ಸಂಗೀತ ನಿರ್ದೇಶಕ ಗುರು ಕಿರಣ್‌ಗೆ ಮಾತೃ ವಿಯೋಗ; ಭಾವುಕ ಪೋಸ್ಟ್ ಹಂಚಿಕೊಂಡ ವೈರಲ್
Guru Kiran's mother passes away: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರು ಕಿರಣ್ ಎ. ರತ್ನಕಾಂತಿ ಶೆಟ್ಟಿ ಅವರ ತಾಯಿ ನಿನ್ನೆ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ಕಂಗಾಲಾಗಿರುವ ಗುರು ಕಿರಣ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಭಾವುಕರಾಗಿದ್ದಾರೆ. “ತುಂಬಿದ ಹೃದಯದಿಂದ ನಮ್ಮ ಪ್ರೀತಿಯ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರ ನಿಧನದ ಹೃದಯವಿದ್ರಾವಕ ಸುದ್ದಿಯನ್ನ ಹಂಚಿಕೊಳ್ಳುತ್ತಿದ್ದೇನೆ.
ತಾಯಿ ಜೊತೆ ಗುರುಕಿರಣ್ -
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರು ಕಿರಣ್ ಎ. ರತ್ನಕಾಂತಿ ಶೆಟ್ಟಿ ಅವರ ತಾಯಿ ನಿನ್ನೆ (Guru Kiran's mother passes away) ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ಕಂಗಾಲಾಗಿರುವ ಗುರು ಕಿರಣ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಭಾವುಕರಾಗಿದ್ದಾರೆ. “ತುಂಬಿದ ಹೃದಯದಿಂದ ನಮ್ಮ ಪ್ರೀತಿಯ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರ ನಿಧನದ ಹೃದಯವಿದ್ರಾವಕ ಸುದ್ದಿಯನ್ನ ಹಂಚಿಕೊಳ್ಳುತ್ತಿದ್ದೇನೆ. ಅವರು ನಮ್ಮ ಕುಟುಂಬದ ಹೃದಯವಾಗಿದ್ದರು, ನಮ್ಮ ಶಕ್ತಿ, ಪ್ರೀತಿ ಮತ್ತು ಬೆಚ್ಚಗಿನ ಆಸರೆಯಾಗಿದ್ದರು. ಅವರ ಬೇಷರತ್ ಪ್ರೀತಿ, ಶಾಂತ ಉಪಸ್ಥಿತಿ ಮತ್ತು ಅಗಾಧ ತ್ಯಾಗಗಳು ಇಂದು ನಾವು ಏನಾಗಿದ್ದೇವೋ ಅದನ್ನ ರೂಪಿಸಿವೆ” ಎಂದು ಗುರು ಕಿರಣ್ ಬರೆದುಕೊಂಡಿದ್ದಾರೆ.
ಗುರುಕಿರಣ್ ಅವರು ಮೂಲತಃ ಮಂಗಳೂರಿನವರಾಗಿದ್ದು, ಬಾಲ್ಯದಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಮಂಗಳೂರಿನ ವಿವಿಧ ಆರ್ಕೆಸ್ಟ್ರಾ ಹಾಗೂ ಕಲಾತಂಡಗಳಲ್ಲಿ ಗಾಯಕರಾಗಿ ಮತ್ತು ಕೀಬೋರ್ಡ್ ವಾದಕರಾಗಿ ತಮ್ಮ ಸಂಗೀತ ಜರ್ನಿಯನ್ನು ಆರಂಭಿಸಿದರು. ಆರಂಭದಲ್ಲಿ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಬಳಿ ಸಹಾಯಕವಾಗಿ ಕೆಲಸ ಮಾಡಿದ್ದರು.
ಸಂಗೀತ ನಿರ್ದೇಶನಕ್ಕೂ ಮುನ್ನ ಇವರು ನಟನಾಗಲು ಬಯಸಿದ್ದರು. 'ರಂಗೋಲಿ', 'ಗಂಡುಗಲಿ' ಮತ್ತು ತುಳು ಚಿತ್ರವಾದ 'ಬದ್ಕೊಂಜಿ ಕಬಿತೆ' ಚಿತ್ರಗಳಲ್ಲಿ ನಟಿಸಿದ್ದರು. ʻಎʼ ಸಿನಿಮಾದ ಮೂಲಕ ಗುರು ಕಿರಣ್ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಬಳಿಕ . ʻಉಪೇಂದ್ರʼ, ʻಚಿತ್ರʼ, ʻಅಪ್ಪುʼ, ʻಆಪ್ತಮಿತ್ರʼ, ʻಜೋಗಿʼ, ʻಅರಮನೆʼ, ʻರಾಮ್ʼ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಖ್ಯಾತ ನಟ ಪ್ರದೀಪ್ ರಾವತ್ ನಿಧನ; ಬ್ಲಡ್ ಕ್ಯಾನ್ಸರ್‌ನಿಂದ ಮೃತಪಟ್ಟರೇ ʻಗಜʼ, ʻಗಜಿನಿʼ ಸಿನಿಮಾಗಳ ವಿಲನ್?
ಇವರ ಸಾಧನೆಗಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಹಲವು ಫಿಲ್ಮ್‌ಫೇರ್ ಪ್ರಶಸ್ತಿಗಳು ದೊರಕಿವೆ. ಕನ್ನಡ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಬೆಂಗಳೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.