ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kwatle Kitchen: ನೂರಕ್ಕೆ ನೂರು ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್' ಇಂದಿನಿಂದ ಆರಂಭ

ಕಲರ್ಸ್ ಕನ್ನಡ ವಾಹಿನಿಯು ಇದೀಗ ʼಕ್ವಾಟ್ಲೆ ಕಿಚನ್ʼ ಎಂಬ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ಅನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ʼಕ್ವಾಟ್ಲೆ ಕಿಚನ್ʼ ಎಂಬ ವಿನೂತನ ರಿಯಾಲಿಟಿ ಶೋ ಕಾರ್ಯಕ್ರಮ ಜೂ. 14ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈ ಕುರಿತ ವಿವರ ಇಲ್ಲಿದೆ.

ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್' ಇಂದಿನಿಂದ ಆರಂಭ

Profile Siddalinga Swamy Jun 14, 2025 4:26 PM

ಬೆಂಗಳೂರು: ‘ನನ್ನಮ್ಮ ಸೂಪರ್‌ ಸ್ಟಾರ್‌ʼ, ʼರಾಜ ರಾಣಿʼ, ʼಗಿಚ್ಚಿ ಗಿಲಿಗಿಲಿʼ ಗಳಂಥ ಟಾಪ್ ರೇಟಿಂಗ್ ಶೋಗಳನ್ನು ಕೊಟ್ಟಿರುವ ಕಲರ್ಸ್ ಕನ್ನಡ ವಾಹಿನಿಯು ಇದೀಗ ʼಕ್ವಾಟ್ಲೆ ಕಿಚನ್ʼ ಎಂಬ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ಅನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ʼಕ್ವಾಟ್ಲೆ ಕಿಚನ್ʼ ಎಂಬ ವಿನೂತನ ರಿಯಾಲಿಟಿ ಶೋ ಕಾರ್ಯಕ್ರಮ ಜೂ. 14ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಅಡುಗೆಯ ಜತೆ ನಗುವಿನ ಔತಣವನ್ನೂ ಉಣಬಡಿಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಜೋಡಿಗಳ ಜತೆಯಾಟವಿರುತ್ತದೆ. ಈ ಜೋಡಿಯಲ್ಲಿ ಒಬ್ಬರಿಗೆ ಅಡುಗೆ ಬರುತ್ತೆ.

ಇನ್ನೊಬ್ಬರಿಗೆ ಪಾಕಶಾಸ್ತ್ರದ ಅ ಆ ಇ ಈ ಕೂಡಾ ತಿಳಿದಿಲ್ಲ. ಐವರು ನಳಪಾಕ ಪ್ರವೀಣರಿಗೆ ಸಹಾಯಕರಾಗಿ ಮತ್ತೈದು ನಗೆಪಾಕ ಪ್ರವೀಣರು ಇರುತ್ತಾರೆ. ʼಕುಕ್ʼ ಮತ್ತು ʼಕ್ವಾಟ್ಲೆʼ ಗಳು' ಸೇರಿ ಅಡುಗೆ ಮಾಡುವಾಗ ಹುಟ್ಟುವ ತಮಾಷೆ, ತರ್ಲೆಗಳೇ ಈ ಶೋನ ಬ್ಯೂಟಿ. ಚಕಚಕ ಅಡುಗೆ ಮಾಡಿ ಮುಗಿಸಲು ಹೊರಟ ಪಾಕ ಪ್ರವೀಣರಿಗೆ ಅಡ್ಡಗಾಲಾಗಿ ನಿಲ್ಲುವುದೇ ಈ ʼಕ್ವಾಟ್ಲೆʼ ಸಹಾಯಕರು. ಟಾರ್ಚರ್‌ ಕೊಡಲಿಕ್ಕೆಂದೇ ಬಂದಿರುವ ಕ್ವಾಟ್ಲೆಗಳು ಸ್ವತಃ ಜೋಕರ್‌ಗಳಾಗುವ ಪರಿಹಾಸ್ಯವನ್ನು ನೋಡಿಯೇ ಆನಂದಿಸಬೇಕು ಎಂದು ತಿಳಿಸಿದೆ.

