ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiccha Sudeep: 4 ದಿನಗಳಲ್ಲಿ ʻಮಾರ್ಕ್‌ʼ ಬಾಚಿಕೊಂಡ ಹಣವೆಷ್ಟು? ಚಿತ್ರತಂಡದಿಂದಲೇ ಬಂತು ನೋಡಿ ಅಧಿಕೃತ ಮಾಹಿತಿ

Mark Movie Day 4 Collection: ʻಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನ 'ಮಾರ್ಕ್' ಸಿನಿಮಾ 4 ದಿನಗಳಲ್ಲಿ ಎಷ್ಟು ಗಳಿಕೆ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕ್ರಿಸ್‌ಮಸ್ ರಜೆಯ ಲಾಭ ಪಡೆದ ಈ ಚಿತ್ರ, ಕರ್ನಾಟಕದಾದ್ಯಂತ ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಮೊದಲ ವೀಕೆಂಡ್‌ನಲ್ಲಿ 'ಮಾರ್ಕ್' ಗಳಿಸಿದ್ದೆಷ್ಟು? ಇಲ್ಲಿದೆ ರಿಪೋರ್ಟ್‌

-

Avinash GR
Avinash GR Dec 29, 2025 3:12 PM

ಕಿಚ್ಚ ಸುದೀಪ್‌ ಅಭಿನಯದ ʻಮಾರ್ಕ್‌ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡುತ್ತಿದೆ. ಈ ಚಿತ್ರವು ಡಿಸೆಂಬರ್‌ 25ರ ಕ್ರಿಸ್‌ಮಸ್ ಪ್ರಯುಕ್ತ ತೆರೆಕಂಡಿತ್ತು. ಇದೀಗ ಈ ಸಿನಿಮಾದ ಮೊದಲ ವಾರಾಂತ್ಯದ ಗಳಿಕೆ ಎಷ್ಟು ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಚಿತ್ರತಂಡದ ಮೂಲಗಳೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಮಾರ್ಕ್‌ ಸಿನಿಮಾವು ಸುಮಾರು 35 ಕೋಟಿ ರೂ.ಗಳನ್ನು ಮೊದಲ ವಾರಾಂತ್ಯದಲ್ಲಿ ಬಾಚಿಕೊಂಡಿದೆಯಂತೆ.

ಚಿತ್ರತಂಡದ ಅಭಿಪ್ರಾಯ ಏನು?

ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ದಾವಣಗೆರೆ ಮತ್ತು ಚಾಮರಾಜನಗರ ಮುಂತಾದ ಕಡೆಗಳಲ್ಲಿ ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳು ನಾಲ್ಕನೇ ದಿನವೂ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿವೆ ಎಂದು ವಿತರಕರು ಹೇಳಿಕೊಂಡಿದ್ದಾರೆ. ಕಿಚ್ಚನ ಸ್ವಾಗ್, ಸ್ಟೈಲು, ಆಟಿಟ್ಯೂಡ್ ಕಂಡು ಚಿತ್ರರಸಿಕರು ಫಿದಾ ಆಗಿದ್ದಾರೆ. ಮ್ಯಾಕ್ಸ್ ಬಳಿಕ ಮತ್ತೊಮ್ಮೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಜೋಡಿ ಬೆಳ್ಳಿಪರದೆ ಮೇಲೆ‌ ಮೋಡಿ‌ ಮಾಡಿದೆ ಎಂಬುದು ಅವರ ಅಭಿಪ್ರಾಯ.

Mark Review: ಮ್ಯಾಕ್ಸಿಮಮ್‌ ಮಾಸ್‌ನೊಂದಿಗೆ ʻಮಾರ್ಕ್‌ʼ ಮಾರಾಮಾರಿ; ಸುದೀಪ್‌ ಅಭಿಮಾನಿಗಳಿಗೆ ಇದು ಹಬ್ಬ ಕಣ್ರೀ!

