ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಅಗ್ನಿಪರೀಕ್ಷೆಯಿಂದ ದೊಡ್ಮನೆವರೆಗಿನ ಜರ್ನಿ ಮುಕ್ತಾಯ; ಕುಮಾರಿ ಔಟ್‌!

Kumari Bigg boss Kannada: ಸೋಶಿಯಲ್‌ ಮೀಡಿಯಾದಲ್ಲಿ ‘ಹಳ್ಳಿ ಹುಡುಗಿ’ ಎಂದು ಪ್ರಸಿದ್ದಿ ಪಡೆದಿರುವ ನಂಜನಗೂಡಿನ ಪಟಾಕಿ ಕುಮಾರಿ ಅವರು ‘ಬಿಗ್‌ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಹೆಸರು ಮಾಡಿದ್ದರು. ಮಾಡ್ರನ್‌ ಮಹಾಕವಿ ಮಂಜುನಾಥ್‌ ಅವರು ಎಲಿಮಿನೇಟ್‌ ಆಗಿ ಹೊರಗಡೆಬರ್ತಿದ್ದಂತೆ ಹೊಸ ವೈಲ್ಡ್ ಕಾರ್ಡ್‌ ಎಂಟ್ರಿ ಪಡೆದಿದ್ದರು ಕುಮಾರಿ. ಇದೀಗ ಕುಮಾರಿ ಎಲಿಮಿನೇಟ್‌ ಆಗಿದ್ದಾರೆ.

ಅಗ್ನಿಪರೀಕ್ಷೆಯಿಂದ ದೊಡ್ಮನೆವರೆಗಿನ ಜರ್ನಿ ಮುಕ್ತಾಯ; ಕುಮಾರಿ  ಔಟ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 1, 2026 10:50 PM

ಸೋಶಿಯಲ್‌ ಮೀಡಿಯಾದಲ್ಲಿ ‘ಹಳ್ಳಿ ಹುಡುಗಿ’ (Halli Hudugi) ಎಂದು ಪ್ರಸಿದ್ದಿ ಪಡೆದಿರುವ ನಂಜನಗೂಡಿನ ಪಟಾಕಿ ಕುಮಾರಿ (Kumari Bigg Boss Kannada) ಅವರು ‘ಬಿಗ್‌ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಹೆಸರು ಮಾಡಿದ್ದರು. ಮಾಡ್ರನ್‌ ಮಹಾಕವಿ ಮಂಜುನಾಥ್‌ ಅವರು ಎಲಿಮಿನೇಟ್‌ ಆಗಿ ಹೊರಗಡೆಬರ್ತಿದ್ದಂತೆ ಹೊಸ ವೈಲ್ಡ್ ಕಾರ್ಡ್‌ (Wild Card entry) ಎಂಟ್ರಿ ಪಡೆದಿದ್ದರು ಕುಮಾರಿ. ಇದೀಗ ಕುಮಾರಿ ಎಲಿಮಿನೇಟ್‌ ಆಗಿದ್ದಾರೆ.

ಈ ವಾರ ಆಸಿಯಾ, ಕಿರಣ್, ಕುಮಾರಿ, ಪ್ರಶಾಂತ್, ಧನುಶ್, ಗಗನ್, ಜಗದೀಶ್, ಪ್ರಶಾಂತ್ ಅವರುಗಳು ನಾಮಿನೇಟ್ ಆಗಿದ್ದರು. ಅವರಲ್ಲಿ ಮೊದಲಿಗೆ ಆಸಿಯಾ ಅವರನ್ನು ಸೇಫ್ ಮಾಡಲಾಯ್ತು. ಬಳಿಕ ಗಗನ್, ಬಳಿಕ ಧನುಶ್, ಬಳಿಕ ಕಿರಣ್ ಅವರುಗಳು ಸೇಫ್ ಆದರು. ಅಂತಿಮವಾಗಿ ಜಗದೀಶ್, ಪ್ರಶಾಂತ್ ಮತ್ತು ಕುಮಾರಿ ಉಳಿದಿದ್ದರು.