Kwatle Kitchen 1

ಈ ಶೋನ ವಿಶೇಷತೆ ಏನೆಂದರೆ, ಇಲ್ಲಿ ಕುಕ್‌ಗಳು ಎಲಿಮಿನೇಟ್ ಆಗುತ್ತಾರೆ. ಕ್ವಾಟ್ಲೆಗಳು ಮಾತ್ರ ಎಲಿಮಿನೇಟ್ ಆಗೋದಿಲ್ಲ! ಪ್ರತಿ ವಾರವೂ ಕುಕ್‌-ಕ್ವಾಟ್ಲೆಗಳ ಜೋಡಿ ಬದಲಾಗುತ್ತಿರುತ್ತದೆ. ಒಳ್ಳೆ ಸಹಾಯಕ ಬರಲಿ ಎಂದು ಕಾಯುತ್ತಿರುವ ಕುಕ್‌ಗಳಿಗೆ, ಬೆಳ್ಳುಳ್ಳಿ ಈರುಳ್ಳಿಯ ನಡುವೆ ವ್ಯತ್ಯಾಸವೇ ಗೊತ್ತಿರದ ʼಕ್ವಾಟ್ಲೆʼ ಸಹಾಯಕರು ಸಿಕ್ಕು, ಉಂಟಾಗುವ ಪಜೀತಿ ನೋಡುಗರಿಗಂತೂ ಭರಫೂರ ಮನರಂಜನೆ ನೀಡುತ್ತದೆ.

ಕುಕ್‌ಗಳಾಗಿ - ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ರಾಘವೇಂದ್ರ, ಕೆಂಪಮ್ಮ, ಪ್ರೇರಣ ಕಂಬಮ್, ಕಾವ್ಯ ಗೌಡ, ಶಿಲ್ಪ ಕಾಮತ್, ಶರ್ಮಿತ ಗೌಡ, ಸೋನಿಯಾ ಪೊನ್ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಕ್ವಾಟ್ಲೆ ಕೊಡುವುದಕ್ಕೆಂದೇ ಲ್ಯಾಗ್ ಮಂಜು, ಧನರಾಜ್ ಆಚಾರ್, ತುಕಾಲಿ ಸಂತೋಷ್, ನಿವೇದಿತಾ ಗೌಡ, ಪ್ರಶಾಂತ್, ಸೂರಜ್, ಗಿಲ್ಲಿ ನಟ, ಸೋನಿ ಮುಲೆವ, ವಾಣಿ ಗೌಡ, ದೀಶಾ ಉಮೇಶ್ ಕಾರ್ಯಕ್ರಮದಲ್ಲಿ ಇರುತ್ತಾರೆ.

ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಶ್ರುತಿ ಮತ್ತು ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಟೆಲಿವಿಷನ್‌ನ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಪ್ರಸಿದ್ಧ ಚೆಫ್ ಕೌಶಿಕ್ ಇರಲಿದ್ದಾರೆ.

ಈ ಸುದ್ದಿಯನ್ನೂ ಓದಿ | Monsoon Lipsticks 2025: ಮಾನ್ಸೂನ್‌ಗೆ ಕಾಲಿಟ್ಟ ವೈವಿಧ್ಯಮಯ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

ಕಿಚನ್‌ ಸ್ಟಾರ್‌ಗಳು ಮತ್ತು ಕ್ಯಾಟ್ಲೆಗಳ ಮೋಜು ಮಸ್ತಿಯ ಈ ಜಗಳಬಂದಿ ಕಾರ್ಯಕ್ರಮವನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್‌ ನಡೆಸಿಕೊಡಲಿದ್ದಾರೆ. ಅಡುಗೆಯ ಔತಣ ಮತ್ತು ನಗುವಿನ ರಸದೌತಣಗಳನ್ನು ಒಟ್ಟೊಟ್ಟಿಗೇ ಬಡಿಸುವ 'ಕ್ವಾಟ್ಲೆ ಕಿಚನ್', ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವುದಂತೂ ಗ್ಯಾರಂಟಿ. ‌ ಪ್ರತಿ ಶನಿವಾರ, ಭಾನುವಾರ ಕಲರ್ಸ್ ಕನ್ನಡದಲ್ಲಿ ಸಂಜೆ 9 ಗಂಟೆಗೆ ಪ್ರಸಾರ ಆಗಲಿದೆ. ಒಂದೂವರೆ ಗಂಟೆಯ ʼಕ್ವಾಟ್ಲೆ ಕಿಚನ್' ನ ಮೊದಲ ಎಪಿಸೋಡ್‌ಗಳು ಜೂ. 14, 15 (ಶನಿವಾರ ಮತ್ತು ಭಾನುವಾರ) ಅಂದರೆ ಇಂದಿನಿಂದ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ ಎಂದು ತಿಳಿಸಿದೆ.