BBT 9: ಬಿಗ್ ಬಾಸ್ ಬಗ್ಗೆ ಬಿಗ್ ಅಪ್ಡೇಟ್: ಈ ಬಾರಿ ಒಂದಲ್ಲ ಎರಡು ಬಿಗ್ ಬಾಸ್ ಮನೆ
ಬಿಗ್ ಬಾಸ್ ತೆಲುಗು ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶೋ ಶುರುವಾಗಲಿದೆಯಂತೆ. ಇದಕ್ಕೂ ಮುನ್ನ ವಾಹಿನಿ ಕಡೆಯಿಂದ ಒಂದೊಂದೆ ಪ್ರೋಮೊ ರಿಲೀಸ್ ಆಗುತ್ತಿದೆ. ಈ ಪ್ರೊಮೋ ಜೊತೆಗೆ ಹೊಸ ಹೊಸ ವಿಚಾರವನ್ನು ಕೂಡ ಹೇಳಲಾಗುತ್ತಿದೆ.

Bigg Boss

ಭಾರತದ ಪ್ರಸಿದ್ಧ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಕನ್ನಡ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಇದೀಗ ಬಿಗ್ ಬಾಸ್ ತೆಲುಗು ಸೀಸನ್ 9 ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಕಿಂಗ್ ಅಕ್ಕಿನೇನಿ ನಾಗಾರ್ಜುನ ಈ ಬಾರಿಯೂ ನಿರೂಪಕರಾಗಿ ಶೋ ನಡೆಸಿಕೊಡಲಿದ್ದಾರೆ. ಈ ಹಿಂದೆ ನಾಗಾರ್ಜುನ ಜಾಗಕ್ಕೆ ವಿಜಯ್ ದೇವರಕೊಂಡ, ಬಾಲಯ್ಯ ಸೇರಿದಂತೆ ಕೆಲ ಸ್ಟಾರ್ಗಳ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಅಕ್ಕಿನೇನಿ ನಾಗಾರ್ಜುನ ಅವರೇ ಈ ಬಾರಿ ಸಾರಥ್ಯ ವಹಿಸಲಿದ್ದಾರೆ.
ಬಿಗ್ ಬಾಸ್ ತೆಲುಗು ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶೋ ಶುರುವಾಗಲಿದೆಯಂತೆ. ಇದಕ್ಕೂ ಮುನ್ನ ವಾಹಿನಿ ಕಡೆಯಿಂದ ಒಂದೊಂದೆ ಪ್ರೋಮೊ ರಿಲೀಸ್ ಆಗುತ್ತಿದೆ. ಈ ಪ್ರೊಮೋ ಜೊತೆಗೆ ಹೊಸ ಹೊಸ ವಿಚಾರವನ್ನು ಕೂಡ ಹೇಳಲಾಗುತ್ತಿದೆ. ವಿಶೇಷ ಎಂದರೆ ಈ ಬಾರಿ ತೆಲುಗು ದೊಡ್ಮನೆಯೊಳಗೆ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೆ, ಸಾಮಾನ್ಯರಿಗೂ ಸ್ಪರ್ಧಿಗಳಾಗಿ ಪ್ರವೇಶಿಸಲು ಅವಕಾಶವಿದೆ.
ಇದರ ಜೊತೆಗೆ ಮತ್ತೊಂದು ದೊಡ್ಡ ವಿಚಾರ ಹೊರಬಿದ್ದಿದೆ. ಅದೇನೆಂದರೆ ಈ ಬಾರಿ ಬಿಗ್ ಬಾಸ್ ಮನೆ ಒಂದಲ್ಲ.. ಎರಡು ಇರಲಿದೆಯಂತೆ. ಹೌದು, ಈ ರೀತಿ ಅನುಮಾನ ಹುಟ್ಟಲು ಕಾರಣವಾಗಿದ್ದು ಹೊಸ ಪ್ರೊಮೋ. ಈ ಹೊಸ ಪ್ರೊಮೋದಲ್ಲಿ ಟಾಲಿವುಡ್ ಸ್ಟಾರ್ ಹಾಸ್ಯನಟ ವೆನ್ನೆಲಾ ಕಿಶೋರ್ ಮತ್ತು ನಾಗಾರ್ಜುನ ನಡುವಿನ ಸಂಭಾಷಣೆಗಳ ನಡುವೆ ಈ ಬಾರಿ ಬಿಗ್ ಬಾಸ್ ಹೇಗಿರುತ್ತದೆ ಎಂಬುದರ ಕುರಿತು ಆಯೋಜಕರು ಸುಳಿವು ನೀಡಿದ್ದಾರೆ.
ಪ್ರೊಮೋದಲ್ಲಿ ನಾಗಾರ್ಜುನ ಅವರು, ಈ ಬಾರಿ ಡಬಲ್ ಹೌಸ್-ಡಬಲ್ ಡೋಸ್ ಎಂದು ಹೇಳುತ್ತಾರೆ, ಈ ಬಾರಿ ಚದುರಂಗವಲ್ಲ.. ಈ ಬಾರಿ ಯುದ್ಧ ಎಂದು ಕೂಡ ಪವರ್‌ಫುಲ್ ಡೈಲಾಗ್ ಹೇಳಿದ್ದಾರೆ. ಈ ಮೂಲಕ ಬಿಗ್ ಬಾಸ್‌ನಲ್ಲಿ ಹೊಸ ನಿಯಮಗಳನ್ನು ನಿಗದಿಪಡಿಸಲಾಗುತ್ತದೆಯೇ ಎಂಬ ಬಗ್ಗೆ ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿದೆ. ಡಬಲ್ ಹೌಸ್ ಎಂದರೆ ಎರಡು ಬಿಗ್ ಬಾಸ್ ಮನೆಗಳೇ? ಸಾಮಾನ್ಯರಿಗೆ ಪ್ರತ್ಯೇಕ ಯೋಜನೆಗಳಿವೆಯೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆಯಾಗಿ, ಕಿಂಗ್ ಅಕ್ಕಿನೇನಿ ನಾಗಾರ್ಜುನ ಇತ್ತೀಚಿನ ಪ್ರೋಮೋದೊಂದಿಗೆ ಬಿಗ್ ಬಾಸ್ ತೆಲುಗು ಸೀಸನ್ 9 ರ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿದ್ದಾರೆ. ಬಿಗ್ ಬಾಸ್ 9 ಬಿಡುಗಡೆ ದಿನಾಂಕ.. ಸ್ಪರ್ಧಿಗಳ ವಿವರಗಳ ಕುರಿತ ಮಾಹಿತಿ ಶೀಘ್ರದಲ್ಲೇ ಬರುವ ಸಾಧ್ಯತೆಯಿದೆ.
BB 19: ಬಿಗ್ ಬಾಸ್ಗೆ ಬರಲಿದ್ದಾರೆ ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ನೌಕಾ ಅಧಿಕಾರಿಯ ಪತ್ನಿ?