ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nandagokula Serial: ಇದೊಂದು ಕಾರಣಕ್ಕೆ ʻನಂದಗೋಕುಲʼ ಸೀರಿಯಲ್‌ ಅಂತ್ಯ? ಏನಿದು ಚರ್ಚೆ?

Nandagokula Serial: 'ನಂದಗೋಕುಲ'. ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣಪುಟ್ಟ ಮೋಜಿನ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿರುತ್ತದೆ, ಅದರ ಜೊತೆಗೆ ಆಗಾಗ ಸೀರಿಯೆಸ್‌ ಕಥೆಗಳು ಇರುತ್ತವೆ. ಸೊಸೆಯಂದಿರನ್ನು ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದ ಅತ್ತೆ ಗಿರಿಜಾ ಬಳಿಯ ವಿಷಯ ಮುಚ್ಚಿಟ್ಟು, ಮೀನಾ ಮತ್ತು ಅಮ್ಮು ಪ್ಲ್ಯಾನ್ ಮಾಡಿ, ಅಮ್ಮು ಟ್ಯೂಶನ್ ಕೆಲಸಕ್ಕೆ ಹೋಗುವಂತೆ ಮಾಡಿದ್ದಾರೆ. ಅತ್ತೆ ಗಿರಿಜಾ ಸೊಸೆಯಂದಿರ ಮೇಲೆ ಮುನಿಸಿಕೊಂಡಿದ್ದಾರೆ. ಆದರೆ ಇದನ್ನು ಸರಿ ಮಾಡಿದ್ದು ಹಿರಿ ಸೊಸೆ.

ಇದೊಂದು ಕಾರಣಕ್ಕೆ ʻನಂದಗೋಕುಲʼ ಸೀರಿಯಲ್‌ ಅಂತ್ಯ? ಏನಿದು ಚರ್ಚೆ?

ನಂದಗೋಕುಲ ಧಾರಾವಾಹಿ -

Yashaswi Devadiga
Yashaswi Devadiga Jun 8, 2026 7:50 PM

ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಧಾರಾವಾಹಿ 'ನಂದಗೋಕುಲ' (Nadagokula). ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣಪುಟ್ಟ ಮೋಜಿನ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿರುತ್ತದೆ, ಅದರ ಜೊತೆಗೆ ಆಗಾಗ ಸೀರಿಯೆಸ್‌ ಕಥೆಗಳು ಇರುತ್ತವೆ. ಸೊಸೆಯಂದಿರನ್ನು ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದ ಅತ್ತೆ ಗಿರಿಜಾ (Girija)ಬಳಿಯ ವಿಷಯ ಮುಚ್ಚಿಟ್ಟು, ಮೀನಾ ಮತ್ತು ಅಮ್ಮು ಪ್ಲ್ಯಾನ್ ಮಾಡಿ, ಅಮ್ಮು ಟ್ಯೂಶನ್ ಕೆಲಸಕ್ಕೆ ಹೋಗುವಂತೆ ಮಾಡಿದ್ದಾರೆ. ಅತ್ತೆ ಗಿರಿಜಾ ಸೊಸೆಯಂದಿರ ಮೇಲೆ ಮುನಿಸಿಕೊಂಡಿದ್ದಾರೆ. ಆದರೆ ಇದನ್ನು ಸರಿ ಮಾಡಿದ್ದು ಹಿರಿ ಸೊಸೆ.

ಬೆಂಕಿ ಹಚ್ಚುವ ಕೆಲಸ

ಮಾಧವನ ಮಡದಿಯಾಗಿ ನಂದಗೋಕುಲಕ್ಕೆ ಬಂದ ಪ್ರಿಯಾ, ಮೊದಲ ದಿನದಿಂದಲೂ ಸುಂದರವಾದ ಸಂಸಾರದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಲೇ ಇದ್ದಳು. ಬೇರೆಯವರ ವಿಷಯಗಳನ್ನು ತನಗೆ ಬೇಕಾದಂತೆ ಮಾವನ ಮುಂದೆ ಪ್ರಿಯಾ ಹೇಳುತ್ತಿದ್ದಳು.

ಇದನ್ನೂ ಓದಿ: Karuppu OTT release: ಸೂಪರ್ ​ಹಿಟ್ ʻಕರುಪ್ಪುʼ ಈ ಒಟಿಟಿಗೆ ಎಂಟ್ರಿ! ಸ್ಟ್ರೀಮಿಂಗ್‌ ಯಾವಾಗಿನಿಂದ?

