ʻವಾರಣಾಸಿʼ ಚಿತ್ರದ ಶೂಟಿಂಗ್‌ಗಾಗಿ ಗಂಡ - ಮಗಳೊಂದಿಗೆ ಹೈದರಾಬಾದ್‌ಗೆ ಬಂದಿಳಿದ ನಟಿ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿಯೊಂದಿಗೆ ಹೈದರಾಬಾದ್‌ಗೆ ಆಗಮಿಸಿದ್ದು, ವಿಡಿಯೋ ವೈರಲ್ ಆಗಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಹಾಗೂ ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಶೂಟಿಂಗ್‌ಗಾಗಿ ಅವರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.
-
ಹಾಲಿವುಡ್ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿ ಅವರೊಂದಿಗೆ ಭಾನುವಾರ (ಜುಲೈ 26) ಹೈದರಾಬಾದ್‌ಗೆ ಆಗಮಿಸಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಿಂದ ಈ ಕುಟುಂಬ ಹೊರಬರುತ್ತಿರುವ ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
44 ವರ್ಷದ ಪ್ರಿಯಾಂಕಾ ಚೋಪ್ರಾ ಅವರು ಭಾರತಕ್ಕೆ ಭೇಟಿ ನೀಡಿರುವ ಉದ್ದೇಶವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲವಾದರೂ, ಮಹೇಶ್ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಮತ್ತು ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಶೂಟಿಂಗ್‌ಗಾಗಿ ಅವರು ಹೈದರಾಬಾದ್‌ಗೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಮಂದಾಕಿನಿ' ಪಾತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಕಂಬ್ಯಾಕ್
2019ರಲ್ಲಿ ಬಿಡುಗಡೆಯಾದ 'ದಿ ಸ್ಕೈ ಈಸ್ ಪಿಂಕ್' ಚಿತ್ರದ ನಂತರ ಪ್ರಿಯಾಂಕಾ ಅವರು ಭಾರತೀಯ ಚಿತ್ರರಂಗದಿಂದ ದೂರವಿದ್ದರು. ಈಗ 'ವಾರಣಾಸಿ' ಚಿತ್ರದ ಮೂಲಕ ಭಾರತೀಯ ತೆರೆಯ ಮೇಲೆ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಪ್ರಿಯಾಂಕಾ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಅವರ 'ಮಂದಾಕಿನಿ' ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿತ್ತು. ಕಪ್ಪು ಉಡುಪಿನಲ್ಲಿ, ಕೈಯಲ್ಲಿ ಬಂದೂಕು ಹಿಡಿದು ಗಂಭೀರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಅವರ ಪೋಸ್ಟರ್ ಭಾರಿ ವೈರಲ್ ಆಗಿತ್ತು. ಈ ಚಿತ್ರದ ಶೀರ್ಷಿಕೆಯನ್ನು ಕಳೆದ ವರ್ಷ ನವೆಂಬರ್ 15ರಂದು ಹೈದರಾಬಾದ್‌ನಲ್ಲಿ ನಡೆದ 'ಗ್ಲೋಬ್‌ಟ್ರೋಟರ್' ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಘೋಷಿಸಲಾಗಿತ್ತು.
ಹೈದರಾಬಾದ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಫ್ಯಾಮಿಲಿ
#TFNExclusive: Global icon #PriyankaChopra, along with her husband #NickJonas, makes a stylish arrival in Hyderabad! 📸❤️#Varanasi #TeluguFilmNagar pic.twitter.com/Il4sCf4NBr
— Telugu FilmNagar (@telugufilmnagar) July 26, 2026
ವಿಮಾನ ನಿಲ್ದಾಣದಲ್ಲಿ ಸಿಂಪಲ್ ಅಂಡ್ ಕ್ಲಾಸಿ ಲುಕ್
ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಿಯಾಂಕಾ ಚೋಪ್ರಾ ಅವರು ಡಾರ್ಕ್ ಬ್ರೌನ್ ಕೋ-ಆರ್ಡ್ ಸೆಟ್, ಕ್ಯಾಪ್ ಹಾಗೂ ಸನ್‌ಗ್ಲಾಸ್ ಧರಿಸಿ ಸರಳ ಲುಕ್‌ನಲ್ಲಿ ಕಂಗೊಳಿಸಿದರು. ಪತಿ ನಿಕ್ ಜೋನಾಸ್ ಸಂಪೂರ್ಣ ಕಪ್ಪು ಉಡುಪಿನಲ್ಲಿ ಮಗಳು ಮಾಲ್ತಿ ಮೇರಿಯನ್ನು ಎತ್ತಿಕೊಂಡು ಸಾಗುತ್ತಿರುವುದು ಕಂಡುಬಂತು.
Priyanka Chopra: ಮಗಳ ಗಿಫ್ಟ್ ಕಂಡು ಭಾವುಕ ಪೋಸ್ಟ್ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ !
ಬಿಡುಗಡೆ ಯಾವಾಗ?
ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಕಾಂಬಿನೇಷನ್‌ನ ಹಾಗೂ ರಾಜಮೌಳಿ ನಿರ್ದೇಶನದ ವಾರಣಾಸಿ ಸಿನಿಮಾವು 2027ರ ಏಪ್ರಿಲ್ 7 ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, 2016ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಪ್ರಿಯಾಂಕಾ ಮತ್ತು ನಿಕ್ ಜೋನಾಸ್, 2017ರ 'ಮೆಟ್ ಗಾಲಾ'ದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 2018ರಲ್ಲಿ ವಿವಾಹವಾದ ಈ ಜೋಡಿಗೆ ಜನವರಿ 2022ರಲ್ಲಿ ಮಗಳು ಮಾಲ್ತಿ ಮೇರಿ ಜನಿಸಿದ್ದಾಳೆ.