ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ವೇದಿಕೆಯಲ್ಲಿ ಸೈಕ್ ರೈಮಿಂಗ್! ಚಂದನ್‌ ಶೆಟ್ಟಿ ತಬ್ಬಿಬ್ಬು, ಯಾರಿದು Modern ಬರಹಗಾರ ಮಹಾಕವಿ ಮಂಜ?

Bigg Boss : ಆಗಸ್ಟ್‌ 16 ನಾಳೆಯಿಂದ ‘ಬಿಗ್ ಬಾಸ್ ಅಗ್ನಿಪರೀಕ್ಷೆ ಪ್ರಸಾರವಾಗಲಿದೆ. ಲಕ್ಷಾಂತರ ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಅಳೆದು-ತೂಗಿ ಒಟ್ಟು 60 ಸ್ಪರ್ಧಿಗಳನ್ನು ಅಗ್ನಿಪರೀಕ್ಷೆ ರೌಂಡ್‌ಗೆ ಆಯ್ಕೆ ಮಾಡಲಾಗಿದೆ. ಆದರೆ ಬಿಗ್‌ಬಾಸ್ ಅಗ್ನಿಪರೀಕ್ಷೆ ಅಂದುಕೊಂಡಷ್ಟು ಸುಲಭವಲ್ಲ. Modern ಬರಹಗಾರ ಮಹಾಕವಿ ಮಂಜ' ಎಂಬ ಸ್ಪರ್ಧಿ ತನ್ನ ವಿಶಿಷ್ಟ ರ್ಯಾಪ್, ಮಿಮಿಕ್ರಿ ಮತ್ತು ಪಂಚ್ ಡೈಲಾಗ್‌ಗಳಿಂದ ಗಮನ ಸೆಳೆದಿದ್ದಾರೆ.

ವೇದಿಕೆಯಲ್ಲಿ ಸೈಕ್ ರೈಮಿಂಗ್! ಯಾರಿದು Modern ಬರಹಗಾರ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Aug 15, 2026 7:19 PM

‘ಬಿಗ್ ಬಾಸ್’ ಹವಾ (Bigg boss Kannada 13) ಶುರು . ‘ಬಿಗ್ ಬಾಸ್ ಕನ್ನಡ 13’ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಆಗಸ್ಟ್‌ 16 ನಾಳೆಯಿಂದ ‘ಬಿಗ್ ಬಾಸ್ ಅಗ್ನಿಪರೀಕ್ಷೆ (Bigg Boss agnipariskhe) ಪ್ರಸಾರವಾಗಲಿದೆ. ಲಕ್ಷಾಂತರ ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಅಳೆದು-ತೂಗಿ ಒಟ್ಟು 60 ಸ್ಪರ್ಧಿಗಳನ್ನು ಅಗ್ನಿಪರೀಕ್ಷೆ ರೌಂಡ್‌ಗೆ ಆಯ್ಕೆ ಮಾಡಲಾಗಿದೆ. ಆದರೆ ಬಿಗ್‌ಬಾಸ್ ಅಗ್ನಿಪರೀಕ್ಷೆ ಅಂದುಕೊಂಡಷ್ಟು ಸುಲಭವಲ್ಲ. Modern ಬರಹಗಾರ ಮಹಾಕವಿ ಮಂಜ' (Modern Mahakavi Manja) ಎಂಬ ಸ್ಪರ್ಧಿ ತನ್ನ ವಿಶಿಷ್ಟ ರ್ಯಾಪ್, ಮಿಮಿಕ್ರಿ ಮತ್ತು ಪಂಚ್ ಡೈಲಾಗ್‌ಗಳಿಂದ ಗಮನ ಸೆಳೆದಿದ್ದಾರೆ. ಈ ಪ್ರೋಮೋ ಔಟ್‌ ಆಗಿದೆ.