ಮೀನಾ-ಕೇಶವ ಜೊತೆಯಾಗಿ ಕಾಂಪಿಟೇಷನ್‌ಗೆ ಹೋಗಿದ್ದನ್ನು ಮಾವನ ಮುಂದೆ ಹೇಳಿದ್ದಳು. ಹಾಗೆಯೇ ಅಮೂಲ್ಯ ಟ್ಯೂಷನ್ ಮಾಡೋದನ್ನು ಮಾವನ ಕಿವಿಯಲ್ಲಿ ಪ್ರಿಯಾ ಊದಿದ್ದಳು. ಪ್ರಿಯಾ ಮಾಡ್ತಿರೋ ಈ ಕೆಲಸಗಳಿಂದ ನಂದಗೋಕುಲದಲ್ಲಿ ನೆಮ್ಮದಿ ಇಲ್ಲದಂತಾಗಿತ್ತು.

ಆದರೆ ಮಾಧವನ ಜೊತೆ ಹನಿಮೂನ್ ಗೆ ಹೋಗಿ ಬರುತ್ತಿದ್ದಂತೆ ಪ್ರಿಯಾ ಸಂಪೂರ್ಣವಾಗಿ ಬದಲಾಗಿದ್ದಾಳೆ. ಇದೀಗ ಗಿರಿಜಾ ಬಳಿ ಹೋಗಿ ಪ್ರಿಯಾ, ನಿಮ್ಮದು ಹಾಗೂ ಅಮ್ಮು-ಮೀನಾರದ್ದು ಅತ್ತೆ-ಸೊಸೆಯರಿಗಿಂತ ಸ್ನೇಹಿತರಂತಹ ಸಂಬಂಧ.

ಈ ರೀತಿ ಮಾತು ಬಿಟ್ಟಿರುವುದು ಸರಿಯಲ್ಲ. ಈ ಒಂದು ಸಲ ಅವರನ್ನು ಕ್ಷಮಿಸಿ ಬಿಡಿ ಎಂದು ರಿಕ್ವೆಸ್ಟ್ ಮಾಡುತ್ತಾಳೆ. ಕೊನೆಗೂ ಪ್ರಿಯಾ ಮಾತಿಗೆ ಒಪ್ಪಿ ಅಮ್ಮು ಮತ್ತು ಮೀನಾ ಬಳಿ ಮಾತನಾಡಲು ಗಿರಿಜಾ ಒಪ್ಪಿಗೆ ಸೂಚಿಸಿದ್ದಾರೆ.

ಅತ್ತೆ ತಮ್ಮ ಬಳಿ ಮಾತನಾಡುವಂತೆ ಮಾಡಿದ ಪ್ರಿಯಾ ಅಕ್ಕನಿಗೆ ತಂಗಿಯರಿಬ್ಬರು ಖುಷಿಯಿಂದ ಅಪ್ಪಿಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಪ್ರಿಯಾ ಬದಲಾವಣೆ ಯಾಕೋ ಮೋಸದಂತೆ ಕಾಣಿಸುತ್ತಿದೆ ಎಂದಿದ್ದಾರೆ. ಮತ್ತೆ ಕೆಲವರು ಎಲ್ಲಾ ಸರಿ ಆಗ್ತಿದೆ ಅಂದ್ರೆ, ಶೀಘ್ರದಲ್ಲೇ ನಂದಗೋಕುಲ ಧಾರಾವಾಹಿ ಮುಕ್ತಾಯವಾಗಲಿದೆ ಎಂದು ಅರ್ಥ ಅನ್ನೋದನ್ನು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಬಿಗ್‌ ಬಾಸ್‌ ಶೋಗಾಗಿ ಈ ಧಾರಾವಾಹಿಗಳು ಅಂತ್ಯ? ಯಾವುದೆಲ್ಲ?

ಪ್ರತಿ ವರ್ಷ ಬಿಗ್ ಬಾಸ್ ಶೋನಲ್ಲಿ ಒಂದಲ್ಲಾ ಒಂದು ಹೊಸತನ ಇರುತ್ತದೆ. ಈ ಬಾರಿ ಕೂಡ ಹೊಸತನವನ್ನು ಪರಿಚಯಿಸಲಾಗಿದೆ. ಹಾಗಾಗಿ ಯಾವ ಸೀರಿಯಲ್‌ ಅಂತ್ಯ ಕಾಣಲಿದೆ ಎಂಬ ಚರ್ಚೆಗಳು ಶುರುವಾಗಿವೆ. ಇದೀಗ ನಂದಗೋಕುಲ ಅಂತ್ಯ ಹಾಡುತ್ತಾ ಅನ್ನೋ ಚರ್ಚೆ ವೀಕ್ಷಕರಾದ್ದಾಗಿದೆ.