ಮತ್ತೊಮ್ಮೆ ಅದೃಷ್ಟದ ಬಾಗಿಲು

ಮತ್ತೊಮ್ಮೆ ಅದೃಷ್ಟದ ಬಾಗಿಲು ತೆಗೆದಿದೆ ಅನ್ನೋವಾಗಲೆ ಅವರಿಗೆ ಆರೊಗ್ಯ ಕೈ ಕೊಟ್ಟಿದೆ ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಮೊದಲ ದಿನ ಕಾಣಿಸಿಕೊಂಡಿದ್ದರು. ಜಡ್ಜಸ್‌ ಕಡೆಯಿಂದ ಮೊದಲು 4 ಸ್ಟಾರ್ ಪಡೆದವರು. ನಂತರ ‘ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ಟಾಸ್ಕ್‌ ಆಡುವಾಗ ಕುಸಿದಿದ್ದರು. ಅಲ್ಲಿಂದ ನೇರವಾಗಿ ಅವರನ್ನ ತಂಡ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಚಿಕಿತ್ಸೆ ಪಡೆದ ಕುಮಾರಿ ಅವರಿಗೆ ಡಾಕ್ಟರ್ ಶೋನಲ್ಲಿ ಭಾಗವಹಿಸುವುದು ಬೇಡ ಎಂದು ಹೇಳಿದ್ದರು. ಬಳಿಕ 5 ಲಕ್ಷ ಕ್ಯಾಶ್‌ ಪ್ರೈಸ್‌ ಮತ್ತು ಕಾಲೇಜಿನ ಖರ್ಚು ಜೊತೆಗೆ ಉದ್ಯೋಗವನ್ನು ಪಡೆಯುವ ಅವಕಾಶ ಕುಮಾರಿ ಅವರಿಗೆ ಸಿಕ್ಕಿತು.

ಇದನ್ನೂ ಓದಿ: Bigg Boss Kannada 13: ಸೌಂದರ್ಯಾ ಶೆಟ್ಟಿ ವಿರುದ್ಧ ಪಕ್ಷಪಾತ ಆರೋಪ! ಸ್ಪಷ್ಟನೆ ನೀಡಿದ ಕಿಚ್ಚ

ಇದಾದ ಬಳಿಕ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದರೂ ಈಗ ಹೊರ ಹೋಗುವ ಸಂದರ್ಭ ಅವರಿಗೆ ಬಂದಿದೆ. ಆಡಿದ ಕೆಲವೇ ದಿನಗಳಲ್ಲಿ ಕಿರೀಟ ಪಡೆದುಕೊಂಡವರು.

ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಮಾತನಾಡಿರೋ ಕುಮಾರಿ ಇಲ್ಲಿ ದೊಡ್ಡವರು ಜಾಣರಲ್ವೇ ಅಲ್ಲ. ಆ ರೀತಿನೇ ಇಲ್ಲಿ ಸಹ ಸ್ಪರ್ಧಿಗಳು ಇದ್ದಾರೆ ಅಂತಲೇ ಕುಮಾರಿ ಹೇಳಿದ್ದರು. ತಮ್ಮ ನೇರ ನುಡಿಗೆ ಹೆಸರಾದರು. ಸೌಂದರ್ಯ ಜೊತೆಗೆ ಜಗಳವೂ ಆಗಿತ್ತು. ಮನೆಯ ವೇಸ್ಟ್‌ ಪೀಸ್‌ ಅಂತ ಟ್ಯಾಗ್‌ ಲೈನ್‌ ಕೊಟ್ಟಿದ್ದರು ಸೌಂದರ್ಯ. ಅಷ್ಟೇ ಅಲ್ಲ ಸಿಂಪಥಿ ಕಾರ್ಡ್‌ ಪ್ಲೇ ಮಾಡ್ತಾರೆ ಅನ್ನೋ ಆರೋಪ ಸೌಂದರ್ಯ ಅವರದಾಗಿತ್ತು.

ಇದನ್ನೂ ಓದಿ: Bigg Boss Kannada 13: ಮುಚ್ಕೊಂಡು ಕುತ್ಕೋ ಅಂದ್ರೆ ಸುಮ್ಮನಿರಲ್ಲ; ಗಗನ್‌ ಮೇಲೆ ಯಶಸ್‌ ಸಿಟ್ಟು

ಮನೆಯಲ್ಲಿ ತಮ್ಮದೇ ಆದ ಸಹಜ ಹಾಗೂ ಮುಗ್ಧ ಮಾತುಗಳಿಂದ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ವಾರದ ಟಾಸ್ಕ್‌ಗಳಲ್ಲಿಯೂ ಅವರು ಗೆಲುವಿನ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಅವರಿಗೆ ಕಳಪೆ ಕೊಟ್ಟು ತಾವು ಸಖತ್‌ ಶೈನ್‌ ಕೂಡ ಆಗಿದ್ದರು. ಆದರೀಗ ಅವರ ಬಿಗ್‌ ಬಾಸ್‌ ಜರ್ನಿಗೆ ಶುಭಂ ಹಾಡಿದ್ದಾರೆ.