Kichcha Sudeep: ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ? ವಾರ್ನ್ ಮಾಡೋದು ತಪ್ಪಾ? ; ಕಿಚ್ಚ ಸುದೀಪ್ ಪ್ರಶ್ನೆ
Sandalwood: ಹುಬ್ಬಳ್ಳಿಯಲ್ಲಿ ಮಾರ್ಕ್ ಸಿನಿಮಾದ ಮಾತನಾಡುವಾಗ ಪೈರಸಿ ಹೆಸರನ್ನು ಉಲ್ಲೇಖ ಮಾಡದೇ ಹೇಳಿದ್ದರಿಂದ ಈ ವಿಚಾರ ದೊಡ್ಡದಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಸುದೀಪ್ ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ ಹೇಳಿಕೆಯನ್ನು ಸಮರ್ಥಿಸಿ ಮತ್ತಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ.
ಕಿಚ್ಚ ಸುದೀಪ್ -
ಹುಬ್ಬಳ್ಳಿಯಲ್ಲಿ(Hubballi) ಮಾರ್ಕ್ (Mark) ಸಿನಿಮಾದ ಮಾತನಾಡುವಾಗ ಪೈರಸಿ ಹೆಸರನ್ನು ಉಲ್ಲೇಖ ಮಾಡದೇ ಹೇಳಿದ್ದರಿಂದ ಈ ವಿಚಾರ ದೊಡ್ಡದಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಸುದೀಪ್ ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ ಹೇಳಿಕೆಯನ್ನು ಸಮರ್ಥಿಸಿ ಮತ್ತಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ. ಪೈರಸಿ ವಿರುದ್ಧ ಕಿಚ್ಚ ಸುದೀಪ್ ಅವರು ಯುದ್ಧ ಸಾರಿದ್ದಾರೆ.
ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ?
ಈ ಬಗ್ಗೆ ಸುದೀಪ್ ಮಾತನಾಡಿ, ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ? ನನ್ನ ಸಿನಿಮಾ ನಾನು ಕಾಪಾಡಿಕೊಳ್ಳಬಾರದಾ? ನನ್ನ ವೇದಿಕೆ ಮೇಲೆ ನಿಂತು ನಾನು ವಾರ್ನ್ ಮಾಡೋದು ತಪ್ಪಾ? ಯಾರಿಗೆ ರೀಚ್ ಅಗಬೇಕು ಅವರಿಗೆ ಆಗತ್ತೆ. ನಾನು ಯಾರಿಗೆ ಹೇಳಬೇಕು ಅವರಿಗೆ ಹೇಳಿದೆ. ಯಾವ ಆರ್ಟಿಸ್ಟ್ ಸಂಬಂಧಪಟ್ಟ ಅವರಿಗೆ ಹೇಳಿಲ್ಲ. ಎಲ್ಲ ಕಲಾವಿದರ ಬಗ್ಗೆ ನಾನು ಮಾತನಾಡಲ್ಲ. ಎಷ್ಟು ಸಂದರ್ಶನ ನೋಡಿಲ್ಲ ನೀವು? ನಾನು ಆ ಥರ ಏನು ಮಾತನಾಡಲ್ಲ ಎಂದರು.
ಇದನ್ನೂ ಓದಿ: Kiccha Sudeep: ʻಯುದ್ಧಕ್ಕೆ ರೆಡಿʼ ಎಂದು ಸುದೀಪ್ ಹೇಳಿದ್ದು ಯಾರಿಗೆ? ಚಕ್ರವರ್ತಿ ಚಂದ್ರಚೂಡ್ ಬಾಯಿಬಿಟ್ಟ ಸತ್ಯವಿದು!
