ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mahakali Glimpse: ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ; ‘ಮಹಾಕಾಳಿ’ ಗ್ಲಿಂಪ್ಸ್‌ ಔಟ್‌

Mahakali Glimpse: ಪ್ಸ್ ಧರ್ಮ ಮತ್ತು ಅಧರ್ಮದ ನಡುವಿನ ಪ್ರಬಲ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆ. ಅಸುರರ ಪರಮಗುರು ಶುಕ್ರಚಾರ್ಯರ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಗುರುತೇ ಸಿಗದಂತಹ ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಆಕರ್ಷಣೆಯಾಗಿದೆ. ಚಿತ್ರದಲ್ಲಿ ಭೂಮಿ ಶೆಟ್ಟಿ, ಅಕ್ಷಯ್ ಖನ್ನಾ, ಶ್ರಿಯಾ ರೆಡ್ಡಿ, ರೋಹಿತ್ ಸರಾಫ್ ಅವರೊಂದಿಗೆ ಖುಷ್ಬೂ ಸುಂದರ್, ಸಮುದ್ರಖಣಿ, ರಾಕೇಶ್ ಬೇಡಿ, ಜಿತಿನ್ ಗುಲಾಟಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್ ಮತ್ತು ಬಬ್ಲೂ ಪೃಥ್ವಿರಾಜ್ ಸೇರಿದಂತೆ ಬಹುಭಾಷೆಯ ದೊಡ್ಡ ತಾರಾಗಣವೇ ನಟಿಸಿದೆ.

ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ; ‘ಮಹಾಕಾಳಿ’ ಗ್ಲಿಂಪ್ಸ್‌ ಔಟ್‌

'ಮಹಾಕಾಳಿ' ಗ್ಲಿಂಪ್ಸ್‌ -

Yashaswi Devadiga
Yashaswi Devadiga Aug 24, 2026 6:57 PM

'ಹನು-ಮಾನ್' ಸಿನಿಮಾದ ಜಾಗತಿಕ ಯಶಸ್ಸಿನ ನಂತರ ಕ್ರಿಯೇಟಿವ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಅವರ 'ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್' (PVCU) ಅಡಿಯಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಪೌರಾಣಿಕ ದೃಶ್ಯ ವೈಭವದ ಚಿತ್ರ 'ಮಹಾಕಾಳಿ'ಯ (Mahakali Glimpse) ಮೊದಲ ಅಧಿಕೃತ ಗ್ಲಿಂಪ್ಸ್ ಬಿಡುಗಡೆಯಾಗಿದೆ. ' ಶುಕ್ರಚಾರ್ಯಸ್ ವಾರ್‌ಕ್ರೈ' ಹೆಸರಿನಲ್ಲಿ ಬಿಡುಗಡೆಯಾಗಿರುವ ಈ 2 ನಿಮಿಷ 55 ಸೆಕೆಂಡುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ಸಂಚಲನ ಮೂಡಿಸಿದ್ದು, ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಸಿನಿಮಾ 2027ರ ಜನವರಿ 8ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಧರ್ಮ ಮತ್ತು ಅಧರ್ಮದ ನಡುವಿನ ಪ್ರಬಲ ಮಹಾಯುದ್ಧ

ಬಿಡುಗಡೆಯಾಗಿರುವ ಗ್ಲಿಂಪ್ಸ್ ಧರ್ಮ ಮತ್ತು ಅಧರ್ಮದ ನಡುವಿನ ಪ್ರಬಲ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆ. ಅಸುರರ ಪರಮಗುರು ಶುಕ್ರಚಾರ್ಯರ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಗುರುತೇ ಸಿಗದಂತಹ ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಇದನ್ನೂ ಓದಿ: Amruthadhaare serial: ಹಳ್ಳಕ್ಕೆ ಬಿದ್ದ ಕೇಡಿ ಜೇಡಿ! ಪ್ಲ್ಯಾನ್‌ ಫ್ಲಾಪ್ ಮಾಡ್ತಾನಾ ಶಕುನಿ ಮಾವ?

