ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karna Kannada Serial: ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಒಂದಾಯ್ತು ಸ್ತ್ರೀ ಶಕ್ತಿ!

Karna Kannada Serial: ಕರ್ಣ ಎಷ್ಟೇ ಹೇಳಿದರೂ ಕೂಡ, ಯಾರೂ ಅವನ ಮಾತು ಕೇಳುತ್ತಿಲ್ಲ. ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. ಇನ್ನು ಕರ್ಣ ಈ ರೀತಿ ಮಾಡಿರೋದಿಕ್ಕೆ ಸಾಧ್ಯವೇ ಇಲ್ಲ ಎಂದು ನಿತ್ಯಾ, ನಿಧಿ ಎಷ್ಟೇ ಗೋಗರೆದರೂ ಪ್ರಯೋಜನವಾಗುತ್ತಿಲ್ಲ. ಇದೀಗ ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಸ್ತ್ರೀ ಶಕ್ತಿ ಒಂದಾಗಿದೆ. ಈಗ ಹೊಸ ಪ್ರೋಮೋ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.

ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಒಂದಾಯ್ತು ಸ್ತ್ರೀ ಶಕ್ತಿ!

ಕರ್ಣ ಧಾರಾವಾಹಿ -

Yashaswi Devadiga
Yashaswi Devadiga Feb 21, 2026 9:56 AM

ಕರ್ಣ (Karna Kannada Serial) ಎಷ್ಟೇ ಹೇಳಿದರೂ ಕೂಡ, ಯಾರೂ ಅವನ ಮಾತು ಕೇಳುತ್ತಿಲ್ಲ. ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. ಇನ್ನು ಕರ್ಣ ಈ ರೀತಿ ಮಾಡಿರೋದಿಕ್ಕೆ ಸಾಧ್ಯವೇ ಇಲ್ಲ ಎಂದು ನಿತ್ಯಾ, ನಿಧಿ (Nithya Nidhi) ಎಷ್ಟೇ ಗೋಗರೆದರೂ ಪ್ರಯೋಜನವಾಗುತ್ತಿಲ್ಲ. ಇದೀಗ ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಸ್ತ್ರೀ ಶಕ್ತಿ ಒಂದಾಗಿದೆ. ಈಗ ಹೊಸ ಪ್ರೋಮೋ (Promo) ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.

ಅಪ್ಪನ ಮೋಸಾಟ

ಕರ್ಣ ಈಗ ಮೊದಲಿನಂತಿಲ್ಲ, ಅಪ್ಪನ ಮೋಸಾಟ ಅವನ ಗಮನಕ್ಕೆ ಬಂದಿದೆ. ಸಖತ್‌ ಚಮಕ್‌ ಕೊಡ್ತಾ ಇದ್ದಾನೆ ಕರ್ಣ. ಕರ್ಣ ತನ್ನ ಚಾಣಾಕ್ಷತನದಿಂದ ಸಂಜಯ್ ಮಾಡಿದ್ದ ಪ್ರತಿಯೊಂದು ಮೋಸವನ್ನೂ ಸಾಕ್ಷಿ ಸಮೇತ ಹಿಡಿದಿದ್ದಾನೆ. ಆದರೀಗ ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದಾರೆ. Expiry ಅಗಿರುವ ಮೆಡಿಸನ್‌ ಕೊಟ್ಟು ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ಈ ಆಪಾದನೆ ಕರ್ಣನ ಮೇಲೆ ಬಂದಿದೆ.

ಇದನ್ನೂ ಓದಿ: Toxic Movie Teaser: `ಟಾಕ್ಸಿಕ್‌' ಟೀಸರ್‌ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್‌ ಫುಲ್‌ ಟೆನ್ಷನ್!

ಕರ್ಣನ ಪರವಾಗಿ ದನಿಯೆತ್ತಿದ ಸ್ತ್ರೀ ಸಂಕುಲ!

ನಿತ್ಯಾ ಹಾಗೂ ನಿಧಿ ಸೇರಿಕೊಂಡು ಕರ್ಣನನ್ನು ನಿರಪರಾಧಿ ಎಂದು ಸಾಬೀತುಪಡಿಸಲು ಪಣ ತೊಟ್ಟಿದ್ದಾರೆ. ಕರ್ಣನಿಗೆ ಹೀಗಾಯ್ತು ಎಂದು ಅಜ್ಜಿ ಆಸ್ಪತ್ರೆ ಸೇರಿದ್ದಾಳೆ. ಈಗ ಅಮೃತಧಾರೆ ಧಾರಾವಾಹಿ ಮಲ್ಲಿ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಶ್ರಾವಣಿ, ಅಣ್ಣಯ್ಯ ಧಾರಾವಾಹಿ ರಾಣಿ, ಬ್ರಹ್ಮಗಂಟು ಧಾರಾವಾಹಿ ದೀಪಾ ಕೂಡ ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಅಲ್ಲಿ ಎಲ್ಲರೂ ಸೇರಿಕೊಂಡು ಹೋರಾಟ ಮಾಡಲು ಮುಂದಾಗಿದ್ದಾರೆ.



ಕರ್ಣ ಒಬ್ಬ ಅತ್ಯುತ್ತಮ ವೈದ್ಯ ಅನ್ನೋದ್ರಲ್ಲಿ ಅನುಮಾನವಿಲ್ಲ. ಆದರೆ, ಇದು ಕರ್ಣನ ತಪ್ಪಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಇದರ ಹಿಂದೆ ರಮೇಶ್ ಎಂಬುವವರ ದೊಡ್ಡ ಸಂಚು ಅಡಗಿದೆ.ತಮ್ಮವರನ್ನು ಕಳೆದುಕೊಂಡ ಜನರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಎಲ್ಲರೂ ಆಕ್ರೋಶದಿಂದ ಕೂಗಾಡುತ್ತಿದ್ದಾರೆ.

ಇದನ್ನೂ ಓದಿ: Vijay Deverakonda: ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡ ರಶ್ಮಿಕಾ-ವಿಜಯ್; ಕಾರಣ ಇದು

ಇತ್ತ ಕರ್ಣನ ಕುಟುಂಬ ಸಮಾಜದ ಮುಂದೆ ತಲೆ ತಗ್ಗಿಸುವಂತಾಗಿದೆ. ಈಗ ಕರ್ಣನಿಗೆ ನ್ಯಾಯ ಸಿಗುತ್ತಾ ಅನ್ನೋದೇ ದೊಡ್ಡ ಪ್ರಶ್ನೆ. ರಮೇಶ್ ಮಾಡಿದ ಕುತಂತ್ರವನ್ನು ಕರ್ಣ ಹೇಗೆ ಬಯಲಿಗೆಳೆಯುತ್ತಾನೆ? ತನ್ನ ಮೇಲಿರುವ ಕಳಂಕವನ್ನು ಆತ ಹೇಗೆ ತೊಡೆದು ಹಾಕುತ್ತಾನೆ? ಸ್ತ್ರೀ ಶಕ್ತಿ ಯಾವ ರೀತಿ ಸಹಾಯ ಮಾಡ್ತಾರೆ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.