ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ-ಸಿದ್ಧಾರ್ಥ್: ಪುತ್ರಿ ಸರಾಯಾ ಜತೆ ಗುಡ್‌ ನ್ಯೂಸ್‌ ಹಂಚಿಕೊಂಡ ಜೋಡಿ

Sid- Kiara announce second pregnancy: ಬಾಲಿವುಡ್‌ನ ಜನಪ್ರಿಯ ಹಾಗೂ ಕ್ಯೂಟ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಅಭಿಮಾನಿಗಳಿಗೆ ಮತ್ತೊಮ್ಮೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಈ ಜೋಡಿ ಇಂದು ಅಧಿಕೃತವಾಗಿ ಘೋಷಣೆ ಮಾಡಿದೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ-ಸಿದ್ಧಾರ್ಥ್

ಎರಡನೇ ಬಾರಿಗೆ ಪೋಷಕರಾಗುತ್ತಿರುವ ಸುದ್ದಿ ಹಂಚಿಕೊಂಡ ಸಿದ್‌- ಕಿಯಾರಾ -

Vishakha Bhat Heggar
Vishakha Bhat Heggar Oct 7, 2026 12:26 PM

ಮುಂಬೈ: ಬಾಲಿವುಡ್‌ನ ಜನಪ್ರಿಯ ಹಾಗೂ ಕ್ಯೂಟ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Kiara-Sidharth) ತಮ್ಮ ಅಭಿಮಾನಿಗಳಿಗೆ ಮತ್ತೊಮ್ಮೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಈ ಜೋಡಿ ಇಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಮೊದಲ ಮಗಳು ಸರಾಯಾ ಮಲ್ಹೋತ್ರಾ ಜನಿಸಿದ ಕೆಲವೇ ತಿಂಗಳುಗಳ ಅಂತರದಲ್ಲಿ ದಂಪತಿ ಇದೀಗ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಈ ಶುಭ ಸುದ್ದಿಯನ್ನುಅಧಿಕೃತವಾಗಿ ಹಂಚಿಕೊಂಡಿದ್ದು, ಸಿನಿರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಗಳು ಸರಾಯಾ ಮಲ್ಹೋತ್ರಾಳ ಕೈಯಲ್ಲಿ ಸಾಕ್ಸ್‌ ಹಿಡಿದುಕೊಂಡಿರುವ ಫೋಟೋವನ್ನು ಪೋಸ್ಟ್‌ ಮಾಡಿದ ಸಿದ್‌- ಕಿಯಾರಾ, ಮಗಳು ಸರಾಯಾ ಮಲ್ಹೋತ್ರಾಳ ಪುಟ್ಟ ಕೈಯಲ್ಲಿ ಬಿಳಿ ಬಣ್ಣದ ಸಣ್ಣ ಸಾಕ್ಸ್ ಹಿಡಿದಿರುವ ಫೋಟೋ ಹಂಚಿಕೊಂಡು ಎಲ್ಲಕ್ಕಿಂತ ಶ್ರೇಷ್ಠವಾದ ಕೊಡುಗೆಯೊಂದಿಗೆ ಮತ್ತೊಮ್ಮೆ ನಮಗೆ ಆಶೀರ್ವಾದ ಸಿಕ್ಕಿದೆ. ನಮ್ಮ ಹೃದಯಗಳು ಪ್ರೀತಿ ಹಾಗೂ ಕೃತಜ್ಞತೆಯಿಂದ ತುಂಬಿವೆ" ಎಂದು ಬರೆದುಕೊಂಡಿದ್ದಾರೆ.

ಸಿನಿ ತಾರೆಯರಿಂದ ಶುಭ ಹಾರೈಕೆ

ಈ ಪೋಸ್ಟ್ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಹಿ ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಹಾಗೂ ಸಿದ್ಧಾರ್ಥ್ ಅವರ ಗಾಡ್‌ಫಾದರ್ ಕರಣ್ ಜೋಹರ್, ʼಲವ್ ಲವ್ ಯೂʼ ಎಂದು ರೆಡ್ ಹಾರ್ಟ್ ಇಮೋಜಿಗಳೊಂದಿಗೆ ಕಮೆಂಟ್ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಕರಣ್ ಜೋಹರ್ ಅವರಷ್ಟೇ ಅಲ್ಲದೆ, ಪ್ರಸಿದ್ಧ ಡಿಸೈನರ್ ಮನೀಶ್ ಮಲ್ಹೋತ್ರಾ, ನಟಿಯರಾದ ಆಥಿಯಾ ಶೆಟ್ಟಿ, ಭೂಮಿ ಪೆಡ್ನೇಕರ್ ಹಾಗೂ ನಿರ್ಮಾಪಕಿ ರಿಯಾ ಕಪೂರ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ದಂಪತಿಗೆ ಶುಭಾಶಯ ತಿಳಿಸಿದ್ದಾರೆ.

ʻಟಾಕ್ಸಿಕ್ʼ ಶೂಟಿಂಗ್‌ ಟೈಮ್‌ನಲ್ಲಿ ಗರ್ಭಿಣಿ ಕಿಯಾರಾ ಅಡ್ವಾಣಿಗೆ ಬಾಡಿಗಾರ್ಡ್ ಆಗಿದ್ದ ಯಶ್: ಬಾಲಿವುಡ್‌ ನಟಿಯ ಡೆಡಿಕೇಷನ್‌ಗೆ ʻರಾಕಿಂಗ್ ಸ್ಟಾರ್ʼ ಫಿದಾ!

ಶೇರ್‌ಷಾ ಚಿತ್ರದಲ್ಲಿ ಆನ್‌ಸ್ಕ್ರೀನ್‌ನಲ್ಲಿ ಬೆಸ್ಟ್‌ ಕಪಲ್‌ ಆಗಿದ್ದ ಮಿಂಚಿದ್ದ ಈ ಜೋಡಿ 2023ರ ಫೆಬ್ರವರಿಯಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ಧೂರಿ ವಿವಾಹವಾಗಿದ್ದರು. 2025ರ ಜುಲೈ 15ರಂದು ಈ ದಂಪತಿಗೆ 'ಸರಾಯಾ ಮಲ್ಹೋತ್ರಾ' ಎಂಬ ಹೆಣ್ಣು ಮಗು ಜನಿಸಿತ್ತು. ಮೊದಲ ಮಗು ಹುಟ್ಟಿದ ಕೇವಲ 15 ತಿಂಗಳು ಕಳೆಯುವುದರೊಳಗಾಗಿ ಇದೀಗ ದಂಪತಿ ಎರಡನೇ ಮಗುವನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನವನ್ನು ಸಾರ್ವಜನಿಕವಾಗಿ ದೂರವಿಡುವ ಕಿಯಾರಾ ಮತ್ತು ಸಿದ್ಧಾರ್ಥ್, ಪ್ರಮುಖ ಕ್ಷಣಗಳನ್ನು ಮಾತ್ರ ನೇರವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇದೀಗ ಮತ್ತೊಮ್ಮೆ ತಂದೆ-ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ಈ ಜೋಡಿಗೆ ಅಭಿಮಾನಿಗಳು ಮತ್ತು ಸಿನಿತಾರೆಯರು ಶುಭ ಕೋರುತ್ತಿದ್ದಾರೆ.