಶೆಟ್ಟಿ ಈ ಬಾರಿ 4-5ನೇ ಶತಮಾನದ, ಕದಂಬರ ಕಾಲದ ಕಥೆಯನ್ನು ಹೇಳಲು ಸಜ್ಜಾಗಿದ್ದಾರೆ. ಇದರ ಝಲಕ್ ಟ್ರೈಲರ್‌ನಲ್ಲಿ ಕಂಡುಬಂದಿದ್ದು, ಚಿತ್ರ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಿನಲ್ಲಿ ಕಾದು ನಿಲ್ಲುವಂತೆ ಮಾಡಿದೆ. ಹೀಗಾಗಿ ಎಲ್ಲ ಭಾಷೆಗಳ ಅಡ್ವಾನ್ಸ್ ಬುಕ್ಕಿಂಗ್‌ಗೆ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ವಿವರ ಇಲ್ಲಿದೆ.
A symphony of faith, a celebration of tradition 🔱🔥
— Hombale Films (@hombalefilms) September 28, 2025
First Single #Brahmakalasha from #KantaraChapter1 is now streaming on all music platforms.
Kannada – https://t.co/VVqWIxVrUP
Hindi – https://t.co/ILLBjbxwlW
Telugu – https://t.co/R47Qw95ydP
Tamil – https://t.co/16uEBjW1Wt… pic.twitter.com/UE6riVz0gT
ಈ ಸುದ್ದಿಯನ್ನೂ ಓದಿ: Kantara Chapter 1: 'ಕಾಂತಾರ: ಚಾಪ್ಟರ್ 1' ರಿಲೀಸ್‌ಗೆ ದಿನಗಣನೆ; ಕೊಲ್ಲೂರು ದೇಗುಲಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ
ಇತಿಹಾಸ ಬರೆದ ಕಲೆಕ್ಷನ್
ಸ್ಯಾಕ್ನಿಲ್ಕ್ ವೆಬ್‌ಸೈಟ್ ವರದಿಯ ಪ್ರಕಾರ ಭಾರತದಲ್ಲಿ 6,846 ಶೋಗಳ 1.9 ಲಕ್ಷ ಟಿಕೆಟ್ ಈಗಾಗಲೇ ಬುಕ್ ಆಗಿದ್ದು, ಆ ಮೂಲಕ 6.56 ಕೋಟಿ ರೂ. ದೋಚಿಕೊಂಡಿದೆ. ಇನ್ನು ಅಕ್ಟೋಬರ್ 1ರಂದು ಚಿತ್ರತಂಡ ಪೇಯ್ಡ್ ಪ್ರೀಮಿಯರ್ ಆಯೋಜಿಸಿದ್ದು, ಅದರ ಮುಖಾಂತರವೂ ರಿಲೀಸ್ ಮುನ್ನ ಇನ್ನಷ್ಟು ಗಳಿಸಲಿದೆ. ವಿಶೇಷ ಎಂದರೆ ಯಾವುದೇ ನಿರೀಕ್ಷೆಗಳಿಲ್ಲದೆ ತೆರೆಗೆ ಬಂದಿದ್ದ ʼಕಾಂತಾರʼ ಮೊದಲ ದಿನ ಭಾರತದಲ್ಲಿ 2 ಕೋಟಿ ರೂ. ದೋಚಿಕೊಂಡಿತ್ತು. ಅದಾದ ಬಳಿಕ ಕೇಳಿ ಬಂದ ಚಿತ್ರದ ಮೇಲಿನ ಧನಾತ್ಮಕ ವಿಮರ್ಶೆಗಳಿಂದ ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು.
ಈಗಾಗಲೇ ʼಕಾಂತಾರ: ಚಾಪ್ಟರ್ 1ʼ ವಿವಿಧ ಭಾಷೆಗಳ, ಸೂಪರ್ ಸ್ಟಾರ್ ಚಿತ್ರಗಳ ದಾಖಲೆಯನ್ನು ಮುರಿದಿದೆ. ಪವನ್ ಕಲ್ಯಾಣ್ ಅವರ ʼಒಜಿʼ, ಹೃತಿಕ್ ರೋಷನ್-ಜೂ. ಎನ್‌ಟಿಆರ್ ಕಾಂಬಿನೇಷನ್‌ನ ʼವಾರ್ 2ʼ ಅಡ್ವಾನ್ಸ್ ಬುಕ್ಕಿಂಗ್‌ನಿಂದ ತಲಾ 5 ಕೋಟಿ ರೂ. ಗಳಿಸಿದ್ದವು. ಈ ಎಲ್ಲ ಚಿತ್ರಗಳ ದಾಖಲೆಯನ್ನು ರಿಷಬ್ ಶೆಟ್ಟಿ ಅವರ ʼಕಾಂತಾರ: ಚಾಪ್ಟರ್ 1ʼ ಮುರಿದಿದೆ.
ಈ ಪೈಕಿ ಅತೀ ಹೆಚ್ಚು ಟಿಕೆಟ್ ಕರ್ನಾಟಕದಲ್ಲೇ ಬಿಕರಿಯಾಗಿದೆ. ಹಿಂದಿ ವರ್ಷನ್ ಟಿಕೆಟ್‌ನಿಂದ 36 ಲಕ್ಷ ರೂ. ಹರಿದುಬಂದಿದೆ. ಇನ್ನು ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ 5 ಲಕ್ಷ ರೂ. ಗಳಿಸಿದೆ. ಇದುವರೆಗೆ ಕನ್ನಡದಲ್ಲೇ ಅತಿ ಹೆಚ್ಚಿನ ಗಳಿಕೆಯಾಗಿದೆ. ರಿಲೀಸ್ ಆದ ಮೇಲೆ ಯಾವೆಲ್ಲ ದಾಖಲೆ ಮುರಿಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.