ಅವರ ತೀಕ್ಷ್ಣ ನೋಟ, ಮೈನವಿರೇಳಿಸುವ ಸ್ಕ್ರೀನ್ ಪ್ರೆಸೆನ್ಸ್ ಮತ್ತು "ಅಂತ್ಯ ಆರಂಭವಾಗುತ್ತದೆ" ಎಂಬ ಸಂದೇಶ ಇಡೀ ಜಗತ್ತಿನ ಭವಿಷ್ಯವನ್ನು ನಿರ್ಧರಿಸುವ ದೈವಿಕ ಸಂಘರ್ಷದ ಗಾಂಭೀರ್ಯವನ್ನು ಎತ್ತಿಹಿಡಿದಿದೆ. ಇದರೊಂದಿಗೆ ನಟಿ ಶ್ರಿಯಾ ರೆಡ್ಡಿ ಅವರ ಇರುವಿಕೆಯು ಕಥೆಯ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.

View this post on Instagram A post shared by RKD Studios (@rkdstudios)

ಉನ್ನತ ಗುಣಮಟ್ಟದ ವಿಶ್ಯುವಲ್ ಎಫೆಕ್ಟ್ಸ್ (VFX), ಅದ್ದೂರಿ ಮೇಕಿಂಗ್ ಮೂಲಕ 'ಮಹಾಕಾಳಿ' ಚಿತ್ರವು ಭಾರತೀಯ ಇತಿಹಾಸ ಮತ್ತು ಪುರಾಣಗಳನ್ನು ಅಂತರರಾಷ್ಟ್ರೀಯ ಮಟ್ಟದ ದೃಶ್ಯಕಾವ್ಯವನ್ನಾಗಿ ಪರಿವರ್ತಿಸುವ ಸುಳಿವು ನೀಡಿದೆ. ಆರ್.ಕೆ. ದುಗ್ಗಲ್ ಪ್ರಸ್ತುತಿಯಲ್ಲಿ, ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ಈ ಬೃಹತ್ ಚಿತ್ರವನ್ನು ನಿರ್ಮಿಸುತ್ತಿದ್ದು, ಪೂಜಾ ಅಪರ್ಣಾ ಕೊಲ್ಲೂರು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಭೂಮಿ ಶೆಟ್ಟಿ, ಅಕ್ಷಯ್ ಖನ್ನಾ, ಶ್ರಿಯಾ ರೆಡ್ಡಿ, ರೋಹಿತ್ ಸರಾಫ್ ಅವರೊಂದಿಗೆ ಖುಷ್ಬೂ ಸುಂದರ್, ಸಮುದ್ರಖಣಿ, ರಾಕೇಶ್ ಬೇಡಿ, ಜಿತಿನ್ ಗುಲಾಟಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್ ಮತ್ತು ಬಬ್ಲೂ ಪೃಥ್ವಿರಾಜ್ ಸೇರಿದಂತೆ ಬಹುಭಾಷೆಯ ದೊಡ್ಡ ತಾರಾಗಣವೇ ನಟಿಸಿದೆ.

ಇದನ್ನೂ ಓದಿ: Vishwanath and Sons : 100 ಕೋಟಿ ರೂ. ಬಾಚಿದ ‘ವಿಶ್ವನಾಥ್ ಆ್ಯಂಡ್ ಸನ್ಸ್’; ಸೂರ್ಯ-ಮಮಿತಾ ಬೈಜು ಜೋಡಿಗೆ ಫ್ಯಾನ್ಸ್‌ ಫಿದಾ

ತಾಂತ್ರಿಕ ವಿಭಾಗದಲ್ಲಿ ಸ್ಮರಣ್ ಸಾಯಿ ಸಂಗೀತ ನಿರ್ದೇಶನವಿದ್ದು, ಸುರೇಶ್ ರಗಟು ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.