ʼʼಟಾಕ್ಸಿಕ್ʼ ಜೆನ್ ಝೀ ವೀಕ್ಷಕಕರಿಗೆ ಇಷ್ಟವಾಗಲಿದೆʼʼ: ಅಶ್ಲೀಲತೆಯ ಆರೋಪಕ್ಕೆ ಮುಟ್ಟಿ ನೋಡುವಂತೆ ತಿರುಗೇಟು ಕೊಟ್ಟ ಯಶ್
Toxic Movie: ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಕನ್ನಡ ʼಟಾಕ್ಸಿಕ್ʼ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಆಗಸ್ಟ್ 26ರಂದು ವಿಶ್ವಾದಯಂತ ತೆರೆಗೆ ಬರಲಿದ್ದು, ಪ್ರಚಾರ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ ಯಶ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ʼಟಾಕ್ಸಿಕ್ʼ ಚಿತ್ರದ ದೃಶ್ಯ -
ಬೆಂಗಳೂರು, ಆ. 16: ʼʼತಬಾಹಿʼ ಹಾಡಿನಲ್ಲಿ ನಾನು ಕಿಸ್ ಕೂಡ ಮಾಡಿಲ್ಲ. ಮತ್ತೆ ಇದು ಅಶ್ಲೀಲ ಹೇಗಾಗುತ್ತದೆ?ʼʼ-ʼಟಾಕ್ಸಿಕ್ʼ ಚಿತ್ರದ ಹಾಡು, ಟ್ರೈಲರ್, ಟೀಸರ್ ನೋಡಿ ಟೀಕಿಸುವವರಿಗೆ ಯಶ್ (Yash) ಕೊಟ್ಟ ಖಡಕ್ ರಿಪ್ಲೈ ಇದು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಇದೀಗ ಪ್ಯಾನ್ ವರ್ಲ್ಡ್ ಸ್ಟಾರ್ ಆಗಲು ಹೊರಟಿರುವ ಯಶ್ ಅವರ ಬಹು ನಿರೀಕ್ಷಿತ ʼಟಾಕ್ಸಿಕ್ʼ ಚಿತ್ರ ಬಹುಭಾಷೆಯಲ್ಲಿ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಈ ಮಧ್ಯೆ ಹಿಂದಿಯ ಜನಪ್ರಿಯ ʼಆಪ್ ಕಿ ಅದಾಲತ್ʼ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಶ್ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ʼಟಾಕ್ಸಿಕ್ʼ ಚಿತ್ರದಲ್ಲಿ ಹಿಂಸೆ ಮತ್ತು ಸೆಕ್ಸ್ ವೈಭವೀಕರಿಸಲಾಗಿದೆ ಎನ್ನುವ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಅದರಲ್ಲೂ ʼತಬಾಹಿʼ ಹಾಡು ರಿಲೀಸ್ ಆದಾಗ ಕೆಲವರು ಇದು ಕಾಂಡೊಂ ಜಾಹೀರಾತಿನಂತಿದೆ ಎಂದು ಟೀಕಿಸಿದ್ದರು. ಈ ಎಲ್ಲ ವಿಚಾರಗಳ ಬಗ್ಗೆ ಯಶ್ ಮಾತನಾಡಿದ್ದಾರೆ.
ʼಆಪ್ ಕಿ ಅದಾಲತ್ʼನಲ್ಲಿ ಯಶ್ ಮಾತು:
I knew social media would be flooded with Yash once the Aap Ki Adalat episode came out 😊
— ಅಲ್ಪಸಂಖ್ಯಾತ (@alpasankhyata) August 15, 2026
The Yash interview is going viral and how! 🔥
So happy that Rajat Sharma never hesitated to ask the tough questions. Almost all the controversies have finally been addressed.
What a great… pic.twitter.com/OI15KwuHfK
ಕಿಸ್ ಕೂಡ ಮಾಡಿಲ್ಲ...
ಚಿತ್ರದಲ್ಲಿ ಅಶ್ಲೀಲತೆ ಹೆಚ್ಚಿದೆ ಎನ್ನುವ ಆರೋಪಕ್ಕೆ ಯಶ್ ಪ್ರತಿಕ್ರಿಯಿಸಿ, ʼ‘ಅಶ್ಲೀಲತೆ ಇರುವುದು ತಪ್ಪು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ನಾವು ʼತಬಾಹಿʼ ಹಾಡಿನಲ್ಲಿ ಅಂತಹ ಯಾವುದೇ ಗೆರೆ ದಾಟಿಲ್ಲ. ನೀವು ಗಮನಿಸಿರಬಹುದು ನಾನು ನಾಯಕಿ ಕಿಯಾರಾ ಅಡ್ವಾಣಿಗೆ ಕಿಸ್ ಕೂಡ ಮಾಡಿಲ್ಲ. ಪ್ರತಿಯೊಂದು ದೃಶ್ಯವನ್ನೂ ಅತ್ಯಂತ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆʼ’ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಯಾವುದೇ ಮುಜುಗರವಿಲ್ಲದೆ ಚಿತ್ರ ನೋಡಬಹುದು ಎನ್ನುವ ಸಂದೇಶ ರವಾನಿಸಿದ್ದಾರೆ.