ತಲೆ ಹಾಕುವ ಉದ್ದೇಶ ನನಗೆ ಇಲ್ಲ
ಬೇರೆಯವರ ಸಿನಿಮಾದಲ್ಲಿ ತಲೆ ಹಾಕುವ ಉದ್ದೇಶ ನನಗೆ ಇಲ್ಲ. ಇಂಥವರಿಗೆ ಹೇಳಿದ್ದು ಅಂತ ನಾನು ಹೇಳಿಲ್ಲ. ಅಷ್ಟು ಜನ ಕಲಾವಿದರು ಇದ್ದಾರೆ. ಎಲ್ಲರಿಗೂ ಸುದೀಪ್ ಗೊತ್ತು. ಅವರು ಯಾರೂ ಕೂಡ ಪ್ರತಿಕ್ರಿಯಿಸಿಲ್ಲ. ಸಿನಿಮಾ ಬಿಟ್ಟು ಬೇರೆ ವಿಚಾರಗಳ ಬಗ್ಗೆ ನಾನು ಕೇರ್ ಮಾಡಲ್ಲ. ನನ್ನದು ಸಿಂಪಲ್ ಜೀವನ. ದರ್ಶನ್ ಬಗ್ಗೆ ನೀವು ಬಂದು ಕೇಳಿದಾಗ ನಾನು ಇಂದಿನ ತನಕ ಕೆಟ್ಟದಾಗಿ ಮಾತನಾಡಿಲ್ಲ. ನಾನು ಯಾಕೆ ಯಾರಿಗಾದರೂ ಕೆಟ್ಟದ್ದು ಬಯಸಬೇಕು? ನನ್ನ ಸಿನಿಮಾವನ್ನು ಅದರ ಪಾಡಿಗೆ ಬಿಟ್ಟುಬಿಡಬಹುದಲ್ಲ.
ವಿವಾದ ಮಾಡಲು ನಾನು ಇಲ್ಲಿ ಬಂದಿಲ್ಲ. ನನಗೆ ಆಗಿರುವ ನೋವನ್ನು ಊಹಿಸಿಕೊಳ್ಳಿ. ಪೈರಸಿ ವಿರುದ್ಧ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಈಗ ಹೇಳಲ್ಲ. ಪ್ರಯತ್ನ ಮಾಡುತ್ತಿದ್ದೇನೆ ಎಂದರು.
‘ಮಾರ್ಕ್’ ಸಿನಿಮಾ ರಿಲೀಸ್ ಯಾವಾಗ?
‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ (ಗುರುವಾರ) ಬಿಡುಗಡೆ ಆಗಲಿದೆ. ಸತ್ಯಜ್ಯೋತಿ ಫಿಲ್ಮ್ಸ್ 39 ವರ್ಷಗಳ ನಂತರ ಕನ್ನಡದಲ್ಲಿ ಮಾರ್ಕ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು, ನಿಶ್ವಿಕಾ ನಾಯ್ಡು, ರೋಶಿಣಿ ಪ್ರಕಾಶ್, ಅಶ್ವಿನ್ ಹಾಸನ್, ಮಹಾಂತೇಶ್ ಹಿರೇಮಠ್ ಮುಂತಾದವರು ನಟಿಸಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತವನ್ನು ನೀಡಿದ್ದಾರೆ. 'ಮಾಕ್ಸ್' ಸಿನಿಮಾ ಮೂಲಕ ಕಿಚ್ಚ ಸುದೀಪ್ ದಾಟಿಯನ್ನು ಬದಲಿಸಿದ್ದಾರೆ. ಕೇವಲ ಸಂಭಾವನೆ ತೆಗೆದುಕೊಂಡು ಸಿನಿಮಾ ಮಾಡುತ್ತಿಲ್ಲ. ಸಂಭಾವನೆ ಜೊತೆಗೆ ಅವರು ನಟಿಸುವ ಸಿನಿಮಾದಲ್ಲಿ ಹೂಡಿಕೆ ಮಾಡಿ ಲಾಭವನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Mark Trailer : ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಬರ್ತಿದೆ ‘ಮಾರ್ಕ್’ ಟ್ರೈಲರ್, ಯಾವಾಗ?
ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಸಾನ್ವಿ 'ಮಾರ್ಕ್' ಸಿನಿಮಾವನ್ನು ವಿತರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇವರೊಂದಿಗೆ ಕೆಆರ್‌ಜಿ ಸ್ಟುಡಿಯೋ ಕೈ ಜೋಡಿಸುತ್ತಿದೆ. ಕರ್ನಾಟಕದಲ್ಲಿ ಕೆಆರ್‌ಜಿ ಜೊತೆಯಲ್ಲಿ ಜೊತೆಗೂಡಿ ವಿತರಣೆಯನ್ನು ಮಾಡುತ್ತಿದ್ದಾರೆ.