ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karavali Movie OTT: ಒಟಿಟಿಗೆ 'ಕರಾವಳಿ' ; ಕಂಬಳ ಕಥಾಹಂದರದ ಮೂವಿ!

karavali Movie OTT: ​ಗುರುದತ್ತ ಗಾಣಿಗ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸಿದೆ.ಗುರುದತ್ತ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಕೆ ಫಿಲ್ಮ್ಸ್ ಹಾಗೂ ಸುರಮ್ ಮೂವೀಸ್ ಈ ಚಿತ್ರಕ್ಕೆ ಸಹ-ನಿರ್ಮಾಣದ ಸಾಥ್ ನೀಡಿವೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ಸಂಪದಾ ಹುಲಿವಾನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮಿತ್ರ, ರಮೇಶ್ ಇಂದಿರಾ, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ಒಟಿಟಿಗೆ 'ಕರಾವಳಿ' ;  ಕಂಬಳ ಕಥಾಹಂದರದ ಮೂವಿ!

ಕರಾವಳಿ ಸಿನಿಮಾ -

Yashaswi Devadiga
Yashaswi Devadiga Aug 29, 2026 8:40 AM

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾ 'ಕರಾವಳಿ' (Karavali Movie OTT) ಚಿತ್ರದ ಡಿಜಿಟಲ್ ಪ್ರೀಮಿಯರ್ ಅಧಿಕೃತವಾಗಿ ಆರಂಭವಾಗಿದೆ. ಕರಾವಳಿ ಭಾಗದ ಜನಪ್ರಿಯ ಜಾನಪದ ಕ್ರೀಡೆ 'ಕಂಬಳ'ದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರವು ಆಗಸ್ಟ್ 28 ರಿಂದ ಪ್ರಮುಖ ಒಟಿಟಿ ವೇದಿಕೆಯಾದ 'ಝೀ5' (Zee5) ನಲ್ಲಿ ಜಾಗತಿಕವಾಗಿ ಪ್ರಸಾರವಾಗುತ್ತಿದೆ.

​ಗುರುದತ್ತ ಗಾಣಿಗ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸಿದೆ.ಗುರುದತ್ತ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಕೆ ಫಿಲ್ಮ್ಸ್ ಹಾಗೂ ಸುರಮ್ ಮೂವೀಸ್ ಈ ಚಿತ್ರಕ್ಕೆ ಸಹ-ನಿರ್ಮಾಣದ ಸಾಥ್ ನೀಡಿವೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ಸಂಪದಾ ಹುಲಿವಾನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮಿತ್ರ, ರಮೇಶ್ ಇಂದಿರಾ, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: Toxic movie : ‘ಟಾಕ್ಸಿಕ್’ ನೋಡಿ ಉಪೇಂದ್ರ ಹೇಳಿದ್ದೇನು?

​ಕಂಬಳ, ಸಂಸ್ಕೃತಿ ಮತ್ತು ಬಾಂಧವ್ಯದ ಕಥಾಹಂದರ

​ಕರಾವಳಿ ಕರ್ನಾಟಕದ ಸೊಗಡು, ಆಚರಣೆ ಹಾಗೂ ಪರಂಪರೆಯನ್ನು ತೆರೆಯ ಮೇಲೆ ತಂದಿರುವ ಈ ಚಿತ್ರದಲ್ಲಿ ಕಂಬಳವು ಕೇವಲ ಕ್ರೀಡೆಯಾಗಿರದೆ, ಜನರ ಅಸ್ಮಿತೆ ಮತ್ತು ಬಾಂಧವ್ಯದ ಭಾಗವಾಗಿ ಬಿಂಬಿತವಾಗಿದೆ. ತಲೆಮಾರುಗಳ ನಡುವಿನ ಸಂಘರ್ಷ, ಮಹತ್ವಾಕಾಂಕ್ಷೆ ಮತ್ತು ಸಂಬಂಧಗಳ ತೀವ್ರತೆಯನ್ನು ಒಳಗೊಂಡಿರುವ ಚಿತ್ರಕಥೆ ಪ್ರೇಕ್ಷಕರಿಗೆ ವಿಶಿಷ್ಟ ಸಿನಿಮೀಯ ಅನುಭವವನ್ನು ನೀಡಲಿದೆ.

​ನಿರ್ದೇಶಕ ಗುರುದತ್ತ ಗಾಣಿಗ ಏನಂದ್ರು?

"ಕರಾವಳಿ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಜನರ ನೈಜ ಜೀವನವನ್ನು ಕಟ್ಟಿಕೊಡುವ ಪ್ರಯತ್ನವಿದು. ಕಂಬಳದ ಶಕ್ತಿ ಮತ್ತು ಭಾವನೆಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸಲು zee5 ಸೂಕ್ತ ವೇದಿಕೆಯಾಗಿದೆ" ಎನ್ನುತ್ತಾರೆ.

​ನಟ ರಾಜ್ ಬಿ. ಶೆಟ್ಟಿ ಹೇಳಿದ್ದೇನು?

"ಕರಾವಳಿಯ ಮಣ್ಣಿನ ಕಥೆಯನ್ನು ಒಳಗೊಂಡಿರುವ ಈ ಚಿತ್ರ ನನಗೆ ಅತ್ಯಂತ ಆಪ್ತ. ಕಂಬಳದ ಶಕ್ತಿ ಮತ್ತು ಸಾಂಸ್ಕೃತಿಕ ತೀವ್ರತೆಯನ್ನು ಪರದೆಯ ಮೇಲೆ ತರುವುದು ಉತ್ತಮ ಅನುಭವವಾಗಿತ್ತು" ಎಂದು ಹೇಳಿದ್ದಾರೆ.

​zee5 ವೇದಿಕೆಯ ಬದ್ಧತೆ

​ಕರ್ನಾಟಕದ ಪ್ರಾದೇಶಿಕ ಮತ್ತು ಸಂಸ್ಕೃತಿ ಆಧಾರಿತ ಕಥೆಗಳಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ 'ಕರಾವಳಿ' ಪ್ರಸಾರ ಮಹತ್ವದ ಹೆಜ್ಜೆಯಾಗಿದೆ ಎಂದು Zee5 ತಿಳಿಸಿದೆ.

ಇದನ್ನೂ ಓದಿ: Shiva Rajkumar: ಶಿವಣ್ಣ ನಟನೆಯ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್!

190ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿರುವ zee5, ಕನ್ನಡ ಸೇರಿದಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಮನರಂಜನೆ ನೀಡುತ್ತಿದ್ದು, ಇತ್ತೀಚೆಗೆ ಫಿಫಾ ವಿಶ್ವಕಪ್‌ನಂತಹ ಜಾಗತಿಕ ಕ್ರೀಡಾಕೂಟಗಳ ಪ್ರಸಾರ ಹಕ್ಕನ್ನೂ ಹೊಂದಿದೆ.