35 ಕೋಟಿ ರೂ. ಗಳಿಕೆ

ಕೆಲ ಟ್ರೇಡ್‌ ಅನಾಲಿಸ್ಟ್‌ ಪ್ರಕಾರ, ಮಾರ್ಕ್‌ ಸಿನಿಮಾವು 21 ಕೋಟಿ ರೂ. ಗಳಿಗೂ ಅಧಿಕ ಕಮಾಯಿ ಮಾಡಿದೆ ಎಂಬ ಮಾಹಿತಿ ಸಿಕ್ಕರೆ, ಚಿತ್ರತಂಡದ ಕಡೆಯಿಂದಲೇ ಈ ಸಂಪೂರ್ಣ ಮಾಹಿತಿ ಸಿಕ್ಕಂತಾಗಿದೆ. ನಾಲ್ಕು ದಿನಗಳಿಗೆ 35 ಕೋಟಿ ರೂ. ಗಳಿಕೆ ಆಗಿರುವುದು ನಿರ್ಮಾಪಕರಿಗೆ ಖುಷಿ ನೀಡಿದೆ ಎನ್ನಲಾಗಿದೆ.

Mark: ʻಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ, ನಾವು ಯುದ್ಧಕ್ಕೆ ಸಿದ್ಧʼ; ಹುಬ್ಬಳ್ಳಿಯಲ್ಲಿ ಗುಡುಗಿದ ʻಕಿಚ್ಚʼ ಸುದೀಪ್‌!

ಈಚೆಗೆ ಚಿತ್ರದ ಕಲೆಕ್ಷನ್‌ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಕಿಚ್ಚ ಸುದೀಪ್‌, "ಮಾರ್ಕ್ ಸಿನಿಮಾ ಸೇಫ್ ಆಗಿದೆ. ಎಲ್ಲರ ಮುಖದಲ್ಲೂ ಮಂದಹಾಸ ಕಾಣ್ತಿದೆ. ರಿಲೀಸ್ ಮುಂಚೇನೆ ಎಲ್ಲರೂ ಸೇಫ್ ಆಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಮಾರ್ಕ್ ಸಿನಿಮಾ ಪೈರಸಿ ಆಗಿದೆ. ಇಲ್ಲಿವರೆಗೂ ಸುಮಾರು 9 ಸಾವಿರ ಲಿಂಕ್‌ಗಳನ್ನ ಡಿಲೀಟ್ ಮಾಡಿಸಿದ್ದೇವೆ. ಕಾನೂನು ರೀತಿ ಏನು ಕ್ರಮ ತೆಗೆದುಕೊಳ್ಳಬೇಕೋ, ಅದನ್ನು ಖಂಡಿತ ತೆಗೆದುಕೊಳ್ಳುತ್ತೇವೆ. ಪೈರಸಿ ವಿರುದ್ಧ ಹೋರಾಟ ಇದ್ದೇ ಇರುತ್ತದೆ" ಎಂದು ಹೇಳಿದ್ದರು.

ಈ ಸಿನಿಮಾವನ್ನು ವಿಜಯ್‌ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದು, ಮ್ಯಾಕ್ಸ್ ಬಳಿಕ ಮತ್ತೊಮ್ಮೆ ಅವರು ಸುದೀಪ್‌ಗೆ ಸಾಥ್‌ ನೀಡಿದ್ದಾರೆ. ಸತ್ಯ ಜ್ಯೋತಿ ಫಿಲ್ಮ್ಸ್‌ ಮತ್ತು ಕ್ರಿಚ್ಚ ಕ್ರಿಯೇಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ರೋಶಿನಿ ಪ್ರಕಾಶ್‌, ಅರ್ಚನಾ ಕೊಟ್ಟಿಗೆ, ನಿಶ್ವಿಕಾ ನಾಯ್ಡು, ನವೀನ್‌ ಚಂದ್ರ, ಯೋಗಿ ಬಾಬು, ಗುರು ಸೋಮಸುಂದರಂ, ಗೋಪಾಲ್‌ ದೇಶಪಾಂಡೆ, ಮಹಾಂತೇಶ್‌ ಹಿರೇಮಠ, ಅಶ್ವಿನ್‌ ಹಾಸನ್‌, ಶೈನ್‌ ಟಾಮ್‌ ಚಾಕೋ ಮುಂತಾದವರು ನಟಿಸಿದ್ದಾರೆ.