Rashmika Mandanna: ದೇವರಕೊಂಡ-ರಶ್ಮಿಕಾ ಡೇಟಿಂಗ್ ಊಹಾಪೋಹಕ್ಕೆ ರೆಕ್ಕೆ: ‘ಡಿಯರ್ ಡೈರಿ’ಗೆ ವಿಜಯ್ ರೆಡ್ ಹಾರ್ಟ್
ರಶ್ಮಿಕಾ ಮಂದಣ್ಣ ಹೊಸ ಉದ್ಯಮವೊಂದನ್ನು ಆರಂಭಿಸಿದ್ದು, 'ಡಿಯರ್ ಡೈರಿ' ಎಂಬ ತಮ್ಮದೇ ಆದ ಪರ್ಫ್ಯೂಮ್ ಕಂಪನಿಯನ್ನು ತೆರೆದಿದ್ದಾರೆ. ವಿವಿಧ ಸುವಾಸನೆಯ ಸೆಂಟ್‌ಗಳನ್ನು ಬಿಡುಗಡೆ ಮಾಡಿದ್ದು, ಹಲವಾರು ಸುಗಂಧದ್ರವ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಉತ್ತೇಜನ ನೀಡಿರುವ ಪಿಸಿಎ ಕಂಪನಿಯು ರಶ್ಮಿಕಾ ಅವರ ಬ್ರ್ಯಾಂಡ್ ಮಾರಾಟ ಮಾಡಲು ಸಹಕಾರ ನೀಡಲಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ

ಹೂದರಾಬಾದ್: ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ (Vijay Deverakonda) ಮತ್ತು ನ್ಯಾಷನಲ್ ಕ್ರಶ್ (National Crush) ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೇಟಿಂಗ್ (Dating) ಊಹಾಪೋಹಕ್ಕೆ ಸಧ್ಯ ರೆಕ್ಕೆ ಪುಕ್ಕ ಬಂದಂತಾಗಿದೆ. ಇನ್ನೂ ಇವರಿಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಳ್ಳದಿದ್ದರೂ ಹಲವಾರು ವಿಚಾರಗಳು ಆಗಾಗ ಈ ಊಹಾಪೋಹಗಳಿಗೆ ಸಾಕ್ಷಿ ಆಗುತ್ತಿರುತ್ತವೆ.
ಹೌದು, ಸದ್ಯ ರಶ್ಮಿಕಾ ತಮ್ಮ ಕನಸಿನ ಕೂಸಾದ ಸುಗಂಧ ದ್ರವ್ಯದ ಬ್ರ್ಯಾಂಡ್ ‘ಡಿಯರ್ ಡೈರಿ’ಯನ್ನು ಲಾಂಚ್ ಮಾಡಿದ್ದಾರೆ. ಅವರು ಇದನ್ನು ತಮ್ಮ ಸೋಶಿಯಲ್ ಮಿಡಿಯಾ ಪ್ಲಾಟ್ ಫಾರ್ಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ವಿಜಯ್ ದೇವರಕೊಂಡ ತಮ್ಮ ಪೇಜ್‌ನಲ್ಲಿ ಶೇರ್ ಮಾಡಿಕೊಂಡು “ರಶ್ಮಿಕಾ ಪ್ಯಾಶನ್ ಪ್ರಾಜೆಕ್ಟ್” ಎಂದು ಕೊಂಡಾಡಿದ್ದಾರೆ.
ರಶ್ಮಿಕಾ ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮತ್ತು ದೀರ್ಘ ಟಿಪ್ಪಣಿಯನ್ನು ಶೇರ್ ಮಾಡುವ ಮೂಲಕ ‘ಡಿಯರ್ ಡೈರಿ’ ಬಿಡುಗಡೆಯನ್ನು ಘೋಷಿಸಿದರು. “ಇದು ಕೇವಲ ಬ್ರ್ಯಾಂಡ್ ಅಥವಾ ಸುಗಂಧ ದ್ರವ್ಯವಲ್ಲ. ನನ್ನ ಜೀವದ ಭಾಗವೇ ಆಗಿದೆ. ಇದ್ದು ನನ್ನ ವೈಯಕ್ತಿಕ ಜೀವನದ ಪ್ರಮುಖ ಭಾಗವಾಗಿದ್ದು, ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಜತೆಗೆ ಸ್ವಲ್ಪ ಆತಂಕವೂ ಇದೆ. ನಿಮ್ಮ ಆಶೀರ್ವಾದವಿರಲಿ” ಎಂದು ರಶ್ಮಿಕಾ ಬರೆದುಕೊಂಡಿದ್ದರು.
ಇದನ್ನು ವಿಜಯ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು, “#ಡಿಯರ್‌ಡೈರಿ, ರಶ್ಮಿಕಾ ಅವರ ಪ್ಯಾಶನ್ ಪ್ರಾಜೆಕ್ಟ್ ಈಗ ಲೈವ್” ಎಂದಿದ್ದಾರೆ. ಇದಕ್ಕೆ ರಶ್ಮಿಕಾ, “ಯು ಆರ್ ದ ಬೆಸ್ಟೆಸ್ಟ್!” ಎಂದು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಸಿಟ್ಟಿನಲ್ಲಿ ಲೆಹೆಂಗಾ-ಬ್ಲೌಸ್ ಕತ್ತರಿಸಿ ಗ್ರಾಹಕನ ಅಟ್ಟಹಾಸ; ಈ ವಿಡಿಯೊ ನೋಡಿ
ವಿಜಯ್ ಮತ್ತು ರಶ್ಮಿಕಾ 2018ರ ‘ಗೀತಾ ಗೋವಿಂದಂ’ ಮತ್ತು 2019ರ ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇವರ ಡೇಟಿಂಗ್ ಊಹಾಪೋಹಗಳು ವರ್ಷಗಟ್ಟಲೆ ಚರ್ಚೆಯಲ್ಲಿದೆ. ಆದರೆ ಇವರಿಬ್ಬರೂ ಇದನ್ನು ದೃಢಪಡಿಸಿಲ್ಲ.