ರಾಜಕೀಯಕ್ಕೆ ಬರುವ ಸುಳಿವು ಕೊಟ್ರಾ ಯಶ್? ‘ಆಪ್ ಕಿ ಅದಾಲತ್’ನಲ್ಲಿ ರಾಕಿಂಗ್ ಸ್ಟಾರ್ ಹೇಳಿದ್ದೇನು?
ಜೆನ್ ಝೀಗಳಿಗೆ ಕನೆಕ್ಟ್ ಆಗಲಿದೆ
ʼಟಾಕ್ಸಿಕ್ʼ ಚಿತ್ರವು ಜೆನ್ ಝೀ ಸಮುದಾಯಕ್ಕೆ ಬಹಳ ಬೇಗ ಕನೆಕ್ಟ್ ಆಗಲಿದೆ. ಅವರನ್ನು ಗಮದಲ್ಲಿಟ್ಟುಕೊಂಡೇ ಕಥೆ ಹೆಣೆಯಲಾಗಿದೆ. ಅವರ ತಲ್ಲಣ, ಮಾನಸಿಕ ಸ್ಥಿತಿ, ಸಂಘರ್ಷಗಳನ್ನು ಇದು ಒಳಗೊಂಡಿದೆ ಎಂದಿದ್ದಾರೆ.
ʼʼಇಂದಿನ ಯುವ ಸಮುದಾಯ ಹಿರಿಯರ ಜತೆ ನಡೆದುಕೊಳ್ಳುವ ರೀತಿ, ನಡೆಸುವ ಸಂಭಾಷಣೆ, ಸಮಾಜದ ಹಳೆಯ ನಿಯಮಗಳ ಮೇಲೆ ಎತ್ತುವ ಪ್ರಶ್ನೆಗಳು ಹಾಗೂ ಅವರಲ್ಲಿರುವ ವಿಚಾರಗಳನ್ನು ಈ ಸಿನಿಮಾ ಪ್ರತಿನಿಧಿಸುತ್ತದೆʼʼ ಎಂದು ಹೇಳಿದ್ದಾರೆ. ಇದರೊಂದಿಗೆ ಕಥೆಯ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಸೆಕ್ಸ್, ಕ್ರೈಂ ಹೊರತಾಗಿ ಇನ್ನೇನೋ ಇದೆ ಎನ್ನುವ ಸೂಚನೆ ನೀಡಿದ್ದಾರೆ.
ಆರಂಭದಲ್ಲಿ ರಿಲೀಸ್ ಆದ ಟೀಸರ್‌ನಲ್ಲಿ ಕೆಲವು ಬೋಲ್ಡ್ ದೃಶ್ಯಗಳಿದ್ದವು. ಅಲ್ಲದೆ ನಾಯಕಿಯರು ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿರುವ ಸುಳಿವು ಹಾಡಿನಲ್ಲಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕೆಲವರು ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಹಿಂದೊಮ್ಮೆ ಸಂದರ್ಶನದಲ್ಲಿ ಯಶ್ ಹೇಳಿದ್ದ ಕುಟುಂಬ ಸಮೇತ ನೋಡುವಂತ ಸಿನಿಮಾವನ್ನು ಮಾತ್ರ ಮಾಡುತ್ತೇನೆ ಎನ್ನುವ ಹೇಳಿಕೆಯನ್ನು ಬಳಸಿ ಟ್ರೋಲ್ ಮಾಡಲಾಗುತ್ತಿದೆ. ಸದ್ಯ ಈ ಎಲ್ಲ ವಿಚಾರಗಳಿಗೆ ಯಶ್ ಉತ್ತರಿಸಿದ್ದು, ಕನ್ನಡಿಗರು ಹೆಮ್ಮೆ ಪಡುವಂತ ಚಿತ್ರ ಇದಾಗಲಿದೆ ಎನ್ನುವ ಭರವಸೆ ನೀಡಿದ್ದಾರೆ.
ಸದ್ಯ ಚಿತ್ರ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್‌ನಲ್ಲೇ ಕುತೂಹಲ ಕೆರಳಿಸದ್ದು, ವಿವಿಧ ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಕಿಯಾರ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಅಕ್ಷಯ್ ಓಬೆರಾಯ್ ಮತ್ತಿತರರು ನಟಿಸಿದ್ದಾರೆ.
ಮನರಂಜನೆಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.