ಅಚ್ಚ ಕನ್ನಡ ಪದ ಬಳಕೆಕಾರ

ಮಾಡರ್ನ್‌ ಬರಹಗಾರ ಮಹಾಕವಿ ಮಂಜ ಎಂಟ್ರಿಯೇ ಮಸ್ತಾಗಿತ್ತು. ಉಗೇ ಮಾದಪ್ಪ ಅಂತ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ನಾನು ಆ ಥರ ಈ ಥರ ಅಂತ ಥರಾ ಥರಾ ಜನಗಳ ನಡುವೆ ಅಚ್ಚ ಕನ್ನಡ ಪದ ಬಳಕೆಕಾರ ಅಂತ ಶುರು ಮಾಡಿದ್ದಾರೆ.

ಇದನ್ನೂ ಓದಿ: Kannada Serial: ಕನ್ನಡ ಕಿರುತೆರೆಯಲ್ಲಿ ವೀಕ್ಷಕರು ಇಷ್ಟ ಪಡೋ ಧಾರಾವಾಹಿ ಇದೊಂದೇ ಅಂತೆ! ಕಾರಣ ಇದು

ನಾನು ಬರೆಯೋ ಪ್ರತಿ ಬರಹದಲ್ಲೂ ಟೈಮಿಂಗ್‌, ರೈಮಿಂಗ್‌ ಇರುತ್ತೆ. ಯಾಕಂದ್ರೆ ನನ್ನ ಥಿಂಕಿಂಗ್‌ ಹಾಗೆ ಇರುತ್ತೆ. ತನ್ನದೇ ಶೈಲಿಯ ರ್ಯಾಪ್ ಕವನಗಳ ಮೂಲಕ 'ಬರ್ಗೆಟ್ಟ ಬಾಳಲ್ಲಿ ಬೇಜಾನ್ ಬೆಂದೋಗಿದ್ದೀನಿ, ಕನಸು ನನಸಾಗದೆ ಕಣ್ಣೀರಲ್ಲೇ ನೆಂದೋಗಿದ್ದೀನಿ... ಮೇಡ್ ಇನ್ ಕರ್ನಾಟಕ, ಸೈಕಾಗಿ ಬಂದಿದ್ದೀನಿ!' ಎಂದೂ ಹೇಳಿದ್ದಾರೆ.

ಕವನಗಳನ್ನು ನೋಡಿ ನೆಟ್ಟಿಗರು ಕಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಾಡರ್ನ್‌ ಮಹಾಕವಿ ಮಂಜ ಸೆಲೆಕ್ಟ್‌ ಆಗ್ತಾರಾ ಅನ್ನೋ ಕುತೂಹಲವೀಕ್ಷಕರಲ್ಲಿದೆ.

Bigg Boss Kannada-13 ಅಗ್ನಿ ಪರೀಕ್ಷೆ ಆಗಸ್ಟ್ 16ರಂದು ಪ್ರಾರಂಭವಾಗಲಿದೆ. ಇದು ಜನಸಾಮಾನ್ಯರನ್ನು ಆಯ್ಕೆ ಮಾಡುವ ವಿಶೇಷ ಪ್ರಕ್ರಿಯೆಯಾಗಿದೆ. ಈಗಾಗಲೇ 60 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಿ ಅಗ್ನಿಪರೀಕ್ಷೆಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: Bigg Boss Kannada 13: ಅಪ್ಪನಾ? ಮಗನಾ? ಅಗ್ನಿಪರೀಕ್ಷೆಗೆ ಎಂಟ್ರಿ ಯಾರದ್ದು?

ಇವರಲ್ಲಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲು ಯಾರು ಅಸಾಮಾನ್ಯರು ಎಂಬುದನ್ನು ಆಯ್ಕೆ ಮಾಡಲು ಸಂಗೀತಾ ಶೃಂಗೇರಿ, ವಿನಯ್ ಗೌಡ, ಚಂದನ್ ಶೆಟ್ಟಿ ಮತ್ತು ಶ್ರುತಿ ಜ್ಯೂರಿಗಳ ಸೀಟ್ ಅಲಂಕರಿಸಿದ್ದಾರೆ. ಆಗಸ್ಟ್‌ 16ರಿಂದ ಈ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.